• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಯುವಕನಿಗೆ ಹಜ್‌ ವಿಸಾ ನಿರಾಕರಿಸಿದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ನವೆಂಬರ್ 24: ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ತನಗೆ ವೀಸಾ ನೀಡುವಂತೆ 29 ವರ್ಷದ ಭಾರತೀಯ ಯುವಕ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪಾಕ್‌ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಹಜ್ ಯಾತ್ರೆಗೆ ಸಂಕಲ್ಪ ಮಾಡಿರುವ ಶಿಹಾಬ್ ಚೊಟ್ಟೂರು ಮೂಲತಃ ಕೇರಳದ ನಿವಾಸಿ. ಶಿಹಾಬ್ ಹಜ್ ಯಾತ್ರೆಗಾಗಿ ಪಾಕಿಸ್ತಾನದ ಮೂಲಕ ಕಾಲ್ನಡಿಗೆಯಲ್ಲಿ ಸೌದಿ ಅರೇಬಿಯಾಕ್ಕೆ ಹೋಗಲು ಬಯಸಿದ್ದರು.

ಶಿಹಾಬ್ ತಮ್ಮ ತವರು ರಾಜ್ಯವಾದ ಕೇರಳದಿಂದ ಹಜ್ ಯಾತ್ರೆಯನ್ನು ಪ್ರಾರಂಭಿಸಿದ್ದರು. ಕಳೆದ ತಿಂಗಳು ಅವರು ಸುಮಾರು 3,000 ಕಿ.ಮೀ ಪ್ರಯಾಣಿಸಿ ವಾಘಾ ಗಡಿ ತಲುಪಿದ್ದರು. ಆದರೆ ವಾಘಾ ಗಡಿಯಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿ ವೀಸಾ ಇಲ್ಲದ ಕಾರಣ ಅವರನ್ನು ತಡೆದಿದ್ದಾರೆ. ಆ ನಂತರ ಪಾಕಿಸ್ತಾನದ ಪ್ರಜೆಯಾಗಿರುವ ಸರ್ವರ್ ತಾಜ್ ಅವರು ಶಿಹಾಬ್‌ಗೆ ವೀಸಾ ನೀಡುವಂತೆ ನ್ಯಾಯಾಲಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆ ಕೈಗೆತ್ತಿಕೊಂಡ ಲಾಹೋರ್‌ ಹೈಕೋರ್ಟ್‌ ವೀಸಾ ನೀಡಲು ನಿರಾಕರಿಸಿದೆ.

ನವದೆಹಲಿ: ಆಟೋ-ಟ್ಯಾಕ್ಸಿ ದರದಲ್ಲಿ ಏರಿಕೆ ಹಿಂದೆ ಎಷ್ಟಿತ್ತು? ಈಗ ಎಷ್ಟಾಯಿತು? ನವದೆಹಲಿ: ಆಟೋ-ಟ್ಯಾಕ್ಸಿ ದರದಲ್ಲಿ ಏರಿಕೆ ಹಿಂದೆ ಎಷ್ಟಿತ್ತು? ಈಗ ಎಷ್ಟಾಯಿತು?

ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

'ಶಿಹಾಬ್‌ ಪರ ಅರ್ಜಿ ಸಲ್ಲಿಸಿದವರು ಭಾರತೀಯ ಪ್ರಜೆಯಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಅವರು ಅಧಿಕಾರ ಹೊಂದಿಲ್ಲ' ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ಪ್ರಜೆಯಾಗಿರುವ ಶಿಹಾಬ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅರ್ಜಿದಾರರಲ್ಲಿ ನ್ಯಾಯಾಲಯ ಕೋರಿತ್ತು. ಇದಾದ ಬಳಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ

ವೀಸಾ ತನಿಖಾ ಸಂಸ್ಥೆಯ ಪ್ರಕಾರ, ಶಿಹಾಬ್ ಅವರು ಕಾಲ್ನಡಿಗೆಯಲ್ಲಿ ಹಜ್‌ಗೆ ಪ್ರಯಾಣಿಸುತ್ತಿದ್ದೆ ಎಂದು ಪಾಕಿಸ್ತಾನದ ವಲಸೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ಮೂಲಕ ಹೋಗಲು ಈ ಯುವಕನಿಗೆ ಅವಕಾಶ ನೀಡಬೇಕು. ಕೇರಳದ ನಿವಾಸಿ ಶಿಹಾಬ್ ಪಾಕಿಸ್ತಾನ ಮತ್ತು ಇರಾನ್ ಮಾರ್ಗವಾಗಿ ಸೌದಿ ಅರೇಬಿಯಾ ತಲುಪಲು ಟ್ರಾನ್ಸಿಟ್ ವೀಸಾ ಬಯಸಿದ್ದಾರೆ.

English summary
Shihab will reach Makkah covering a distance of 8640 kms, traversing through India, Pakistan, Iran, Iraq, and Kuwait, and will finally reach Saudi Arabia in early February 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X