Karna Serial: ಕರ್ಣ ಸೀರಿಯಲ್ ಟ್ವಿಸ್ಟ್: ನಿತ್ಯಾ ಖುಷಿಗಾಗಿ ನಿಧಿ ಪ್ರೀತಿ ತ್ಯಾಗ, ಅರ್ಜುನ್‌ಗೆ ಖುಷಿ - ಪ್ರೇಕ್ಷಕರಿಗೆ ಶಾಕ್
Karna Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ನಿತ್ಯಾ ಸಂತೋಷಕ್ಕಾಗಿ ತನ್ನ ಪ್ರೀತಿನ ತ್ಯಾಗ ಮಾಡೋದಕ್ಕೆ ನಿಧಿ ಮುಂದಾಗಿದ್ದಾಳೆ. ಅರ್ಜುನ್‌ನನ್ನು ಮದುವೆಯಾಗುವುದಕ್ಕೆ ನಾನು ಸಿದ್ಧಳಿದ್ದೇನೆ ಎಂದು ಹೇಳಿರುವುದು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಈಚೆಗೆ ಬಿಡುಗಡೆಯಾಗಿದ್ದ ಎಪಿಸೋಡ್‌ವೊಂದರಲ್ಲಿ ಮನೆಯವ ಮುಂದೆ ಕರ್ಣ - ನಿಧಿ ಹಾಗೂ ನಿತ್ಯಾಳ ನಡುವಿನ ಎಲ್ಲ ಸತ್ಯವೂ ಬಹಿರಂಗವಾಗಿ, ಕರ್ಣ - ನಿಧಿಯನ್ನು ನಿತ್ಯಾ ಒಂದು ಮಾಡುತ್ತಿರುವಂತೆ ತೋರಿಸಲಾಗಿತ್ತು. ಈ ನಡುವೆ ಕರ್ಣ ಸೀರಿಯಲ್ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಮನೆಯವರ ಮುಂದೆ ನಿಧಿ ದೊಡ್ಡ ತ್ಯಾಗಕ್ಕೆ ಮುಂದಾಗಿದ್ದಾಳೆ.
ನಿಜ ಅರಿಯದ ನಿತ್ಯಾ ಕರ್ಣನಿಗೆ ಮನಸೋತಿದ್ರೆ.. ಅಕ್ಕನಿಗೋಸ್ಕರ ತ್ಯಾಗಕ್ಕೆ ಸಿದ್ದಳಾಗಿ ನಿಂತ್ಲು ನಿಧಿ ಎನ್ನುವ ಶೀರ್ಷಿಕೆಯೊಂದಿಗೆ ಹೊಸ ಎಪಿಸೋಡ್ ಬಿಡುಗಡೆ ಮಾಡಿದ್ದು. ಇದರಲ್ಲಿ ರೋಚಕ ತಿರುವು ಇದೆ. ನಿಧಿಯ ಮುಂದೆ ನಿತ್ಯಾ ಕರ್ಣನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಹೀಗಾಗಿ, ತನ್ನ ಪ್ರೀತಿಯನ್ನು ತ್ಯಾಗ ಮಾಡುವುದಕ್ಕೆ ನಿಧಿ ಮುಂದಾಗಿದ್ದಾಳೆ. ಇದೇ ಕಾರಣಕ್ಕೆ ಅರ್ಜುನ್‌ನನ್ನು ಮದುವೆಯಾಗುವುದಾಗಿ ಮನೆಯವರ ಮುಂದೆ ಒಪ್ಪಿಕೊಂಡಿದ್ದಾಳೆ.

ನಿಧಿ ನನಗೆ ತುಂಬಾ ಸಂತೋಷವಾಗುತ್ತಿದೆ. ಕೊನೆಗೂ ನಿನಗೆ ಒಬ್ಬ ಒಳ್ಳೆಯ ಪಾರ್ಟನರ್ ಸಿಕ್ಕಿದ್ದಾನೆ. ಅರ್ಜುನ್ ನಿನಗೆ ಒಪ್ಪಿಗೆಯಾಗಿದ್ದಾನೆ ಅಂತತಾನೆ ನೀನು ನನಗೆ ಹೇಳಬೇಕು ಅಂತ ಅಂದುಕೊಂಡಿದ್ದು ಅಂತ ನಿತ್ಯಾ - ನಿಧಿಯನ್ನು ಪ್ರಶ್ನೆ ಮಾಡಿದ್ದಾಳೆ. ನನಗೆ ತುಂಬಾ ಭಯ ಆಗಿತ್ತು. ನೀನು ಏನು ಹೇಳದೆ ಹೋಗಿ ಬಿಟ್ಟೆ, ನಾನು ತಪ್ಪಾಗಿ ಹೇಳಿಲ್ಲ ತಾನೆ ಎಂದು ನಿತ್ಯಾ ಪ್ರಶ್ನಿಸಿದ್ದಾಳೆ.
ಅದಕ್ಕೆ ನಿಧಿ ನಿನ್ನ ಯೋಚನೆಯಲ್ಲಿ ಯಾವುದೇ ತಪ್ಪು ಇಲ್ಲ. ಈಗಾಗಲೇ ಜಗತ್ತು ನಿಮ್ಮಿಬ್ಬರನ್ನು ಗಂಡ ಹೆಂಡತಿ ಎಂದು ಒಪ್ಪಿಕೊಂಡಿದೆ. ನಿನ್ನ ಮನಸ್ಸಿನಲ್ಲಿರುವ ಪ್ರೀತಿಯನ್ನು ಆದಷ್ಟು ಬೇಗ ಕರ್ಣ ಸಾರ್ ಮುಂದೆ ಹೇಳು. ಈಗ ನೀವಿಬ್ಬರು ಒಪ್ಪಿಕೊಳ್ಳಬೇಕು ಅಷ್ಟೇ ಅಂತ ನಿತ್ಯಾ ಹೇಳಿದ್ದಾಳೆ. ನಿಧಿ ಮಡಿಲಿನಲ್ಲಿ ನಿತ್ಯ ಮಲಗುವ ಆಸೆ ಹೇಳಿದ್ದು, ನಿಧಿ ಮಡಿಲಲ್ಲಿ ನಿತ್ಯಾ ಮಲಗಿದ್ದಾಳೆ. ಕರ್ಣ ಅವರಿಗೆ ನೀನೇ ಆಧಾರವಾಗಿರಬೇಕು ಅಂತ ನಿತ್ಯಾಗೆ ನಿಧಿ ಸಲಹೆ ಕೊಟ್ಟಿದ್ದಾಳೆ.
ಸಂತೋಷದಲ್ಲಿ ಕುಣಿದಾಡಿದ ಅರ್ಜುನ್
ಅಜ್ಜಿಯೊಂದಿಗೆ ಅರ್ಜುನ್ ಸಂತೋಷವಾಗಿ ಮಾತನಾಡಿದ್ದಾನೆ. ನಿಧಿ ಒಪ್ಪಿಕೊಂಡು ಬಿಟ್ಟರು ಅಜ್ಜಿ... ನಾನು ನಿಧಿಯನ್ನು ಕೈಹಿಡಿದುಕೊಂಡು ಸುತ್ತಬೇಕು ಅಂತ ಇದ್ದೆ. ಆದರೆ ಅಲ್ಲಿ ಎಲ್ಲರು ಇದ್ದರು ಅಲ್ಲದೆ ನನಗೆ ನಾಚಿಕೆ ಬೇರೆ ಜಾಸ್ತಿ ಅಂತ ಅರ್ಜುನ್ ಹೇಳಿದ್ದಾನೆ. ಈ ಮುದುಕಿನ ತಿರುಗಿಸುತ್ತಿದ್ದಿಯಲ್ಲೋ ನೀನು... ನಾನೇನು ಸ್ವೀಟ್ 16 ಅಂದ್ಕೊಂಡ್ಯ ಅಂತ ಅಜ್ಜಿ ತಮಾಷೆ ಮಾಡಿದ್ದಾರೆ.
ನನಗೂ ವಯಸ್ಸಾಗಿದೆ. ಅಜ್ಜಿ ನಾವು ಲೈಫ್‌ನಲ್ಲಿ ಎಲ್ಲಿಯ ವರೆಗೂ ಕನಸು ಕಾಣುತ್ತೇವೋ ಅಲ್ಲಿಯ ವರೆಗೂ ವಯಸ್ಸೇ ಆಗಲ್ವಂತೆ, ನೀನಂತೂ ಡಬಲ್ ಸೆಂಚುರಿ ಬಾರಿಸ್ತೀಯ ಅಂತ ಹೇಳಿದ್ದಾನೆ ಅರ್ಜುನ್. ನನಗೆ ಇರುವ ಆಸೆ ಎಲ್ಲವೂ ನನ್ನ ಮುದ್ದಿನ ಮೊಮ್ಮಗ ಮದುವೆ ಆಗಬೇಕು ಅಂತ ಅಜ್ಜಿ ಹೇಳಿದ್ದಾರೆ. ಅದು ಆಗ್ತಿದ್ಯಲ್ಲ ನನಗೆ ಇದಕ್ಕಿಂತ ಇನ್ನೇನು ಬೇಕು ಅಂತಲೂ ಅಜ್ಜಿ ಹೇಳಿದ್ದಾರೆ. ನಿಧಿ ಒಪ್ಪಿಕೊಂಡು ಬಿಟ್ಟರು ಇದು ನನ್ನ ಜೀವನದ ಸಂತೋಷದ ದಿನ ಅಂತ ಅರ್ಜುನ್ ಹೇಳಿದ್ದಾರೆ.












Click it and Unblock the Notifications