ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯದಲ್ಲಿದ್ದ ಭಾರತದ ವಿಮಾನಕ್ಕೆ ಪಾಕ್ ನೆರವು

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 17: ಭಾರತದ ಜೈಪುರದಿಂದ ಓಮಾನ್ ರಾಜಧಾನಿ ಮಸ್ಕತ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನವೊಂದನ್ನು ಪಾಕಿಸ್ತಾನ ನಾಗರಿಕ ವಿಮಾನ ಪ್ರಾಧಿಕಾರದ ವಾಯು ಸಂಚಾರ ನಿಯಂತ್ರಣ ಕೊಠಡಿ ಸಿಬ್ಬಂದಿ ರಕ್ಷಿಸಿದ ಮಾನವೀಯ ಘಟನೆ ನಡೆದಿದೆ.

150 ಪ್ರಯಾಣಿಕರನ್ನು ಹೊತ್ತು ಮಸ್ಕತ್ ಗೆ ತೆರಳುತ್ತಿದ್ದ ವಿಮಾನ, ಕರಾಚಿ ಪ್ರದೇಶದ ಮೇಲೆ ಸಾಗುತ್ತಿತ್ತು. ಈ ವೇಳೆ ಪ್ರತಿಕೂಲ ಹವಾಮಾನದಿಂದಾಗಿ 36 ಸಾವಿರ ಅಡಿ ಎತ್ತರದಿಂದ 34 ಸಾವಿರ ಅಡಿ ಎತ್ತರಕ್ಕೆ ದಿಢೀರನೆ ಕುಸಿದಿತ್ತು.

ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಹಾರಾಟ: ಟಿಕೆಟ್ ದರ ಎಷ್ಟು?ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಹಾರಾಟ: ಟಿಕೆಟ್ ದರ ಎಷ್ಟು?

ಆಗ ವಿಮಾನದ ಪೈಲಟ್‌ಗಳು ಸಹಾಯ ಮಾಡಿ ಎಂದು ಸಮೀಪದ ವಿಮಾನ ನಿಲ್ದಾಣಗಳ ಎಟಿಸಿಗೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ಎಟಿಸಿ, ನಿರಂತರ ಮಾರ್ಗದರ್ಶನ ಮಾಡಿದೆ. ಇದಕ್ಕೆ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿದ್ದ ವಲಯದಿಂದ ವಿಮಾನವು ಸುರಕ್ಷಿತವಾಗಿ ದಾಟಿ ಹೋಗಿದೆ.

Pakistan Air Controller Saved A Flight From Jaipur

ಪಾಕಿಸ್ತಾನ ಭಾರತಕ್ಕೆ ತನ್ನ ವಾಯು ವಲಯವನ್ನು ಫೆ.26ರಿಂದ ಬಂದ್ ಮಾಡಿತ್ತು. ಬಳಿಕ ಜು.16ರಂದು ಪುನರಾರಂಭಿಸಿತ್ತು.

ಪ್ರತ್ಯೇಕ ಘಟನೆ: ಪುಣೆಯಿಂದ ದೆಹಲಿಗೆ ಹೊರಡಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ 150 ಪ್ರಯಾಣಿಕರು ಎಂಟು ತಾಸುಗಳ ಕಾಲ ಪುಣೆ ವಿಮಾನ ನಿಲ್ದಾಣದಲ್ಲೇ ಪರದಾಡಿದ್ದಾರೆ.

ಇದರಿಂದಾಗಿ ದೆಹಲಿ ಮೂಲದ ನ್ಯೂಯಾರ್ಕ್, ಲಂಡನ್, ಫ್ಲಾಂಕ್‌ಫರ್ಟ್ ಸೇರಿದಂತೆ ಇನ್ನಿತರೆ ಹೊರ ರಾಷ್ಟ್ರಗಳಿಗೆ ತೆರಳಬೇಕಿದ್ದ ವಿಮಾನ ಪ್ರಯಾಣಿಕರು ತಮ್ಮ ವಿಮಾನವನ್ನು ತಪ್ಪಿಸಿಕೊಳ್ಳುವಂತಾಯಿತು.

English summary
An air traffic controller in Pakistan on Thursday saved a plane flying from the Indian city of Jaipur to Muscat, by guiding it through air traffic during an emergency, a media report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X