LOCಯಲ್ಲಿ ಭಾರತೀಯ ಸೇನೆಯಿಂದ ದಾಳಿ, ನಾಲ್ವರು ಸಾವು: ಪಾಕ್ ಆರೋಪ
ಇಸ್ಲಾಮಾಬಾದ್, ಜೂನ್ 18: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೈನಿಕರು ದಾಳಿ ನಡೆಸಿ ನಾಲ್ವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಪಾಕ್ ಸೇನೆ ಹೇಳಿದೆ.
Recommended Video
ಮೃತಪಟ್ಟ ನಾಲ್ವರು ನಾಗರಿಕರಲ್ಲಿ ಮಹಿಳೆ ಸೇರಿದ್ದಾರೆ. ಮತ್ತೊಬ್ಬರಿಗೆ ಗಾಯವಾಗಿದೆ. ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪಾಕಿಸ್ತಾನ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್, ನಿಕಿಯಾಲ್ ಮತ್ತು ಬಗ್ಸಾರ್ ವಲಯಗಳಲ್ಲಿ ನಾಗರಿಕರ ಮೇಲೆ ಗುರಿಯಾಗಿಟ್ಟುಕೊಂಡು ಭಾರತೀಯ ಸೇನಾ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರತ್ತಾ ಜಬ್ಬಾರ್ ಹಾಗೂ ಲೆವಾನಾ ಖೈತರ್ ಪ್ರದೇಶದಲ್ಲಿ ಮಹಿಳೆ ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದು, ಓರ್ವರಿಗೆ ಗಂಭೀರ ಗಾಯವಾಗಿದೆ ಎಂದು ಹೇಳಿದ್ದಾರೆ. ಬುಧವಾರ ಪಾಕಿಸ್ತಾನವು ನೌಗಾಮ್ ಗಡಿಯಲ್ಲಿ ಗದನವಿರಾಮ ಉಲ್ಲಂಘನೆ ಮಾಡಿತ್ತು, ಭಾರತದ ಸೈನಿಕರ ಮೇಲೆ ಮಾರ್ಟರ್ ಶೆಲ್‌ಗಳ ದಾಳಿ ನಡೆಸಿದೆ.
ಜೂನ್ 16ರಂದು ಸಂಜೆ ಸಮಯದಲ್ಲಿ ಅಪ್ರಚೋದಿತ ಕದನವಿರಾಮ ಉಲ್ಲಂಘನೆ ಮಾಡಿತ್ತು. ಮಾರ್ಟರ್ ಶೆಲ್‌ಗಳು ಹಾಗೂ ಆಯುಧಗಳ ಮೂಲಕ ದಾಳಿ ನಡೆಸಿತ್ತು.
ಭಾರತವು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಪಾಕಿಸ್ತಾನದ ಸೈನಿಕರ ಮೇಲೆ ಪ್ರತಿದಾಳಿ ನಡೆಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೇಲೆ ಆರೋಪ ಮಾಡಿದೆ.












Click it and Unblock the Notifications