ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ಪಾಕಿಸ್ತಾನ ಹೇಳಿದ್ದೇನು?

Recommended Video

      ಪಾಪ ಭಾರತ ಬಡ ದೇಶ ಎಂದ ಪಾಕಿಸ್ತಾನ..? | Chandrayaan 2 | Oneindia Kannada

      ‌ಇಸ್ಲಾಮಾಬಾದ್, ಸೆಪ್ಟೆಂಬರ್ 07: ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ಇಡೀ ಭಾರತವೂ ನಿರಾಸೆ ಅನುಭವಿಸುತ್ತಿದ್ದರೆ ಪಾಕಿಸ್ತಾನ 'ವಿಘ್ನಸಂತೋಷ' ಅನುಭವಿಸಿ ಬೀಗುತ್ತಿದೆ!

      ಅದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, "ದಯವಿಟ್ಟು ನಿದ್ದೆ ಮಾಡಿ. ನೀವು ಕಳಿಸಿದ್ದ 'ಬೊಂಬೆ' ಚಂದ್ರನಲ್ಲಿ ಲ್ಯಾಂಡ್ ಆಗುವ ಬದಲು ಮುಂಬೈಯಲ್ಲಿ ಲ್ಯಾಂಡ್ ಆಗಿದೆ. ಭಾರತ ಸೋತಿದೆ(IndiaFailed)" ಎಂದು ಟ್ವೀಟ್ ಮಾಡಿದ್ದಾರೆ.

      Pakistan Ministers Reaction On Chandrayaan -2 Lost Communication

      ಅವರ ಈ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಪ್ರತಿಕ್ರಿಯೆ ನೀಡಿದ ಹುಸೇನ್, "ನನ್ನ ಟ್ವೀಟ್ ಅನ್ನು ಟ್ರೋಲ್ ಮಾಡಿದ ಭಾರತೀಯರ ಪ್ರತಿಕ್ರೆಯೆಗೆ ನನಗೆ ಅಚ್ಚರಿಯಾಗುತ್ತಿದೆ! ಅವರೆಲ್ಲ ನಾನೇ ಚಂದ್ರಯಾನದ ಸೋಲಿಗೆ ಕಾರಣವೇನೋ ಎಂಬಂತೆ ಟ್ವೀಟ್ ಮಾಡಿದ್ದಾರೆ. ಭಾರತೀಯ ಸಂಸತ್ತು ಈ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡಬೇಕು. ಅವರು ರಾಜಕಾರಣಿಯಾಗಿ ಖಳಗೋಳಶಾಸ್ತ್ರಜ್ಞರು ಎಂಬಂತೆ ಪೋಸು ನೀಡಿದ್ದಾರೆ! 'ಬಡ ದೇಶ'ದ ಜನರ ಭಾರೀ ಹಣವನ್ನು ವ್ಯರ್ಥಮಾಡಿದ್ದಾರೆ" ಎಂದು ಫವಾದ್ ಹುಸೇನ್ ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+