ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹಿಂದೂಗಳ ವಿವಾಹ ವಿಧೇಯಕಕ್ಕೆ ವಿಳಂಬಕ್ಕೆ ಕಾರಣವೇನು?

By Mahesh
|
Google Oneindia Kannada News

ಇಸ್ಲಾಮಾಬಾದ್, ಫೆ. 09: ಹಲವು ದಶಕಗಳ ನಂತರ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಪಾಕಿಸ್ತಾನ ಸರ್ಕಾರ ಶುಭ ಸುದ್ದಿ ನೀಡಿದೆ. ನೆನೆಗುದಿಗೆ ಬಿದ್ದಿದ್ದ ಹಿಂದೂ ವಿವಾಹ ವಿಧೇಯಕಕ್ಕೆ ಪಾಕಿಸ್ತಾನದ ಸಂಸತ್ತಿನಲ್ಲಿ ಸರ್ವಾನುಮತದ ಅಂಗೀಕಾರ ದೊರಕಿದೆ.

ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮದುವೆ ಆಚರಣೆಗೆ ಪ್ರತ್ಯೇಕ ಕಾನೂನು ಹಾಗೂ ಮಾನ್ಯತೆ ನೀಡುವ ಬಗ್ಗೆ ಕೆಲ ದಶಕಗಳಿಂದ ಚರ್ಚೆ ನಡೆದಿತ್ತು. ಆದರೆ, ಹಿಂದೂಗಳೀಗೆ ಕಾನೂನಿನ ಬೆಂಬಲ ಸಿಕ್ಕಿರಲಿಲ್ಲ. ಈಗ ಹಿಂದೂ ವಿವಾಹ ವಿಧೇಯಕ 2015ರ ಅಂತಿಮ ಕರಡುಪ್ರತಿಗೆ ರಾಷ್ಟ್ರೀಯ ಅಸೆಂಬ್ಲಿ ಸ್ಥಾಯಿ ಸಮಿತಿ ಸಮ್ಮತಿ ನೀಡಿದೆ. ['ಅಖಂಡ ಭಾರತ' ನಂತರ ರಾಮ್ ಮಾಧವ್ ಹೊಸ ಕನಸೇನು?]

ಹಿಂದೂ ವಿವಾಹ ವಿಧೇಯಕದಂತೆ ಪುರುಷ ಹಾಗೂ ಮಹಿಳೆಯರ ವಿವಾಹದ ವಯೋಮಿತಿ 18 ವರ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ವಿಧೇಯಕದ ಬಗ್ಗೆ ಐವರು ಹಿಂದೂ ಸಂಸದರು ಒಮ್ಮತ ಸೂಚಿಸಿದ್ದು, ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಮ್ ಲೀಗ್ ಬೆಂಬಲವೂ ಸಿಕ್ಕಿದೆ.

Hindu Marriage Bill approved in Pakistan

1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಪಾಕಿಸ್ತಾನ ಹತ್ತು ಹಲವು ಬಾರಿ ಹಿಂದೂ ವಿವಾಹ ಕಾಯ್ದೆ ಬಗ್ಗೆ ಚರ್ಚೆ ನಡೆಸಿತ್ತು. ಆದರೆ, ಹಲವು ತೊಡಕುಗಳನ್ನು ಮುಂದಿಟ್ಟುಕೊಂಡು ಕಾನೂನು ಜಾರಿಗೊಳಿಸದೆ ವಿಳಂಬ ಮಾಡಿತ್ತು. ಅದರಲ್ಲೂ ಅಧಿನಿಯಮ 13ರ ಪ್ರಕಾರ ಹಿಂದೂ ದಂಪತಿಗಳು ವಿವಾಹ ವಿಚ್ಛೇದನ ಪಡೆಯಲು ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಪತಿ ಅಥವಾ ಪತ್ನಿಯನ್ನು ಯಾವಾಗ ಬೇಕಾದರೂ ವಿಚ್ಛೇದನ ನೀಡಬಹುದಾಗಿತ್ತು. ಈ ನಿಯಮ ತಿದ್ದುಪಡಿಯಾದ ವಿಧೇಯಕದಲ್ಲಿರಲಿಲ್ಲ.

ಜೊತೆಗೆ ಮದುವೆಯಾಗಿದ್ದಕ್ಕೆ ಸೂಕ್ತ ಪುರಾವೆ ಒದಗಿಸಲು ದಾಖಲೆಗಳ ಬಲ ಅಲ್ಪಸಂಖ್ಯಾತ ಹಿಂದೂಗಳಿಗೆ ಇರಲಿಲ್ಲ. ಹೀಗಾಗಿ ಮರಣ ಹೊಂದಿದ ಪತಿಯ ಪಿತ್ರಾರ್ಜಿತ ಆಸ್ತಿ, ಮರು ಮದುವೆ, ವಿಚ್ಛೇದನ, ದತ್ತು ಪಡೆಯುವಿಕೆ ಸುಲಭವಾಗಿರಲಿಲ್ಲ. ಇದಲ್ಲದೆ ದೇಶದ ಒಳ ಹೊರಗೆ ದಂಪತಿಗಳ ಓಡಾಟಕ್ಕೂ ನೂರಾರು ಅಡ್ಡಿ ಆಂತಕಗಳಿದ್ದವು, ಹೀಗಾಗಿ ವಿಧೇಯಕ ಅಂಗೀಕಾರದಿಂದ ಹಿಂದೂಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. (ಪಿಟಿಐ)

English summary
After decades of delay and inaction, the Hindu minority community in Pakistan will soon have a marriage law as a parliamentary panel has unanimously approved the Hindu Marriage Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X