ಇದಪ್ಪಾ ವರಸೆ: ಪಾಕಿಸ್ತಾನ ಗಲಾಟೆಗೆ ಭಾರತ ಕಾರಣವಂತೆ!

ರಾವಲ್ಪಿಂಡಿ: ಮನೆಹಾಳು ಪಾಕಿಸ್ತಾನಿ ಸೇನೆಗೆ ಭಯೋತ್ಪಾದಕರನ್ನ ಬೆಳೆಸುವುದು ಬಿಟ್ಟು ಬೇರೆ ಗೊತ್ತಿಲ್ಲ. ಹಾಗೇ ತನ್ನ ದೇಶದಲ್ಲಿ ಏನೇ ಆದರೂ ಭಾರತವನ್ನ ಟಾರ್ಗೆಟ್ ಮಾಡದೆ ಬಿಡಲ್ಲ. ಈಗ ಕೂಡ ಅಷ್ಟೇ, ಇಮ್ರಾನ್ ಅರೆಸ್ಟ್ ಆದ ಮೇಲೆ ಪಾಕ್‌ನಲ್ಲಿ ಉಂಟಾದ ಹಿಂಸೆಗೆ ಭಾರತ ಕಾರಣವಂತೆ, ಹೀಗೆ ತಿಕ್ಕಲು ಹೇಳಿಕೆ ನೀಡಿದೆ. ಅಸಲಿಗೆ ಪಾಕಿ ಸೇನೆ ಹೇಳಿದ್ದೇನು? ತಿಳಿಯೋಣ ಬನ್ನಿ.

ಪಾಕಿಸ್ತಾನ್ ಸೇನೆಗೆ ಭಾರತ ಕಂಡರೆ ಆಗಲ್ಲ, 1947, 1965, 1971 & 1999ರಲ್ಲಿ ಭಾರತ ಸರಿಯಾಗೇ ಕೊಟ್ಟಿದೆ. ಇಷ್ಟಾದರೂ ಭಾರತದ ವಿರುದ್ಧ ಮಾತನಾಡುವುದನ್ನ ನಿಲ್ಲಿಸುತ್ತಿಲ್ಲ. ಅದರಲ್ಲೂ 1971 ಇಂದಿರಾ ಗಾಂಧಿ ಆಡಳಿತ ಇದ್ದಾಗ, ಅರ್ಧ ಪಾಕಿಸ್ತಾನವನ್ನೇ ಭಾರತ ಕಬ್ಜ ಮಾಡಿತ್ತು. ಆದರೆ ಅಂತಾರಾಷ್ಟ್ರೀಯವಾಗಿ ಸಮಸ್ಯೆ ದೊಡ್ಡದಾಗಿ ಭಾರತದ ಎದುರು ಅಮೆರಿಕ ಮತ್ತಿತರ ರಾಷ್ಟ್ರಗಳು ಪರಿಪರಿಯಾಗಿ ಕೇಳಿಕೊಂಡ ಕಾರಣ ಯುದ್ಧ ನಿಂತಿತ್ತು. ಹೀಗೆ ಭಾರತದಿಂದ ಪದೇ ಪದೆ ಸರಿಯಾಗಿ ಒದೆ ತಿಂದರೂ ಪಾಕಿ ಸೇನೆಗೆ ಇನ್ನೂ ಬುದ್ಧಿ ಬರುತ್ತಿಲ್ಲ.

Pakistan military indirectly alleged on Indian army about pak violence

ಭಾರತೀಯ ಸೇನೆ ಮೇಲೆ ಆರೋಪ?

ಹೌದು, ಪಾಕಿಸ್ತಾನ ಸೇನೆ ಈಗ ಮಾಡಿರುವ ಗಂಭೀರ ಆರೋಪ ಏನೆಂದರೆ ಪಾಕಿಗಳ ನೆಲದಲ್ಲಿ ಉಂಟಾದ ಹಿಂಸೆಗೆ ಅದರ ಶತ್ರುಗಳೇ ಕಾರಣವಂತೆ. 75 ವರ್ಷದಲ್ಲಿ ಮಾಡಲು ಆಗದೇ ಇದ್ದಿದ್ದನ್ನು ಈಗ ಮಾಡುತ್ತಿದ್ದಾರೆ ಎಂದಿದೆ ಪಾಕಿ ಸೇನೆ. ಈ ಮೂಲಕ ಪರೋಕ್ಷವಾಗಿ ಭಾರತದ ವಿರುದ್ಧ ಆರೋಪ ಮಾಡಿದೆ. ಕೈಲಾಗದೇ ಇರುವವನು, ಮೈ ಪರೆಚಿಕೊಂಡ ಎಂಬಂತಹ ಪರಿಸ್ಥಿತಿ ಪಾಕಿಸ್ತಾನಿ ಸೇನೆಗೆ ಎದುರಾಗಿದೆ. ಪಾಕಿ ಸೇನೆ ಮಾಡಿದ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ, ಖುದ್ದು ಪಾಕಿಸ್ತಾನಿ ಪ್ರಜೆಗಳೇ ಪಾಕ್ ಸೇನೆ ವಿರುದ್ಧ ಕೆಂಡ ಕಾರುತ್ತಿದ್ದಾರೆ.

1947, 1965, 1971 & 1999ರಲ್ಲಿ ಗುನ್ನ!

ಅಂದಹಾಗೆ ಪಾಕಿಸ್ತಾನ ಉಗ್ರರನ್ನ ಬೆಳೆಸುವುದು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಆರೋಪ ಇಡೀ ಜಗತ್ತಿನಾದ್ಯಂತ ಮನೆಮಾಡಿದೆ. ಅದರಲ್ಲೂ 1947, 1965, 1971 & 1999ರಲ್ಲಿ ಭಾರತದ ವಿರುದ್ಧ ಯುದ್ಧಕ್ಕೆ ಬಂದು, ಸರಿಯಾಗಿ ಗುಮ್ಮಿಸಿಕೊಂಡು ಹೋಗಿದೆ. ಇಷ್ಟಾದರೂ ತನ್ನ ಕುತಂತ್ರ ಬುದ್ಧಿ ಬಿಡದ ಪಾಕಿಗಳ ಸೇನೆ ಅವಕಾಶ ಸಿಕ್ಕಾಗೆಲ್ಲಾ ಭಾರತದ ಮೇಲೆ ಆರೋಪ ಮಾಡುತ್ತೆ. ಇದರಿಂದ ಎರಡೂ ರಾಷ್ಟ್ರಗಳ ಮಧ್ಯೆ ಬಿರುಕು ಇನ್ನಷ್ಟು ಹೆಚ್ಚಾಗುತ್ತಿದೆ.

Pakistan military indirectly alleged on Indian army about pak violence

ಇಮ್ರಾನ್ ಬೆಂಬಲಿಗರು ಕಂಬಿ ಹಿಂದೆ!

ಹೌದು, ಪಾಕಿಸ್ತಾನದ ಸೇನೆ ಅದೆಷ್ಟ ಕ್ರೂರವಾಗಿ ಈ ಪರಿಸ್ಥಿತಿ ನಿಭಾಯಿಸುತ್ತಿದೆ ಅಂದ್ರೆ ಮುಲಾಜು ನೋಡದೆ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ಈಗಾಗಲೇ ಹತ್ತಾರು ಜನ ಸೇನೆ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಕಿಚ್ಚು ಮಾತ್ರ ಆರುತ್ತಿಲ್ಲ. ಪ್ರತಿಭಟನೆ ಜೋರಾಗುತ್ತಿರುವುದು ಪಾಕಿಸ್ತಾನದ ಸೇನಾ ನಾಯಕರ ಬುಡ ಅಲ್ಲಾಡಿಸುತ್ತಿದೆ. ಈ ಕಾರಣಕ್ಕೆ ಇಮ್ರಾನ್ ಖಾನ್ ಬೆಂಬಲಿಗರನ್ನ ಅರೆಸ್ಟ್ ಮಾಡಿ, ಜೈಲಿಗೆ ಹಾಕುತ್ತಿದ್ದಾರೆ. ಆದರೂ ಹೋರಾಟ ನಿಲ್ಲುತ್ತಿಲ್ಲ, ಬಲದಾಗಿ ಪ್ರತಿಭಟನೆ ತೀವ್ರವಾಗುತ್ತಿದೆ.

ಮಹಿಳೆಯರ ಮೇಲೆ ಪಾಕ್ ಸೇನೆ ಪೌರುಷ

ಇಮ್ರಾನ್ ಖಾನ್ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಂತೆ ಪಾಕಿಸ್ತಾನ ಮಿಲಿಟರಿ & ಐಎಸ್‌ಐ ಹೊಸ ಆಟ ಶುರುಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಲಾಹೋರ್‌ನ ಇಮ್ರಾನ್ ಮನೆ ಮೇಲೆ ನಿರಂತರ ಶೆಲ್ ದಾಳಿ ನಡೆಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ ಕೈವಾಡವಿದೆ ಎಂದು ಖಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಪರಿಣಾಮ ಪಾಕಿಸ್ತಾನದ ಬೀದಿಗಳಲ್ಲಿ ಇನ್ನಷ್ಟು ರಕ್ತ ಹರಿಯುವುದು ಪಕ್ಕಾ ಆಗಿದೆ. ಇಮ್ರಾನ್ ಖಾನ್ ಹೆಂಡತಿ ಜೀವ ಭಯದಲ್ಲೇ ಒಂಟಿಯಾಗಿ ಮನೆಯಲ್ಲಿ ನರಳುತ್ತಿದ್ದಾರಂತೆ.

10 ಜನರ ಹೆಣ ಬಿದ್ದರೂ ತೃಪ್ತಿ ಆಗಿಲ್ವಾ?

ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕಿಸ್ತಾನ ಸೇನೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿರುವ ಆರೋಪ ಈಗ ಕೇಳಿಬಂದಿದೆ. ಹೌದು ಭೀಕರ ಹಿಂಸಾಚಾರದಲ್ಲಿ 10 ಜನ ಮೃತಪಟ್ಟರೂ ಪಾಕಿಸ್ತಾನ ಸೇನೆಗೆ ಇನ್ನೂ ನೆಮ್ಮದಿ ಸಿಕ್ಕಿಲ್ವಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗಳ ನಡುವೆ ಒಂಟಿ ಮಹಿಲೆ ಮೇಲೆಯೂ ಭೀಕರವಾಗಿ ಶೆಲ್ ದಾಳಿ ನಡೆಸುತ್ತಿದೆ ನಾಚಿಕೆ ಬಿಟ್ಟ ಪಾಕ್ ಸೇನೆ.

ಪಾಕಿಸ್ತಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ರನ್ನ ಇಸ್ಲಾಮಾಬಾದ್‌ ಕೋರ್ಟ್ ಎದುರು ಹಾಜರುಪಡಿಸಲು ಸಿದ್ಧತೆ ಸಾಗಿದೆ. ಇಮ್ರಾನ್ ಪಾಕಿಸ್ತಾನ ರಾಜಧಾನಿಗೆ ಕಾಲಿಟ್ಟ ತಕ್ಷಣ ಹೋರಾಟಕ್ಕೆ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಬಿಗಿ ಭದ್ರತೆ ಜೊತೆಗೆ, ಪ್ರತಿಭಟನೆ ನಿಯಂತ್ರಣಕ್ಕೆ ಜನರ ಮೇಲೆ ಗುಂಡು ಹಾರಿಸಲಾಗುತ್ತಿದೆ. ಭ್ರಷ್ಟಾಚಾರದ ಬಲೆಯಲ್ಲಿ ಸಿಲುಕಿ ಇಮ್ರಾನ್ ಖಾನ್ ಜೈಲುಹಕ್ಕಿಯಾಗಿದ್ದು, ಇಮ್ರಾನ್ ಜೀವಕ್ಕೆ ಅಪಾಯ ಇದೆ ಎಂದು ಬೆಂಬಲಿಗರು ಆರೋಪಿಸುತ್ತಿದ್ದಾರೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಖಾನ್ ಬೆಂಬಲಿಗರು ಹೇಳುತ್ತಿರುವ ವಿಚಾರವೇ ಬೇರೆ.

ಯಾರೇ ಮಾತನಾಡಿದ್ರೂ ಜೈಲಿಗೆ!

ISI ಅಂದರೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್, ಇದು ಪಾಕಿಸ್ತಾನವನ್ನೇ ಕಂಟ್ರೋಲ್ ಮಾಡುತ್ತದೆ. ಈ ಸಂಸ್ಥೆ ಪಾಕ್ ಆಂತರಿಕ ಭದ್ರತೆ ನೋಡಿಕೊಳ್ಳುವ ಗೂಢಚಾರಿ ಸಂಘಟನೆ. ಅದ್ರಲ್ಲೂ ಭಾರತದಲ್ಲಿ ನಡೆಯೋ ಟೆರರ್ ಆಕ್ಟಿವಿಟಿಗಳ ಹಿಂದೆ ಪಾಕಿಸ್ತಾನಿ ISI ಕೈವಾಡ ಪದೇ ಪದೆ ಸಾಬೀತಾಗಿದೆ. ಇಂತಹ ಸಂಸ್ಥೆ ವಿರುದ್ಧ ಬೆಳಗ್ಗೆ ಇಮ್ರಾನ್ ರೊಚ್ಚಿಗೆದ್ದು ವಿಡಿಯೋ ಮಾಡಿದ್ರು. ವಿಡಿಯೋದಲ್ಲಿ ಐಎಸ್‌ಐ ಅಧಿಕಾರಿಗಳ ಭ್ರಷ್ಟ ವ್ಯವಸ್ಥೆ & ಪಾಕಿಸ್ತಾನಕ್ಕೆ ಅವರು ಮಾಡ್ತಿತ್ತಿರುವ ಮೋಸ ಎಂಥದ್ದು ಎಂದು ಬೈದಿದ್ರು ಇಮ್ರಾನ್. ದುರಾದೃಷ್ಟ ಏನಂದ್ರೆ ಹೀಗೆ ಇಮ್ರಾನ್ ವಿಡಿಯೋ ಮಾಡಿ 3 ಗಂಟೆ ಕಳೆಯುವ ಹೊತ್ತಿಗೆ ಜೈಲು ಸೇರಿದ್ದಾರೆ.

ಇಮ್ರಾನ್ ಬಂಧ ಕಾನೂನು ಬಾಹೀರ!

ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕ್ ಸೇನೆ ಪರದಾಡುತ್ತಿದೆ. ಈ ಕಾರಣಕ್ಕೆ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ಭೀಕರ ಹಿಂಸಾಚಾರದಲ್ಲಿ 10 ಜನ ಮೃತಪಟ್ಟರೂ ಪ್ರತಿಭಟನೆ ಹಿಡಿತಕ್ಕೆ ಸಿಗುತ್ತಿಲ್ಲ. ಇದೇ ಸಂದರ್ಭದಲ್ಲಿ ಇಮ್ರಾನ್ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಖಾನ್ ಬಿಡುಗಡೆಗೆ ಕೌಂಟ್‌ಡೌನ್ ಶುರುವಾದಂತಾಗಿದೆ.

ಒಟ್ನಲ್ಲಿ ಪಾಕಿಸ್ತಾನ ಧಗಧಗ ಹೊತ್ತಿ ಉರಿಯುತ್ತಿದ್ದರೆ, ಈ ಹಿಂಸಾಚಾರ ನಿಭಾಯಿಸಲು ಆಗದ ಪಾಕ್ ಸೇನೆ ಭಗಭಗ ಅಂತಿದೆ. ಒಂದು ಕಡೆ ಸಮಾಧಾನ ಮಾಡಿದ್ರೆ ಮತ್ತೊಂದ್ಕಡೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಕೈಲಿ ಆಗದಿದ್ದರೂ, ಮೈ ಪರಚಿಕೊಳ್ಳುತ್ತಿದೆ ಪಾಕಿಸ್ತಾನಿ ಸೇನೆ. ಭಾರತದ ಮೇಲೆ ಇಂತಹ ಎಷ್ಟೇ ಆರೋಪಗಳನ್ನ ಮಾಡಿದರೂ ಅದು ವರ್ಕೌಟ್ ಆಗಲ್ಲ ಅನ್ನೋದು ಅಷ್ಟೇ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+