ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆಮನೆಯಲ್ಲಿ ಈ 6 ವಸ್ತುಗಳು ಖಾಲಿಯಾಗಬಾರದು: ಇಲ್ಲಿದೆ ಸರಳ ವಿವರಣೆ

ಅಡುಗೆಮನೆ ಎಂದರೆ ಮನೆಯ ಹೃದಯಭಾಗವೆಂದೇ ಹೇಳಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇದು ಕೇವಲ ಆಹಾರ ತಯಾರಿಸುವ ಸ್ಥಳವಲ್ಲ, ಮನೆಗೆ ಸಮೃದ್ದಿ, ಸಂತೋಷ ತರಬಲ್ಲ ಸ್ಥಳವಾಗಿದೆ. ಕೆಲವು ವಸ್ತುಗಳನ್ನು ಸಂಪೂರ್ಣ ಖಾಲಿ ಆಗಲು ಬಿಡುವುದು ಮನೆಯ ಆರ್ಥಿಕ ಸ್ಥಿತಿ ಮತ್ತು ಶಾಂತಿಗೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಇಲ್ಲಿದೆ ಅಡುಗೆಮನೆಯಲ್ಲಿ ಖಾಲಿಯಾಗಬಾರಾದ 5 ಮುಖ್ಯ ವಸ್ತುಗಳ ಮಾಹಿತಿ:

1. ಹಿಟ್ಟು

ಅಡುಗೆಮನೆಯಲ್ಲಿ ಹಿಟ್ಟಿನ ಡಬ್ಬಿ ಎಂದಿಗೂ ಖಾಲಿ ಆಗಬಾರದು. ಇದು ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ ಎಂದು ತಜ್ಞರು ನಂಬುತ್ತಾರೆ. ಹಿಟ್ಟು ಮುಗಿಯುವ ಮುನ್ನವೇ ಹೊಸ ಹಿಟ್ಟು ಡಬ್ಬಿಗೆ ತುಂಬಿಡುವುದು ಉತ್ತಮ ಎಂದು ವಾಸ್ತು ಹೇಳುತ್ತದೆ.

6 Kitchen Items

2. ಅಕ್ಕಿ

ಅಕ್ಕಿ ಶುಕ್ರ ಗ್ರಹದ ಪ್ರತೀಕವಾಗಿದ್ದು, ಐಶ್ವರ್ಯ ಮತ್ತು ಸುಖ ಸೌಕರ್ಯವನ್ನು ಸೂಚಿಸುತ್ತದೆ. ಅಕ್ಕಿ ಸಂಪೂರ್ಣ ಖಾಲಿಯಾಗುವುದರಿಂದ ಆರ್ಥಿಕ ಕೊರತೆ ಎದುರಾಗಬಹುದು ಎಂದು ನಂಬಿಕೆ ಇದೆ. ಆದ್ದರಿಂದ ಅಕ್ಕಿಯನ್ನು ಯಾವಾಗಲೂ ಸಂಗ್ರಹದಲ್ಲಿಡುವುದು ಒಳ್ಳೆಯದು.

ರಾತ್ರಿ ನಿದ್ರೆ ಬರ್ತಿಲ್ಲವಾ? ವಾಸ್ತು ಪ್ರಕಾರ ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರಗಳು
ರಾತ್ರಿ ನಿದ್ರೆ ಬರ್ತಿಲ್ಲವಾ? ವಾಸ್ತು ಪ್ರಕಾರ ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರಗಳು

3. ಉಪ್ಪು

ಉಪ್ಪು ರಾಹು-ಕೇತು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ ಎಂದು ವಾಸ್ತು ಹೇಳುತ್ತದೆ. ಉಪ್ಪಿನ ಡಬ್ಬಿ ಖಾಲಿಯಾಗಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು. ಜೊತೆಗೆ ಉಪ್ಪನ್ನು ಇತರರಿಂದ ಸಾಲವಾಗಿ ತರುವುದು ಕೂಡಾ ಒಳ್ಳೆಯದಲ್ಲ ಎಂದು ಹೇಳುತ್ತಾರೆ.

4. ಅರಿಶಿನ

ಅರಿಶಿನವನ್ನು ಮಂಗಳಕರ ಸಂಕೇತವಾಗಿ ಎಂದು ಪರಿಗಣಿಸಲಾಗುತ್ತದೆ. ಇದು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಅರಿಶಿನ ಸಂಪೂರ್ಣ ಖಾಲಿ ಆದರೆ ಶುಭಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ.

ಪೂರ್ಣ ನಿರ್ಮಾಣವಾಗದ ಮನೆಯ ಗೃಹಪ್ರವೇಶ ಯಾಕೆ ಮಾಡಬಾರದು? ವಾಸ್ತು ಹೇಳುವ ಸತ್ಯ
ಪೂರ್ಣ ನಿರ್ಮಾಣವಾಗದ ಮನೆಯ ಗೃಹಪ್ರವೇಶ ಯಾಕೆ ಮಾಡಬಾರದು? ವಾಸ್ತು ಹೇಳುವ ಸತ್ಯ

5. ತುಪ್ಪ ಅಥವಾ ಎಣ್ಣೆ

ತುಪ್ಪವನ್ನು ಲಕ್ಷ್ಮೀ ದೇವಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯಲ್ಲಿ ತುಪ್ಪ ಅಥವಾ ಎಣ್ಣೆ ಮುಗಿದರೆ ಅದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ನಂಬುತ್ತಾರೆ. ಆದ್ದರಿಂದ ಖಾಲಿ ಆಗುವ ಮುಂಚಿತವಾಗಿ ತುಂಬಿ ಇಟ್ಟುಕೊಳ್ಳುವುದು ಉತ್ತಮ.

6. ಬೇಳೆ

ಬೇಳೆ ಕಾಳುಗಳು ಪೋಷಕಾಂಶಗಳ ಪ್ರಮುಖ ಮೂಲವಾಗಿವೆ ಮತ್ತು ಆಹಾರದಲ್ಲಿ ಸಮತೋಲನವನ್ನು ಸೂಚಿಸುತ್ತವೆ. ವಾಸ್ತು ಪ್ರಕಾರ ಬೇಳೆ ಕಾಳು ಸಂಪೂರ್ಣ ಖಾಲಿ ಆಗುವುದರಿಂದ ಮನೆಯ ಆಹಾರ ಸಮೃದ್ಧಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಈ ಮಾಹಿತಿ ಸಾಮಾನ್ಯ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರದ ಆಧಾರದ ಮೇಲೆ ನೀಡಲಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪರಿಣಿತರ ಸಲಹೆ ಪಡೆಯುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+