ಮತ್ತೆ ವಿಕೃತಿ ಮೆರೆದ ಪಾಕಿಸ್ತಾನ, 6 ಭಾರತೀಯ ಅಧಿಕಾರಿಗಳಿಗೆ ಕಿರುಕುಳ
ನವದೆಹಲಿ, ಜೂನ್ 26: ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಪಾಕಿಸ್ತಾನ ನಿರಂತರವಾಗಿ ಕಿರುಕುಳ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
2018 ರ ಡಿಸೆಂಬರ್ ತಿಂಗಳಿನಿಂದಲೂ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸತತವಾಗಿ ಪಾಕಿಸ್ತಾನ ಕಿರುಕುಳ ನೀಡುತ್ತ ಬಂದಿದೆ.
ಜೂನ್ 1 ರಂದು ಭಾರತೀಯ ಉನ್ನತ ಆಯೋಗದಲ್ಲಿ ಏರ್ಪಡಿಸಲಾಗಿದ್ದ ಇಫ್ತಾರ್ ಕೂಟದ ಸಂದರ್ಭದಲ್ಲೂ ಭಾರತೀಯ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡಲಾಗಿದೆ.

ಇತ್ತೀಚೆಗೆ ಪಾಕಿಸ್ತಾನಕ್ಕೆ ಭಾರತೀಯ ಹೈ ಕಮಿಶನರ್ ಅಜಯ್ ಬಿಸಾರಿಯಾ ಅವರ ಕಾರನ್ನು ಕೆಲವರು ಹಿಂಬಾಲಿಸುತ್ತಿದ್ದ ಘಟನೆ ವರದಿಯಾಗಿದೆ. ಈ ಕುರಿತು ಭಾರತ ಈಗಾಗಲೇ ಇಸ್ಲಾಮಾಬಾದಿಗೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಪಾರ್ಟಿಗಳಿಗೆ ಕರೆದು ಅವಮಾನ ಮಾಡುವ ಮತ್ತು ಭಾರತೀಯ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆ ಮಾಡುವ ಪ್ರಕರಣಗಳು ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಕಳೆದ ಡಿಸೆಂಬರ್ ನಿಂದಲೂ ಇಂಥ ಘಟನೆಗಳು ನಡೆಯುತ್ತಿದ್ದು, ಭಾರತ ಇಸ್ಲಾಮಾಬಾದಿಗೆ ಅನೌಪಚಾರಿಕವಾಗಿ, ಮಾತಿನ ಮೂಲಕ ಎಚ್ಚರಿಕೆ ನೀದಿದೆ. ಇದು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.












Click it and Unblock the Notifications