ಪುಲ್ವಾಮಾ ದಾಳಿಕೋರನನ್ನು ಸ್ವಾತಂತ್ರ್ಯ ಯೋಧ ಎಂದ ಪಾಕ್ ಪತ್ರಿಕೆ
ಇಸ್ಲಾಮಾಬಾದ್, ಫೆಬ್ರವರಿ 16: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ 49 ಯೋಧರ ಹತ್ಯೆಗೆ ಕಾರಣನಾದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೊತ್ಪಾದಕ ಆದಿಲ್ ಅಹ್ಮದ್ ದಾರ್ ನನ್ನು ಪಾಕಿಸ್ತಾನದ ಪತ್ರಿಕೆಯೊಂದು 'ಸ್ವಾತಂತ್ರ್ಯ ಯೋಧ' ಎಂದು ಕರೆಯುವ ಮೂಲಕ ವಿಕೃತಿ ಮೆರೆದಿದೆ.
ಪಾಕಿಸ್ತಾನದ 'ದಿ ನೇಷನ್' ಪತ್ರಿಕೆಯು ದಾರ್ ನನ್ನು ಸ್ವಾತಂತ್ರ್ಯ ಯೋಧ ಎಂದು ಕರೆದಿದ್ದು ಮಾತ್ರವಲ್ಲದೆ, ಈ ಘಟನೆಯಲ್ಲಿ ಜೈಷ್ ಇ ಮೊಹಮ್ಮದ್ ಪಾತ್ರವಿಲ್ಲ ಎಂದು ಬರೆದಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ.
ಸ್ವತಃ ಜೆಇಎಂ ಈ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದರೂ, ದಿ ನೇಶನ್ ಈ ರೀತಿ ಬರೆಯುವ ಮೂಲಕ ವಿಶ್ವದ ಕೆಂಗಣ್ಣಿಗೆ ಪಾತ್ರವಾಗಿದೆ.

ಇಡೀ ವಿಶ್ವವೇ ಆದಿಲ್ ಅಹ್ಮದ್ ದಾರ್ ನನ್ನು ಭಯೋತ್ಪಾದಕ, ರಣಹೇಡಿ ಎಂದು ನಿಂದಿಸುತ್ತಿದ್ದರೆ ಪಾಕಿಸ್ತಾನೀ ಪತ್ರಿಕೆ ಈ ರೀತಿ ಬರೆದಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications