ನರೇಂದ್ರ ಮೋದಿ ಪ್ರಯಾಣಿಸುವ ವಿಮಾನಕ್ಕೆ ಪಾಕಿಸ್ತಾನದೊಳಗೆ ಎಂಟ್ರಿ ಇಲ್ಲ!
Recommended Video
ಇಸ್ಲಾಮಾಬಾದ್, ಅಕ್ಟೋಬರ್ 28: ನರೇಂದ್ರ ಮೋದಿ ಅವರು ತನ್ನ ವಾಯುಮಾರ್ಗದ ಮೂಲಕ ಪ್ರಯಾಣ ಬೆಳೆಸುವುದುಕ್ಕೆ ಪಾಕಿಸ್ತಾನ ಮತ್ತೊಮ್ಮೆ ಒಲ್ಲೆ ಎಂದಿದೆಇಸ್ಲಾಮಾಬಾದ್, ಅಕ್ಟೋಬರ್ 28: ನರೇಂದ್ರ ಮೋದಿ ಅವರು ತನ್ನ ವಾಯುಮಾರ್ಗದ ಮೂಲಕ ಪ್ರಯಾಣ ಬೆಳೆಸುವುದಕ್ಕೆ ಪಾಕಿಸ್ತಾನ ಮತ್ತೊಮ್ಮೆ ಒಲ್ಲೆ ಎಂದಿದೆ.
ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಾಯುಮಾರ್ಗದ ಮೂಲಕ ಪ್ರಯಾಣ ಬೆಳಸಬೇಕಿತ್ತು.

ಆದರೆ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಾಯುಮಾರ್ಗವನ್ನು ಬಳಸಲು ನಾವು ಅನುಮತಿ ನೀಡುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.ಅಷ್ಟೇ ಅಲ್ಲ, ಸೆಪ್ಟೆಂಬರ್ ನಲ್ಲಿ ಐಸ್ ಲ್ಯಾಂಡ್ ಗೆ ತೆರಳಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ನಿಷೇಧಿಸಿತ್ತು.
ಪಾಕಿಸ್ತಾನದ ಈ ನಡೆ ಅಂತಾರಾಷ್ಟ್ರೀಯ ಸೌಜನ್ಯಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಭಾರತ ದೂರಿದೆ.
ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ವ್ಯವಹಾರದ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಎರಡು ದೇಶಗ ನಡುವೆ ಹಲವು ದ್ವಿಪಕ್ಷೀಯ ಒಪ್ಪಂದಗಳು ಆಗುವ ಸಾಧ್ಯತೆ ಇದೆ.












Click it and Unblock the Notifications