Rain: ಮಳೆ ದುರಂತಕ್ಕೆ ಬಲಿ 7 ಮಂದಿ: ಬೌರಿಂಗ್ ಆಸ್ಪತ್ರೆ ಸಂತ್ರಸ್ತರಿಗೆ 5 ಲಕ್ಷ ರೂ ಪರಿಹಾರ ಚೆಕ್ ಹಸ್ತಾಂತರ

ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಬುಧವಾರ ಸುದ್ದಿ ಮಹಾಮಳೆಗೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದು 7 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂಪಾಯಿ ಘೋಷಿಸಿದ್ದರು. ಅದಾಗಿ ಮಾರನೇ ದಿನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಹಾರ ಮೊತ್ತದ ಚೆಕ್‌ ಅನ್ನು ವಿತರಿಸಲಾಯಿತು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಹರ್ಷದ್ ಅವರು ಮೃತರ ಕುಟುಂಬಸ್ಥರಿಗೆ ಚೆಕ್ ವಿತರಿಸಿದರು. ಬೆಂಗಳೂರು ನಗರದಲ್ಲಿ ನಿನ್ನೆ ಆಲಿಕಲ್ಲು ಸಮೇತ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿಯಿತು. ಪರಿಣಾಮವಾಗಿ ಮೃತಪಟ್ಟ 7 ಜನರ ಕುಟುಂಬದ ವಾರಸುದಾರ ಸದಸ್ಯರಿಗೆ ಇಂದು ಗುರುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪರಿಹಾರದ ಚೆಕ್ ವಿತರಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.

Families of seven victims killed in Bowring Hospital wall collapse received Rs 5 lakh compensation in Bengaluru

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಗರದ ಎಂ.ಜಿ. ರಸ್ತೆಯಲ್ಲಿರುವ ಪಿ.ಯು.ಬಿ. ಕಟ್ಟಡದ 10ನೇ ಮಹಡಿಯಲ್ಲಿರುವ ಕೇಂದ್ರ ನಗರ ಪಾಲಿಕೆ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಪರಿಹಾರದ ಚೆಕ್ ನೀಡಿದರು.

Bengaluru Rain: ದುರಂತ ಬಳಿಕ ಬೌರಿಂಗ್ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ: ಮೃತರಿಗೆ 5 ಲಕ್ಷ ರೂ ಪರಿಹಾರ ಘೋಷಣೆ
Bengaluru Rain: ದುರಂತ ಬಳಿಕ ಬೌರಿಂಗ್ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ: ಮೃತರಿಗೆ 5 ಲಕ್ಷ ರೂ ಪರಿಹಾರ ಘೋಷಣೆ

ಶಾಸಕರಿಂದ ಸಾಂತ್ವನ

ವರ್ಷದ ಮೊದಲ ಮಹಾಮಳೆಗೆ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಕುಸಿತ ಗೋಡೆ ಸಮೀಪವೇ ವ್ಯಾಪಾರ, ಮಾರಾಟ ಇನ್ನಿತರ ಕೆಲಸ ಮಾಡಿಕೊಂಡು ಬದುಕುತ್ತಿದ್ದವರು. ಆಲಿಕಲ್ಲು ಸಹಿತ ಬಂದ ಜೋರು ಮಳೆಗೆ ಗೋಡೆ ಕುಸಿದಿದ್ದು, ಅದರ ವ್ಯಾಪಾರಿಗಳಿಗೂ ಸಿಲುಕಿ ಅಸುನೀಗಿದ್ದಾರೆ. ಈ ಸುದ್ದಿ ರಾಜ್ಯವ್ಯಾಪಿ ಸದ್ದು ಮಾಡುದ್ದಿ, ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದವರಿಗೆ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರು ಸಾಂತ್ವನ ಹೇಳಿದ್ದಾರೆ. ಪರಿಹಾರ ಮೊತ್ತವನ್ನು ಕುಟುಂಬಕ್ಕೆ ಸೂಕ್ತವಾಗಿ ಬಳಸುವಂತೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಸಿಎಂ, ಡಿಸಿಎಂ ಭೇಟಿ

ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ತುರ್ತು ವಿಭಾಗದ ಬಳಿಯ ಗೋಡೆ ಕುಸಿಯುತ್ತಿದ್ದಂತೆ ಸಾವು ನೋವು ಕಂಡು ರಾಜ್ಯವೇ ಮರುಗಿದೆ. ಕೂಡಲೇ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂಜಾಗೃತೆ ವಹಿಸದ್ದಕ್ಕೆ ಸಿಡಿಮಿಡಿಗೊಂಡರು. ಗಾಯಾಳುಗಳಿಗೆ ಸೂಕ್ತ ಎಲ್ಲ ಚಿಕಿತ್ಸೆ ನೀಡಬೇಕು. ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಸಿದ್ದರಾಮಯ್ಯ ಅವರು ಮೃತರಿಗೆ ಐದು ಲಕ್ಷ ರೂ ಪರಿಹಾರ ಸಹ ಘೋಷಿಸಿದರು. ಅದೀಗ ಮೃತರ ಕುಟುಂಬಸ್ಥರಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+