ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಿ ನಾಗರಿಕರು ಇಂಟರ್‌ನೆಟ್ ಬಳಸಿದರೂ ಜೈಲು ಶಿಕ್ಷೆ ಗ್ಯಾರಂಟಿ..!

|
Google Oneindia Kannada News

ಪಾಕಿಸ್ತಾನ ಯಾರಿಗೆ ಗೊತ್ತಿಲ್ಲ ಹೇಳಿ..? ಅದರಲ್ಲೂ ಪಾಪಿ ಪಾಕ್ ಸರ್ಕಾರದ ವಿರುದ್ಧ ಮಾತನಾಡಿದರೆ ಸಾಕು ಯಾರನ್ನದಾರೂ ಜೈಲಿಗೆ ಹಾಕ್ತಾರೆ, ಸ್ವಲ್ಪ ಮಿಸ್ ಆದರೂ ನೇಣಿಗೂ ಹಾಕ್ತಾರೆ, ಇಲ್ಲವಾದರೆ ಗೊತ್ತಾಗದ ರೀತಿ ಮಾಯ ಮಾಡಿ ಕಥೆ ಮುಗಿಸಿಬಿಡುತ್ತಾರೆ. ಹೀಗೆ ಪಾಕಿಸ್ತಾನವೇ ವಿಚಿತ್ರ. ಇಂತಹ ವಿಚಿತ್ರ ಲೋಕದ ಕುರಿತಾಗಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಪಾಕಿಗಳ ಲೋಕದಲ್ಲಿ ಇಂಟರ್ನೆಟ್ ಬಳಕೆ ನಿಷಿದ್ಧವಾಗುತ್ತಿದೆ. ಸರ್ಕಾರ ಹಾಗೂ ಮಿಲಿಟರಿ ಹಿಡಿತದಲ್ಲಿರುವ ಪಾಕ್‌ಗೆ ಜನರ ಸ್ವಾತಂತ್ರ್ಯ ಇಷ್ಟವಿಲ್ಲ. ಹೀಗೆ ಜನ ಸ್ವತಂತ್ರವಾಗಿ ಮಾತನಾಡಲು ಮುಂದಾದರೆ ಅವರ ಹೆಡೆಮುರಿ ಕಟ್ಟಲು ಮುಂದಾಗುತ್ತದೆ. ಈ ಕೃತ್ಯಗಳಿಗೆ ಸಾಕ್ಷಿಗಳೂ ಸಿಕ್ಕಿವೆ. ಪಾಕ್ ತನ್ನ ದೇಶದಲ್ಲಿ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿ ಭಾರಿ ಟೀಕೆಗೆ ಗುರಿಯಾಗಿದೆ.

ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದ ಮಹಾನ್ ನಾಯಕ ಜಿನ್ನಾ ಹೆಸರು ಜಿನ್‌ಗೆ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದ ಮಹಾನ್ ನಾಯಕ ಜಿನ್ನಾ ಹೆಸರು ಜಿನ್‌ಗೆ

ಇತ್ತೀಚೆಗೆ ಪಾಕ್ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದರಂತೆ. ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಕರಾಚಿ ಪೊಲೀಸರು ಆತನನ್ನ ಅರೆಸ್ಟ್ ಮಾಡಿದ್ದರು. ಆದರೆ ಹೀಗೆ ಬಂಧಿಸಿದ ನಂತರ ಆ ಪತ್ರಕರ್ತನನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದರು ಎಂಬ ಆಘಾತಕಾರಿ ವಿಚಾರ ರಿವೀಲ್ ಆಗಿದೆ.

ಇದು ಸ್ಯಾಂಪಲ್, ಆದರೆ ಪಾಕ್ ಸರ್ಕಾರ ಅಲ್ಲಿನ ನಾಗರಿಕರಿಗೆ ನೀಡುತ್ತಿರುವ ಟಾರ್ಚರ್ ಅಷ್ಟಿಷ್ಟಲ್ಲ. ಇದೀಗ ಪಾಕ್ ಪತ್ರಕರ್ತ ಬಿಲಾಲ್ ಫಾರೂಕ್ ಪ್ರಕರಣ ಪಾಕಿಸ್ತಾನದ ನೈಜ ಬಣ್ಣವನ್ನು ಬಯಲು ಮಾಡಿದೆ.

ನಾನು ಟ್ರಂಪ್ ಮಗಳು ಎಂದ ಮಹಿಳೆ: ಹಳೆಯ ವಿಡಿಯೋ ಮತ್ತೆ ವೈರಲ್ನಾನು ಟ್ರಂಪ್ ಮಗಳು ಎಂದ ಮಹಿಳೆ: ಹಳೆಯ ವಿಡಿಯೋ ಮತ್ತೆ ವೈರಲ್

ಮನಸ್ಸಿಗೆ ಬಂದಂತೆ ಮಾತನಾಡುವಂತಿಲ್ಲ

ಮನಸ್ಸಿಗೆ ಬಂದಂತೆ ಮಾತನಾಡುವಂತಿಲ್ಲ

ಪಾಕಿ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರು ಕಂಬಿ ಎಣಿಸೋದಕ್ಕೆ ಸಿದ್ಧವಾಗಿರಬೇಕು, ಇದು ಶತಸಿದ್ಧ. ಏಕೆಂದರೆ ಪಾಕ್ ಸರ್ಕಾರವನ್ನ ಎದುರು ಹಾಕಿಕೊಂಡು ನೆಮ್ಮದಿಯಾಗೂ ಮಾತನಾಡುವಂತಿಲ್ಲ. ಈ ನಿಯಮ ಮೀರಿದರೆ ಆ ಪ್ರಜೆಯ ನೆಮ್ಮದಿಗೆ ಬೆಂಕಿ ಬೀಳುವುದು ಗ್ಯಾರಂಟಿ. ಅಷ್ಟಕ್ಕೂ ಬೆಂಕಿ ಹಚ್ಚುವ ಕೆಲಸ ಮಾಡುವವರು ಬೇರಾರೂ ಅಲ್ಲ, ಪಾಕ್ ಸರ್ಕಾರದ ಚೇಲಾಗಳು. ಈಗಾಗಲೇ ಸಾವಿರಾರು ಹೋರಾಟಗಾರರು ಪಾಕ್ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಜೈಲು ಸೇರಿದ್ದಾರೆ. ಇಂದಿಗೂ ಕಂಬಿ ಎಣಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನಿ ಪತ್ರಕರ್ತರ ಸಂಖ್ಯೆ ಎಣಿಕೆಗೂ ಸಿಗದಷ್ಟು ದೊಡ್ಡದಾಗಿದೆ.

ಸೋಷಿಯಲ್ ಮೀಡಿಯಾ ಮೇಲೆ ಕಣ್ಣು

ಸೋಷಿಯಲ್ ಮೀಡಿಯಾ ಮೇಲೆ ಕಣ್ಣು

ಪಾಪಿ ಪಾಕ್ ಸರ್ಕಾರ ಅದೆಷ್ಟು ಖತರ್ನಾಕ್ ಎಂದರೆ, ಅಲ್ಲಿನ ಸೋಷಿಯಲ್ ಮೀಡಿಯಾಗಳಲ್ಲೂ ಪೋಸ್ಟ್‌ ಹಾಕುವುದು ಕಷ್ಟ ಕಷ್ಟ. ಹಾಗೇನಾದರೂ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕಿದ್ದೇ ಆದರೆ, ಕೆಲವೇ ನಿಮಿಷದಲ್ಲಿ ಪೊಲೀಸ್ ವಾಹನ ಮನೆ ಮುಂದೆ ಬಂದು ನಿಲ್ಲುತ್ತೆ. ಗ್ರಹಚಾರ ಕೆಟ್ಟರೆ ಅಂತಹ ಪೋಸ್ಟ್ ಹಾಕಿದವರು ನಾಪತ್ತೆ ಆದರೂ ಆಗಬಹುದು. ಅಂತಹ ಭಯಾನಕ ಪರಿಸ್ಥಿತಿ ಅಲ್ಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತಿವೆ. ಬಿಲಾಲ್ ಫಾರೂಕ್ ಪ್ರಕರಣದಲ್ಲೂ ಪಾಕ್ ಪೊಲೀಸರು ಇದೇ ರೀತಿ ವರ್ತಿಸಿದ್ದು, ಪಾಕ್ ಸರ್ಕಾರದ ವಿರುದ್ಧ ಮಾತನಾಡಿದ್ದ ಬಿಲಾಲ್‌ಗೆ ಟಾರ್ಚರ್ ಕೊಟ್ಟಿದ್ದಾರೆ.

ಹೆಜ್ಜೆ ಹೆಜ್ಜೆಗೂ ಭಯದ ವಾತಾವರಣ..!

ಹೆಜ್ಜೆ ಹೆಜ್ಜೆಗೂ ಭಯದ ವಾತಾವರಣ..!

ಪಾಕಿಸ್ತಾನ ಹಾಗೂ ಉತ್ತರ ಕೊರಿಯಾ ಎರಡೂ ದೇಶಗಳು ಸಾಮ್ಯತೆಯಲ್ಲಿ ಒಂದಷ್ಟು ಬದಲಾವಣೆಯನ್ನು ಮಾತ್ರ ಹೊಂದಿವೆ. ಏಕೆಂದರೆ ಉತ್ತರ ಕೊರಿಯಾದಲ್ಲಿ ಅಧಿಕೃತವಾಗಿ ಪ್ರಜೆಗಳಿಗೆ ಸ್ವಾತಂತ್ರ್ಯ ನೀಡಿಲ್ಲ. ಆದರೆ ಪಾಕಿಸ್ತಾನ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ರಾಷ್ಟ್ರವಾದರೂ ಜನರಿಗೆ ಸ್ವಾತಂತ್ರ್ಯ ನೀಡಿಲ್ಲ. ಹೆಸರಿಗೆ ಮಾತ್ರ ಪಾಕ್ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿದ್ದರೂ, ಅಲ್ಲಿ ಜನ ಸರ್ಕಾರದ ವಿರುದ್ಧ ಉಸಿರು ತೆಗೆಯುವಂತಿಲ್ಲ. ಅಕಸ್ಮಾತ್ ಉಸಿರು ತೆಗೆದರೆ ಅವರ ಕಥೆ ಮುಗಿದಂ. ಸದ್ದೇ ಇಲ್ಲದೆ ಅವರನ್ನು ಮಾಯ ಮಾಡುವ ಕಲೆಯನ್ನು ಪಾಕ್ ಸರ್ಕಾರ ಕಲಿತಿದೆ. ಪಾಕ್ ಜನರ ಚಲನವಲನ ಪರಿಶೀಲಿಸಲು ಅಲ್ಲಿ ಹೆಜೆ ಹೆಜ್ಜೆಗೂ ಗೂಢಾಚಾರಿಗಳು ಕೆಲಸ ಮಾಡುತ್ತಿದ್ದಾರೆ.

ಇಂಟರ್‌ನೆಟ್ ಬಳಕೆ ಮೇಲೆ ಹಿಡಿತ

ಇಂಟರ್‌ನೆಟ್ ಬಳಕೆ ಮೇಲೆ ಹಿಡಿತ

ಪಾಕಿಸ್ತಾನದಲ್ಲಿ ಇಂಟರ್‌ನೆಟ್ ಬಳಸಬಹುದಾದರೂ ನೂರಾರು ನಿಯಮಗಳು ಅನ್ವಯಿಸುತ್ತವೆ. ಅಕಸ್ಮಾತ್ ಇದೇ ಇಂಟರ್‌ನೆಟ್ ಬಳಸಿ ಪಾಕ್ ಸರ್ಕಾರದ ವಿರುದ್ಧ ಮಾತನಾಡಿದರೆ ಆತ ಎಲ್ಲಿಹೋದ ಎಂಬ ಮಾಹಿತಿ ಕೂಡ ಸಿಗುವುದಿಲ್ಲ. ಈಗಾಗಲೇ ಸಾವಿರಾರು ಪಾಕ್ ಪತ್ರಕರ್ತರು ನಾಪತ್ತೆಯಾಗಿದ್ದಾರೆ.

ಹಲವರನ್ನು ನೇರ ಜೈಲಿಗೆ ಹಾಕಿ ವಾರ್ನಿಂಗ್ ಕೊಡುತ್ತಿದೆ ಪಾಕಿಸ್ತಾನದ ಸರ್ಕಾರ. ಜನರು ಮುಕ್ತವಾಗಿ ಇಂಟರ್‌ನೆಟ್ ಬಳಕೆ ಮಾಡಬೇಕು, ಆದರೆ ಪಾಕಿಸ್ತಾನದಲ್ಲಿ ಈ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಯಾರು ಏನೇ ಮಾಡಿದರೂ ಅದು ಪಾಕ್ ಸರ್ಕಾರದ ಪರವಾಗಿಯೇ ಇರಬೇಕು ಹಾಗೂ ಪಾಪಿಗಳ ವಿರುದ್ಧ ಮಾತನಾಡಬಾರದು. ಪಾಕಿಸ್ತಾನದ ಈ ನಡೆ ವಿಶ್ವದ ಕೆಂಗಣ್ಣಗೆ ಗುರಿಯಾಗಿದೆ. ತನ್ನ ನೆಲದಲ್ಲೇ ನೂರಾರು ಸಮಸ್ಯೆಗಳನ್ನ ಇಟ್ಟುಕೊಂಡು ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಿ ಸರ್ಕಾರದ ಬಣ್ಣ, ಪತ್ರಕರ್ತ ಬಿಲಾಲ್ ಫಾರೂಕ್ ಕೇಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಬಟಾಬಯಲಾಗಿದೆ.

English summary
Pakistan government targets the internet users and journalists in recent years who speaks against the government. This move shows the Pakistan governments criticism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X