ಪಾಕಿಸ್ತಾನದ ಕರಾಚಿ ದುರಂತಕ್ಕೆ ಮಕ್ಕಳು ಸೇರಿ 16 ಜನ ಬಲಿ, ಅನುಮಾನ ಮೂಡಿಸಿದ ಘಟನೆ | Pakistan Military
ಪಾಕಿಸ್ತಾನದ ಕರಾಚಿ ವಸತಿ ಸಮುಚ್ಚಯ ಒಂದರಲ್ಲಿ ಇದೀಗ ಭೀಕರ ದುರಂತ ಸಂಭವಿಸಿದ್ದು, ಇದೇ ದುರಂತಕ್ಕೆ ಸುಮಾರು 16 ಪಾಕಿಸ್ತಾನಿ ಪ್ರಜೆಗಳು ಬಲಿಯಾಗಿದ್ದಾರೆ. ಮಹಿಳೆಯರು & ಮಕ್ಕಳೂ ಸೇರಿ ಒಟ್ಟಾರೆ 16 ಜನ ದುರಂತದಲ್ಲಿ ಜೀವ ಬಿಟ್ಟಿದ್ದಾರೆ. ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣ ಎಂಬ ಮಾಹಿತಿ ಈಗ ಪ್ರಾಥಮಿಕ ಹಂತದಲ್ಲಿ ಸಿಕ್ಕಿದ್ದರೂ ದುರಂತದ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಾ ಇವೆ. ಹೀಗಾಗಿ ಪಾಕಿಸ್ತಾನಿ ಪೊಲೀಸರು & ಭದ್ರತಾ ಸಿಬ್ಬಂದಿ ಅಲರ್ಟ್ ಆಗಿ ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಇಸ್ಲಾಮಾಬಾದ್ ನಗರದ ಮಸೀದಿ ಒಂದರಲ್ಲಿ ಉಗ್ರರು ಭೀಕರವಾದ ದಾಳಿ ನಡೆಸಿದ್ದರು, ಈಗ ನೋಡಿದರೆ ಮತ್ತೆ ಒಂದು ದೊಡ್ಡ ಸ್ಫೋಟ ಸಂಭವಿಸಿರುವುದು ಅನುಮಾನ ಹೆಚ್ಚಿಸಿದೆ.
ಭಾರತದ ನೆರೆಯ ದೇಶ ಪಾಕಿಸ್ತಾನವು ಪದೇ, ಪದೇ ಬೇಡದಿರುವ ವಿಚಾರಗಳಿಗೆ ಸುದ್ದಿಯಲ್ಲಿ ಇರುತ್ತದೆ. ಪಾಕಿಸ್ತಾನಕ್ಕೆ ತನ್ನನ್ನು ತಾನು ಸಾಕಿಕೊಳ್ಳುವ & ರಕ್ಷಿಸಿಕೊಳ್ಳುವ ಯೋಗ್ಯತೆ ಇಲ್ಲದೇ ಇದ್ದರೂ ಅಕ್ಕಪಕ್ಕದ ದೇಶಗಳ ಮೇಲೆ ಕಣ್ಣು ಹಾಕುವ ಕೆಟ್ಟ ಅಭ್ಯಾಸ ಇದೆ. ಉಗ್ರರು ಪಾಕಿಸ್ತಾನದ ಒಳಗಡೆಗೆ ನುಗ್ಗಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದ್ದರೂ ಅದರ ಬಗ್ಗೆ ಕೇರ್ ಮಾಡದ ಅಲ್ಲಿನ ರಾಜಕೀಯ ನಾಯಕರು ಹಾಗೂ ಸರ್ಕಾರ, ಭಾರತದ ಕಿರೀಟ ಕಾಶ್ಮೀರದ ಮೇಲೆ ಕಣ್ಣು ಹಾಕಿ ಪದೇ ಪದೇ ಪೆಟ್ಟು ತಿಂದು ಹೋಗುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಈಗ ಪಾಕಿಸ್ತಾನದ ಕರಾಚಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿ 16 ಜನ ಬಲಿಯಾಗಿದ್ದಾರೆ.

ಭ್ರಷ್ಟ ವ್ಯವಸ್ಥೆಯಲ್ಲಿ ಭೀಕರ ಸ್ಫೋಟ
ಪಾಕಿಸ್ತಾನ ಜನರ ಪರಿಸ್ಥಿತಿ ಹೇಗೆ ಆಗಿದೆ ಎಂದರೆ, ತಾವು ಕಟ್ಟುವ ತೆರಿಗೆಗೆ ವಾಪಸ್ ಕನಿಷ್ಠ ಸೌಲಭ್ಯ ಕೂಡ ಅಲ್ಲಿನ ಜನರಿಗೆ ಸಿಗದ ರೀತಿ ಆಗಿದೆ. ಏಕೆಂದರೆ ಪಾಕಿಸ್ತಾನದಲ್ಲಿ ಭ್ರಷ್ಟ ವ್ಯವಸ್ಥೆ ಅಷ್ಟೊಂದು ಸಮಸ್ಯೆ ಸೃಷ್ಟಿ ಮಾಡುತ್ತಿದ್ದು, ಜನರು ಕೂಡ ಬದುಕಲು ಪರದಾಡುತ್ತಿದ್ದಾರೆ. ಅದೇ ರೀತಿ ಎಲ್‌ಪಿಜಿ ಸಿಲಿಂಡರ್ ಪಡೆಯುವುದು ಕೂಡ ಪರದಾಟದ ಪ್ರಶ್ನೆ ಆಗಿದೆ, ಸಿಲಿಂಡರ್ ಸಿಕ್ಕರೂ ಅದರಲ್ಲಿ ಸಮಸ್ಯೆಗಳ ಸಾಗರವೇ ಇರುತ್ತದೆ. ಪಾಕಿಸ್ತಾನ ನೆಲದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಜೆಗಳು ಹೇಳಿಕೊಂಡರೂ ಅದು ಪ್ರಯೋಜನಕ್ಕೆ ಬರೋದೆ ಇಲ್ಲ.
ಹಲವು ಕಟ್ಟಡಗಳಿಗೆ ಭಾರಿ ಹಾನಿ
ಹೀಗಿದ್ದಾಗ ದಿಢೀರ್ ಕರಾಚಿಯ ಕಟ್ಟಡ ಒಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಬ್ಲಾಸ್ಟ್ ಆಗಿ ಈವರೆಗೆ 16 ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಪಡೆ ಪಾಕಿಸ್ತಾನದಲ್ಲಿ ಪದೇ ಪದೇ ಉಗ್ರರ ದಾಳಿಗಳು ನಡೆಯುತ್ತಿರುವ ಹಿನ್ನೆಲೆ ಈ ಸ್ಫೋಟದ ಬಗ್ಗೆ ಅನುಮಾನ ಕೂಡ ಮೂಡಿದೆ. ಹೀಗಾಗಿಯೇ ಇದೀಗ ತನಿಖೆ ಮುಂದುವರಿದಿದ್ದು, ಸ್ಫೋಟ ಸಂಭವಿಸಿದ ಜಾಗದಲ್ಲಿ ಸುತ್ತಮುತ್ತಲ ಕಟ್ಟಡಗಳಿಗೆ ಕೂಡ ಹಾನಿ ಆಗಿದೆ. ಅಲ್ಲದೆ ಸ್ಥಳೀಯರಿಗೆ ಇದೀಗ ಭಯ ಶುರುವಾಗಿದ್ದು, ಸೂಕ್ತ ತನಿಖೆ ನಡೆಸಲು ಸರ್ಕಾರಕ್ಕೆ ಆಗ್ರಹವನ್ನ ಮಾಡಿದ್ದಾರೆ. ಇಸ್ಲಾಮಾಬಾದ್ ಘಟನೆ ನಂತರ ಈಗ ಕರಾಚಿಯಲ್ಲಿ ಸಂಭವಿಸಿದ ಸ್ಫೋಟ ಸಹಜವಾಗಿ ಭಯ ಸೃಷ್ಟಿಸಿದೆ ಜನರಲ್ಲಿ.
ಕರಾಚಿಯ ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶ ಕಟ್ಟಡದ ಮೊದಲನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿ ಮತ್ತಷ್ಟು ಭೀತಿ ಹುಟ್ಟಿಸಿದೆ. ರಂಜಾನ್ ಸಮಯದಲ್ಲೇ ಇಂತಹ ಘಟನೆ ನಡೆದಿದ್ದು, ಇದೀಗ ಜನರು ಹೊರಗೆ ಬರುವುದಕ್ಕೂ ನೂರು ಬಾರಿ ಯೋಚನೆ ಮಾಡುವಂತೆ ಆಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅನಿಲ ಸೋರಿಕೆ ಈ ಘಟನೆಗೆ ಕಾರಣ ಎನ್ನಲಾಗಿದ್ದರೂ, ತನಿಖೆ ಎಲ್ಲಾ ಆಯಾಮದಲ್ಲೂ ನಡೆಯುತ್ತಿದೆ. ಉಗ್ರ ಪೋಷಕ ಪಾಕಿಸ್ತಾನದಲ್ಲಿ ಕ್ಷಣಕ್ಷಣಕ್ಕೂ ಭಯದಲ್ಲೇ ಜನರು ಬದುಕುವಂತೆ ಆಗಿದೆ.
-
Gas Booking New Rules: ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications