ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನದ ಪ್ರಧಾನಿಯಾಗುವಲ್ಲಿ ದಾಪುಗಾಲಿಡುತ್ತಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ನಾಯಕ ಇಮ್ರಾನ್ ಖಾನ್ ಅವರನ್ನು ಮಾಜಿ ಪತ್ನಿ ರೆಹಾಮ್ ಖಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಜುಲೈ 25 ರಂದು ನಡೆದ ಸಾರ್ವತ್ರಿಕ ಚುನಾವಣೆಯ ಮತಎಣಿಕೆ ಕಾರ್ಯ ಅದೇ ದಿನ ಸಂಜೆಯಿಂದ ಆರಂಭವಾಗಿದೆ. ಸದ್ಯದ ಟ್ರೆಂಡ್ ಪ್ರಕಾರ ಯಾವುದೇ ಪಕ್ಷಕ್ಕೆ ಅಗತ್ಯ ಬಹುಮತ(342 ರಲ್ಲಿ 172 ಸ್ಥಾನ ಬಹುಮತಕ್ಕೆ ಅಗತ್ಯ) ಸಿಗುವ ಸಾಧ್ಯತೆ ಇಲ್ಲವಾದರೂ, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ ಇಮ್ರಾನ್ ಖಾನ್ ಪ್ರಧಾನಿಯಾಗಬಹುದು ಎಂದು ಊಹಿಸಲಾಗಿದೆ.

ಆದರೆ 2015 ರಲ್ಲಿ ಇಮ್ರಾನ್ ಖಾನ್ ರನ್ನು ವರಿಸಿದ್ದ ರೆಹಾಮ್ ಖಾನ್ ಈಗಾಗಲೇ ತಮ್ಮ ಪುಸ್ತಕವೊಂದರಲ್ಲಿ ಇಮ್ರಾನ್ ಖಾನ್ ಅವರ ಕುರಿತು ಸಾಕಷ್ಟು ವಿವಾದಾತ್ಮಕ ಸಾಲುಗಳನ್ನು ಬರೆದಿದ್ದರು. ಮದುವೆಯಾಗಿ ಹತ್ತು ತಿಂಗಳಾಗುತ್ತಿದ್ದಂತೆಯೇ ವಿಚ್ಛೇದನ ಪಡೆದಿದ್ದ ರೆಹಾಮ್, ಇದೀಗ ಮತ್ತೆ ಮಾಜಿ ಪತಿಯ ಜನ್ಮಜಾಲಾಡಿದ್ದಾರೆ, ಅದು ಟ್ವಿಟ್ಟರ್ ಮೂಲಕ.

ಇವರು ಪಾಕಿಸ್ತಾನಕ್ಕೆ ಆದರ್ಶವೇ?

ಬ್ಯಾಲೆಟ್ ಅನ್ನು ಧಿಕ್ಕರಿಸುವ ಅವರ ದುರಹಂಕಾರವು ಮೂರ್ಖತನದ ಪರಾಕಾಷ್ಠೆ. ಅವರಿಗೆ ಸಣ್ಣ ಪುಟ್ತ ಸನ್ನಿವೇಶವನ್ನೇ ಎದುರಿಸಲು ಸಾಧ್ಯವಿಲ್ಲ. ಅಂಥಾದ್ದರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಇವರನ್ನು ಆಯ್ಕೆ ಮಾಡಬೇಕೆ? ಪಾಕಿಸ್ತಾನಕ್ಕೆ ಇಂಥವರು ಆದರ್ಶವೇ? ಎಂದು ರೆಹಾಮ್ ಪ್ರಶ್ನಿಸಿದ್ದಾರೆ.

ರೆಹಾಮ್ ಖಾನ್ ಆತ್ಮಕಥೆಯಲ್ಲಿ ಇಮ್ರಾನ್ ವ್ಯಕ್ತಿತ್ವ ಅನಾವರಣ!

ರೆಹಾಮ್ ಖಾನ್ ಆತ್ಮಕಥೆಯಲ್ಲಿ ಇಮ್ರಾನ್ ವ್ಯಕ್ತಿತ್ವ ಅನಾವರಣ!

ಇತ್ತೀಚೆಗಷ್ಟೇ ಬಿಡುಗಡೆಯಾದ ರೆಹಾಮ್ ಖಾನ್ ಅವರ ಆತ್ಮಕಥೆ 'ರೆಹಾಮ್ ಖಾನ್' ಪುಸ್ತಕದಲ್ಲಿ ಇಮ್ರಾನ್ ಖಾನ್ ಅವರ ಬಗ್ಗೆ ಸಾಕಷ್ಟು ವಿವಾದಾತ್ಮಕ ಸಾಲುಗಳನ್ನು ಅವರು ಬರೆದಿದ್ದರು. ರೆಹಾಮ್ ಖಾನ್ ಅವರಿಗೆ ಉತ್ತರ ಭಾರತದಲ್ಲಿ ಕನಿಷ್ಠ 5 ಮಕ್ಕಳಿದ್ದಾರೆ. ಆದರೆ ಸಮಾಜದ ಭಯಕ್ಕೆ ಆ ಮಕ್ಕಳ ತಾಯಂದಿರೆಲ್ಲ ಬಾಯಿಮುಚ್ಚಿಕೊಂಡಿದ್ದಾರೆ ಎಂದು ಈ ಪುಸ್ತಕದಲ್ಲಿ ಅವರು ಬರೆದಿದ್ದರು. ಇಮ್ರಾನ್ ಖಾನ್ ಒಬ್ಬ ಮಾದಕ ದ್ರವ್ಯ ವ್ಯಸನಿ, ಹೆಣ್ಣುಬಾಕ ಮತ್ತು ಸಲಿಂಗಕಾಮಿ ಎಂದು ರೆಹಾಮ್ ಖಾನ್ ಬರೆದಿದ್ದರು.

ಅವರೇ ಅವರಿಗೆ ಶತ್ರು!

ಚುನಾವಣಾ ಆಯೋಗದ ಬ್ಯಾಲೆಟ್ ಗೌಪ್ಯತೆಯ ನಿಯಮವನ್ನು ಮುರಿದಿದ್ದರಿಂದ ಅವರ ಮತವನ್ನೇ ಅವರು ಹಾಕಿಕೊಳ್ಳಲು ಸಾಧ್ಯವಾಗಿಲ್ಲ! ಇದನ್ನು ಪಾಕಿಸ್ತಾನದ ಅತ್ಯುತ್ತಮ ಆಯ್ಕೆ ಎನ್ನುವುದು ಹೇಗೆ? ಅವರಿಗೆ ಅವರೇ ದೊಡ್ಡ ಶತ್ರು ಎಂದಿದ್ದಾರೆ ರೆಹಾಮ್ ಖಾನ್.

ಬೆನ್ನೆಲುಬಿಲ್ಲದ ಪ್ರಧಾನಿ ಬೇಕೆ?

ಇಮ್ರಾನ್ ಖಾನ್ ಯಾವುದೇ ಅಧಿಕಾರವನ್ನು ಬಳಸಿಕೊಳ್ಳಲು ಬಾರದ, ಬೊಂಬೆಯಾಗಬಲ್ಲ ಪ್ರಧಾನಿಯಾಗುತ್ತಾರಷ್ಟೆ! ನಮಗೆ ಅತ್ಯಂತ ಸದೃಢ ನಾಯಕರು ಬೇಕು. ಬೆನ್ನೆಲುಬಿಲ್ಲದ, ಬರೀ ಆಶ್ವಾಸನೆ ನೀಡುವವರು ಬೇಡ ಎಂದು ಸಹ ರೆಹಾಮ್ ಖಾನ್ ಟ್ವೀಟ್ ಮಾಡಿದ್ದಾರೆ.

ತಾನೇ ನಾಶವಾಗಲು ಹೊರಟ ದೇಶವನ್ನು ಕಾಪಾಡುವವರ್ಯಾರು?

ಅವರಿಗೆ ಬೇಕಾಗಿದ್ದೂ ಅದೇ. ತಾನೇ ನಾಶವಾಗುತ್ತೇನೆಂದು ದೃಢ ಸಂಕಲ್ಪ ಮಾಡಿರುವ ದೇಶವನ್ನು ಕಾಪಾಡುವವರು ಯಾರು ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ ರೆಹಾಮ್ ಖಾನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+