ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟ: ಕನಿಷ್ಠ 30 ಸಾವು

ಹಂಗು (ಪಾಕಿಸ್ತಾನ), ನವೆಂಬರ್ 23: ಪಾಕಿಸ್ತಾನದ ಹಂಗು ಪ್ರಾಂತ್ಯದ ಮಾರುಕಟ್ಟೆ ಪ್ರದೇಶದ ನಡುವೆ ಸಂಭವಿಸಿದ ಸ್ಫೋಟದಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದಾರೆ.

ಓರಾಕಜೈ ಪಟ್ಟಣದಲ್ಲಿನ ಕಲಾಯದಲ್ಲಿರುವ ಧಾರ್ಮಿಕ ಕೇಂದ್ರವೊಂದರ ಬಾಗಿಲಿನ ಹೊರಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಭದ್ರತಾ ಸಂಸ್ಥೆ ಮೂಲಗಳು ತಿಳಿಸಿವೆ.

pakistan hangu kalaya bazar orakzai bomb blast killed 30 people, 40 injured

ಮೋಟಾರ್ ಸೈಕಲ್‌ಗೆ ರಿಮೋಟ್ ಕಂಟ್ರೋಲ್ ಬಾಂಬ್ ಅನ್ನು ಅಳವಡಿಸಲಾಗಿತ್ತು. ಬಾಂಬ್ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಜನರು ಬಟ್ಟೆ ಖರೀದಿ ಮಾಡುತ್ತಿದ್ದರು.

ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪೂರ್ಣ ಪ್ರದೇಶವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಈ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. 20111ರಲ್ಲಿ 10 ಪೊಲೀಸರು ಸೇರಿದಂತೆ 30 ಮಂದಿ ಮೃತಪಟ್ಟು, ಸುಮಾರು 50 ಮಂದಿ ಗಾಯಗೊಂಡಿದ್ದರು. ವ್ಯಾನ್‌ನಲ್ಲಿ ಬಂದಿದ್ದ ಆತ್ಮಾಹುತಿ ಬಾಂಬರ್ ಸರ್ಕಾರಿ ಕಚೇರಿ ಕಟ್ಟಡಕ್ಕೆ ವಾಹನ ನುಗ್ಗಿಸಿ ಸ್ಫೋಟಿಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+