ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಇಬ್ರಾಹಿಂ ಇಲ್ಲಿಲ್ಲ ಎಂದು ಮತ್ತೆ ಪಾಕಿಸ್ತಾನದ ಸುಳ್ಳಿನ ಕತೆ

|
Google Oneindia Kannada News

ಕರಾಚಿ, ಆಗಸ್ಟ್ 23: ದಾವೂದ್ ಇಬ್ರಾಹಿಂ ಇಲ್ಲಿಲ್ಲ ಎಂದು ಪಾಕಿಸ್ತಾನ ಹೊಸ ವರಸೆ ತೆಗೆದಿದೆ. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದಾವೂದ್ ಇಬ್ರಾಹಿಂ ನಮ್ಮಲ್ಲಿಯೇ ಇದ್ದಾರೆ ಎಂದು ಹೇಳಿಕೊಂಡು ಕೆಲವೇ ಗಂಟೆಗಳಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿದೆ.

ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್​ ದಾಳಿಗೆ ಈತನೇ ಮಾಸ್ಟರ್​ ಮೈಂಡ್​. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಸಾಲಿಗೆ ದಾವೂದ್​ ಸೇರಿದ್ದ.

ಎಫ್‌ಎಟಿಎಫ್ ಕಪ್ಪುಪಟ್ಟಿಯಿಂದ ಬಚಾವಾಗಲು ಪಾಕ್ ಕಳ್ಳಾಟಎಫ್‌ಎಟಿಎಫ್ ಕಪ್ಪುಪಟ್ಟಿಯಿಂದ ಬಚಾವಾಗಲು ಪಾಕ್ ಕಳ್ಳಾಟ

ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ, ಪಾಕಿಸ್ತಾನ 2015 ಹಾಗೂ 2019ರಲ್ಲಿ ಇದೇ ಮಾದರಿಯ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿತ್ತು.

Pakistan Again Takes U-turn On Presence Of Dawood Ibrahim In Karachi

ಆದರೆ, ಇಬ್ರಾಹಿಂ ಎಲ್ಲಿದ್ದಾನೆ ಎಂಬುದಾಗಿ ಪಾಕಿಸ್ತಾನ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ದಾವೂದ್​ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗವಾಗಿದೆ. ಈತನ ಮೇಲೆ ಆರ್ಥಿಕ ನಿರ್ಬಂಧವನ್ನೂ ಹೇರಿವೆ.

ಪಾಕಿಸ್ತಾನವು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್ ಕಪ್ಪು ಪಟ್ಟಿಯಿಂದ ಬಚಾವಾಗಲು ಸಾಕಷ್ಟು ಕಳ್ಳಾಟವಾಡುತ್ತಿದೆ. ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಹಫೀಜ್ ಸಯೀದ್, ಮಸೂದ್ ಅಜರ್ ಸೇರಿದಂತೆ 88 ಉಗ್ರರ ಮೇಲಿನ ನಿರ್ಬಂಧ ಹೆಚ್ಚಳ ಮಾಡಲಾಗಿದೆ .

ಎಂಸು ಪಾಕಿಸ್ತಾನ ಹೇಳಿದೆ. ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ 88 ನಿಷೇಧಿತ ಭಯೋತ್ಪಾದಕ ಗುಂಪುಗಳ ನಾಯಕರು ಮತ್ತು ಮೋಸ್ಟ್ ವಾಂಟೆಡ್ ಉಗ್ರರ ಮೇಲಿನ ನಿರ್ಬಂಧಗಳನ್ನು ಹೆಚ್ಚಳ ಮಾಡಲಾಗಿದೆ.

ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರುಗಳ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಆದೇಶಿಸುವ ಮೂಲಕ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದೂ ಪಾಕ್ ಹೇಳಿದೆ.

ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಇದೇ ದಾವೂದ್ ವಿಚಾರವಾಗಿ ಭಾರತ ಸಾಕಷ್ಟು ವರ್ಷಗಳ ಪಾಕ್ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಅಜರ್, ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಅವರ ಮೇಲೆ ನಿರ್ಬಂಧ ವಿಧಿಸುವ ಹಿನ್ನಲೆಯಲ್ಲಿ ಅಗಸ್ಟ್ 18 ರಂದು ನೋಟಿಸ್ ಹೊರಡಿಸಿತ್ತು.

English summary
Pakistan yet again took a u-turn on the presence of presence of Dawood Ibrahim, on its soil, saying that there is no admission that India’s Most Wanted, underworld don is in Karachi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X