ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ಸಯೀದ್ ಸಂಘಟನೆಗಳಿಗೆ ಪಾಕಿಸ್ತಾನದಿಂದ ನಿಷೇಧ

|
Google Oneindia Kannada News

2008ರ ಮುಂಬೈ ಮೇಲಿನ ಭಯೊತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಹಾಗೂ ಅದರ ದತ್ತಿ ಸಂಸ್ಥೆಯಾದ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ನನ್ನು ಪಾಕಿಸ್ತಾನವ್ಹ್ ಗುರುವಾರ ನಿಷೇಧಿಸಿದೆ.

ಆಂತರಿಕ ಸಚಿವಾಲಯದ ವಕ್ತಾರ ಮಾತನಾಡಿ, ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯ ವೇಳೆಯಲ್ಲಿ ಈ ಗುಂಪುಗಳನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವು ನಿರ್ದಿಷ್ಟ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆಗೆ ವೇಗ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಗೆ ಗುನ್ನ; ಭಯೋತ್ಪಾದನೆ ನರಮಂಡಲ ಇಸ್ಲಾಮಾಬಾದ್ ಎಂದ ಭಾರತಇಮ್ರಾನ್ ಖಾನ್ ಗೆ ಗುನ್ನ; ಭಯೋತ್ಪಾದನೆ ನರಮಂಡಲ ಇಸ್ಲಾಮಾಬಾದ್ ಎಂದ ಭಾರತ

ಜಮಾತ್ ಉದ್ ದವಾ ಮತ್ತು ಫಲಾ ಇ ಇನ್ಸಾನಿಯತ್ ಫೌಂಡೇಷನ್ ನ ಕೂಡ ನಿಷೇಧಿಸುವ ಸಂಘಟನೆಯಲ್ಲಿ ಗುರುತಿಸಲಾಗಿದೆ. ಇದಕ್ಕೂ ಮುನ್ನ ಆಂತರಿಕ ಸಚಿವಾಲಯವು ಈ ಸಂಘಟನೆಗಳ ಬಗ್ಗೆ ನಿಗಾ ಇಡಲಾಗಿತ್ತು.

Hafeez Saeed

ಈ ಸಭೆಯ ಅಧ್ಯಕ್ಷತೆಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಹಿಸಿಕೊಂಡಿದ್ದರು. ಭಯೋತ್ಪಾದನೆ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಕಾರ್ಯಾಚರಣೆ ಏನು ಎಂಬ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ವಿವಿಧ ತನಿಖಾ ಸಂಸ್ಥೆ ಮುಖ್ಯಸ್ಥರು ಹಾಗೂ ಪ್ರಮುಖ ಸಚಿವರು ಹಾಜರಿದ್ದರು ಎನ್ನಲಾಗಿದೆ.

English summary
Pakistan on Thursday banned the 2008 Mumbai attack mastermind Hafiz Saeed-led Jamat-ud-Dawa and its charity wing Falah-e-Insaniat Foundation. A spokesman of the Interior Ministry said that the decision to ban these groups was taken during a meeting of the National Security Committee (NSC) held at the PM’s office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X