18 ವರ್ಷದ ಹುಡುಗಿ ಜತೆ 49 ವರ್ಷದ ಪಾಕ್ ಸಂಸದನ ಮದುವೆ
ಇಸ್ಲಾಮಾಬಾದ್, ಫೆಬ್ರವರಿ 12: 49 ವರ್ಷದ ಪಾಕ್ ಸಂಸದನೊಬ್ಬ 18 ವರ್ಷದ ಯುವತಿಯನ್ನು ಮದುವೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಹಿಜಾಬ್ ಧರಿಸುವುದನ್ನು ವಿರೋಧಿಸಿದ್ದಕ್ಕೆ ಪಾಕಿಸ್ತಾನ ಕಿಡಿ ಕಾರಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ ಎಂದು ಹೇಳಿತ್ತು. ಆದರೆ ಇದೀಗ ಮಗಳ ವಯಸ್ಸಿನ ಯುವತಿಯನ್ನು ಸಂಸದನೊಬ್ಬ ಮದುವೆಯಾಗಿರುವುದು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಸಂಸದನ ಹೆಸರು ಅಮೀರ್ ಲಿಯಾಖತ್ ಹುಸೈನ್. ವಯಸ್ಸು 49, ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಸಂಸದ.

ಅಲ್ಲದೇ ಅಮೀರ್ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕರೂ ಆಗಿದ್ದಾರೆ. ಸಂಸದ ಅಮೀರ್ ಲಿಯಾಖತ್ ಹುಸೈನ್ 18 ವರ್ಷದ ಸಯೀದಾ ದಾನಿಯಾ ಶಾ ಎಂಬ ಯುವತಿ ಜೊತೆ ವಿವಾಹವಾಗಿದ್ದಾರೆ.
ಅಮೀರ್ ಲಿಯಾಖತ್ ಹುಸೈನ್ ತಮ್ಮ ಎರಡನೇ ಪತ್ನಿಯಿಂದ 15 ತಿಂಗಳ ಹಿಂದೆಯೇ ದೂರವಾಗಿದ್ದಾನೆ. ಇಬ್ಬರೂ ಬೇರ್ಪಡುವ ನಿರ್ಧಾರ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಬುಧವಾರದಂದು ಸಂಸದ ಅಮೀರ್ ತಮ್ಮ ಎರಡನೇ ಹೆಂಡತಿಗೆ ವಿಚ್ಚೇದನ ನೀಡಿದ್ದಾರೆ. ಅಂದು ರಾತ್ರಿಯೇ 18 ವರ್ಷದ ಸಯೀದಾಳ ಜೊತೆ ಸಪ್ತಪದಿ ತುಳಿದಿದ್ದಾರೆ.
49 ವರ್ಷದ ಸಂಸದ 18 ವರ್ಷದ ಯುವತಿ ಜೊತೆ ಮದುವೆಯಾದ ಸುದ್ದಿ ತಿಳಿದ ಬಳಿಕ ನೆಟಿಜೆನ್ಸ್ ಟೀಕೆ, ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನೀವು ಶ್ರೀಮಂತ ಮತ್ತು ಅಧಿಕಾರ ಹೊಂದಿದ್ದರೆ ಮುದುಕರಾಗಿದ್ದರೂ ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಬಹುದು ಎಂದು ವ್ಯಂಗ್ಯವಾಡಿದರೆ, ಹುಡುಗಿಯರು ಶಿಕ್ಷಣ ಮತ್ತು ಆರ್ಥಿಕ ಸಶಕ್ತತೆಗೆ ಈ ದಾರಿ ಹಿಡಿಯುತ್ತಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.
ಅಮೀರ್ ಲಿಯಾಖತ್ ಹುಸೈನ್ ಮತ್ತು ಸಯೀದಾ ದಾನಿಯಾ ಶಾ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅಮೀರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರ ಮದುವೆ ಫೋಟೋ ಹಂಚಿಕೊಂಡು ವಿವಾಹದ ಸುದ್ದಿ ಬಹಿರಂಗಪಡಿಸಿದ್ದಾರೆ.
ಇದು ಈಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗಳ ವಯಸ್ಸಿನ ಯುವತಿ ಜೊತೆ ಮದುವೆಯಾದ ಸಂಸದನ ವಿರುದ್ಧ ಭಾರೀ ಟೀಕೆ ಮತ್ತು ಮೀಮ್ಸ್ಗಳು ಹರಿದಾಡುತ್ತಿವೆ.
ಯುವತಿ ಜೊತೆ ಮೂರನೇ ವಿವಾಹವಾದ ತಮ್ಮ ಪಕ್ಷದ ಸಂಸದನಿಗೆ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕೆ ಲಿಯಾಖತ್ ಧನ್ಯವಾದ ತಿಳಿಸಿದ್ದಾರೆ.
Recommended Video
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications