ಪಾಕಿಸ್ತಾನ ಹಿಮಪಾತ: ವಾಹನಗಳಲ್ಲಿ ಸಿಲುಕಿ 23 ಪ್ರವಾಸಿಗರು ಸಾವು

ಲಾಹೋರ್, ಜನವರಿ 10: ಹಿಮಪಾತದಲ್ಲಿ ವಾಹನಗಳು ಸಿಲುಕಿ 10 ಮಂದಿ ಮಕ್ಕಳು ಸೇರಿ 23 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ವರದಿಯಾಗಿದೆ.

ಹಿಂದೆಂದೂ ಕಾಣದ ರೀತಿಯಲ್ಲಿ ಹಿಮಪಾತ ಸಂಭವಿಸಿದೆ. ಇದರಿಂದ ನಡುವೆ ಸಿಲುಕಿಕೊಂಡ ವಾಹನದೊಳಗೆ ಮರಗಟ್ಟಿದ ಜನರು ಅಲ್ಲಿಯೇ ಮೃತಪಟ್ಟಿದ್ದಾರೆ.

ಸಾವಿರಾರು ವಾಹನಗಳು ನಗರಕ್ಕೆ ಪ್ರವೇಶಿಸಿದ್ದರಿಂದ ರಾವಲ್ಪಿಂಡಿ ಜಿಲ್ಲೆಯ ಮುರ್ರೀ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳೂ ಸಂಚಾರ ದಟ್ಟಣೆಯಿಂದ ಬಂದ್ ಆಗಿದ್ದವು. ಇದರಿಂದ ಪ್ರವಾಸಿಗರು ಅಸಹಾಯಕರಾಗಿ ರಸ್ತೆ ನಡುವೆ ಸಿಲುಕುವಂತೆ ಆಗಿತ್ತು. ಈ ಪ್ರದೇಶವನ್ನು ನೈಸರ್ಗಿಕ ವಿಕೋಪಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.

Pakistan: 23 Tourists Stranded In Cars Freeze To Death In Murree

ಈ ಪರ್ವತ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಕಾರುಗಳು ಸಿಲುಕಿಕೊಂಡಿದ್ದವು. ಅವುಗಳ ಒಳಗೇ ಬಂಧಿಯಾದ ಪ್ರವಾಸಿಗರ ರಕ್ಷಣಾ ಕಾರ್ಯ ಹಾಗೂ ನೆರವಿಗಾಗಿ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಸೂಚಿಸಿದ್ದಾರೆ. ಪಂಜಾಬ್ ಸರ್ಕಾರವು ಆಸ್ಪತ್ರೆಗಳಲ್ಲಿ, ಪೊಲೀಸ್ ಠಾಣೆಗಳು ಹಾಗೂ ಆಡಳಿತ ಕಚೇರಿಗಳಲ್ಲಿ ಎಮರ್ಜೆನ್ಸಿ ಜಾರಿಗೊಳಿಸಿದೆ.

ಪರಿಸ್ಥಿತಿ ಕೈಮೀರಿರುವುದರಿಂದ ಈ ಪ್ರದೇಶಕ್ಕೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ವಿಪರೀತ ಹಿಮಪಾತದಿಂದ ಇಡೀ ನಗರ ಕಂಗಾಲಾಗಿದೆ. ಸುಮಾರು 23 ಸಾವಿರ ವಾಹನಗಳನ್ನು ನಗರದಿಂದ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಇನ್ನೂ ಸಾವಿರಾರು ವಾಹನಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆದಿದೆ.

ರಕ್ಷಣಾ ತಂಡ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ 1,122 ಮಂದಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 10 ಮಕ್ಕಳು ಸೇರಿದ್ದಾರೆ. ಪ್ರವಾಸಿಗರ ದುರ್ಮರಣಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸಲು ಸೇನೆ ಕಾರ್ಯಾಚರಣೆ ಇಳಿದಿದ್ದು, ಇನ್ನೂ ಸಿಲುಕಿಕೊಂಡಿರುವ ಜನರ ರಕ್ಷಣಾ ಕಾರ್ಯ ಮುಂದುವರಿದೆ. 15-20 ವರ್ಷಗಳಲ್ಲಿಯೇ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಇದರಿಂದ ಸ್ಥಳದಲ್ಲಿ ವಿಪರೀತ ದಟ್ಟಣೆ ಉಂಟಾಗಿದೆ.

ವಾಹನಗಳು ಹಿಂದೆ ಮುಂದೆ ಚಲಿಸಲಾಗದೆ ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಇದೇ ವೇಳೆ ಸುರಿದ ವಿಪರೀತ ಹಿಮದಿಂದ ಚಳಿ ಹೆಚ್ಚಾಗಿ ಅಲ್ಲಿಯೇ ಮೃತಪಟ್ಟಿದ್ದಾರೆ.

ಸದ್ಯ ಹಿಮಪಾತದಲ್ಲಿ ಸಾವಿರಾರು ಜನರು ಸಿಲುಕಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಪಾಕ್ ಪ್ರದೇಶದಲ್ಲಿರುವ ಪಂಜಾಬ್ ಸರ್ಕಾರವು ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.

ರಾವಲ್ಪಿಂಡಿ ಜಿಲ್ಲೆಯ ಮುರ್ರಿಗೆ ಸಾವಿರಾರು ವಾಹನಗಳು ಪ್ರವೇಶಿಸಿದ್ದು, ಸದ್ಯ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಲ್ಲಿ ಸಿಲುಕಿದ ಪ್ರವಾಸಿಗರು ಹಿಮಪಾತದಿಂದ ಹೊರಬರಲು ಅಸಹಾಯಕರಾಗಿದ್ದಾರೆ. ಸುಮಾರು 1,000 ಕಾರುಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ.

ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಸಿಕ್ಕಿಬಿದ್ದ ಪ್ರವಾಸಿಗರಿಗೆ ನೆರವು ನೀಡಲು ಸೂಚನೆಗಳನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+