• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಮೇಲೆ ದಾಳಿಗೆ ಭಾರತದಿಂದ ಅಫ್ಘಾನಿಸ್ತಾನ ಬಳಕೆ!

By Kiran B Hegde
|

ನವದೆಹಲಿ, ಜ. 12: ಕಾಮಾಲೆ ರೋಗದವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುತ್ತೆ ಅಂತಾರೆ. ಪೂರ್ವಾಗ್ರಹ ಪೀಡಿತರ ಕುರಿತು ಹೇಳಿದ ಮಾತಿದು. ಪಾಕಿಸ್ತಾನ ನಡೆದುಕೊಳ್ಳುತ್ತಿರುವ ರೀತಿಯೂ ಹಾಗೆಯೇ ಇದೆ.

ಪ್ರತಿದಿನ ಭಾರತದ ಗಡಿ ಪ್ರದೇಶದ ಮೇಲೆ ಗುಂಡಿನ ದಾಳಿ ನಡೆಸುತ್ತ ಭಯೋತ್ಪಾದಕರಿಗೆ ನಮ್ಮ ದೇಶದೊಳಗೆ ನುಸುಳಲು ಅವಕಾಶ ಮಾಡಿ ಕೊಡುತ್ತಿರುವುದು ಪಾಕಿಸ್ತಾನ ಎಂಬುದು ಜಗಜ್ಜಾಹೀರಾದ ಸಂಗತಿ. [ಇವರು ದಾನಕ್ಕೆ ಸ್ಮಗ್ಲಿಂಗ್ ಮಾಡ್ತಾರಾ?]

ಅಷ್ಟೇ ಅಲ್ಲ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸ್ವಲ್ಪ ಭೂಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟು ಅವರ ಸೈನಿಕ ಚಟುವಟಿಕೆಗೆ ಅವಕಾಶ ನೀಡಿ, ಭಾರತದ ಮೇಲೆ ಕತ್ತಿ ಮಸೆಯುತ್ತಿರುವುದು ವಿಶ್ವಕ್ಕೇ ಗೊತ್ತು. ಭಾರತವೇ ಪಾಕಿಸ್ತಾನದ ಮೇಲೆ ಮಸಲತ್ತು ನಡೆಸುತ್ತಿದೆ ಎಂಬುದು ಅವರ ಹಳೇ ವಾದ. [ಪಾಕ್ ನಲ್ಲೇ ಇದ್ದಾನೆ ದಾವೂದ್]

ಈಗಿನ ಆರೋಪವೆಂದರೆ "ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಭಾರತ ಅಫ್ಘಾನಿಸ್ತಾನದ ನೆಲ ಬಳಸುತ್ತಿದೆ" ಎಂಬುದು! ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ವ್ಯವಹಾರದ ಸಲಹೆಗಾರ ಸರ್ತಾಜ್ ಅಜೀಜ್ ಹೀಗೆಂದು ಆಪಾದಿಸಿದ್ದಾರೆ. [ಉಗ್ರ ಲಕ್ವಿ ಜೈಲಲ್ಲಿದ್ದಾಗ ತಂದೆಯಾಗಿದ್ದು ಹೇಗೆ?]

ಪಾಕಿಸ್ತಾನದ ಪ್ರಭಾವಿ ದಿನಪತ್ರಿಕೆ 'ಡಾನ್‌'ಗೆ ನೀಡಿದ ಸಂದರ್ಶನದಲ್ಲಿ ಸರ್ತಾಜ್ ಅಜೀಜ್ ಹೀಗೆ ಹೇಳಿದ್ದಾರೆ. ಅಷ್ಟೇ ಅಲ್ಲ, "ಭಾರತದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಅಸಹಕಾರ ಧೋರಣೆ ತಳೆದಿದೆ" ಎಂದೂ ಹೇಳಿದ್ದಾರೆ.

"ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪರಸ್ಪರ ಮಾತನಾಡಿಕೊಂಡು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ನಡೆಸದಿರಲು ನಿರ್ಧರಿಸಿದ ಮೇಲೆಯೇ ಭಾರತದ ಮೂಗು ತೂರಿಸುವಿಕೆ ಕಡಿಮೆಯಾಗಿದೆ" ಎಂಬ ಅಣಿಮುತ್ತು ಉದುರಿಸಿದ್ದಾರೆ. [ಇವರೇ ಮುಗ್ಧ ಮಕ್ಕಳ ಹತ್ಯೆಗೈದ ರಕ್ಕಸರು]

"ಭಾರತದಲ್ಲಿ ಮೊದಲಿದ್ದ ಯುಪಿಎ ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ನಡೆದುಕೊಳ್ಳುತ್ತಿತ್ತು. ಆದ್ದರಿಂದ ಪಾಕಿಸ್ತಾನದ ಜೊತೆ ಮೋದಿ ನೇತೃತ್ವದ ಸರ್ಕಾರ ಕೂಡ ಉತ್ತಮ ಸಂಬಂಧ ಹೊಂದಲು ಬಯಸಿದರೆ ಕಾಶ್ಮೀರ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು" ಎಂದು ಕೊನೆಯಲ್ಲಿ ಹೇಳಿ ತನ್ನ ದೇಶದ ನಿಜಬಣ್ಣ ಬಯಲು ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Adviser to Prime Minister Nawaz Sharif on National Security and Foreign Affairs Sartaj Aziz claims that "India is using Afghan soil to carry out attacks on Pakistan". Speaking on a DawnNews programme he said it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more