ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟಗೊಂಡ ಬೋಟ್ ನಮ್ಮದಲ್ಲ ಎನ್ನುತ್ತಿದೆ ಪಾಕ್

By Kiran B Hegde
|
Google Oneindia Kannada News

ಇಸ್ಲಾಮಾಬಾದ್, ಜ. 3: ಗುಜರಾತ್‌ನ ಪೋರ್‌ಬಂದರ್ ಸಮೀಪ ಸ್ಫೋಟಗೊಂಡ ಶಂಕಿತ ಭಯೋತ್ಪಾದಕರ ಬೋಟ್ ಪಾಕಿಸ್ತಾನದ್ದು ಎಂಬ ವರದಿಯನ್ನು ಪಾಕಿಸ್ತಾನ ತಳ್ಳಿಹಾಕಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರೆ ತಸ್ನೀಮ್ ಅಸ್ಲಾಮ್, "ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಕೇತಿ ಬಂದರ್‌ನಿಂದ ಯಾವುದೇ ಬೋಟ್ ಭಾರತಕ್ಕೆ ಹೋಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. [ಕೋಸ್ಟ್ ಗಾರ್ಡ್ ಹದ್ದಿನ ಕಣ್ಣಿಗೆ ಪಾಕ್ ಹಾವು ಬಿದ್ದಿದ್ದು ಹೇಗೆ?]

pti

ಪಾಕಿಸ್ತಾನದ ಪ್ರತಿಷ್ಠೆಗೆ ಕಳಂಕ ತರುವುದು ಭಾರತದ ಉದ್ದೇಶ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಕಚೇರಿ ಆರೋಪಿಸಿದೆ. [ಸ್ಥಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು?]

ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನದಿಂದ ಬಂದಿದ್ದ ಭಯೋತ್ಪಾದಕರ ಬೋಟ್ ಒಂದು ಸ್ಫೋಟಗೊಂಡಿದೆ ಎಂದು ಭಾರತದ ಕೋಸ್ಟ್ ಗಾರ್ಡ್ ಶುಕ್ರವಾರ ಹೇಳಿಕೆ ನೀಡಿತ್ತು.

English summary
Pakistan has rejected India's claim that the crew of a Pakistani fishing boat blew up and sank their vessel in an attempt to evade capture at the hands of the Indian Navy in a high-speed chase at sea, Geo News reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X