ಮಕ್ಕಳಿಗೆ ಕೊರೊನಾ ಲಸಿಕೆ; ಆಕ್ಸ್‌ಫರ್ಡ್ ವಿವಿಯಿಂದ ಮೊದಲ ಬಾರಿ ಪರೀಕ್ಷೆ

ಲಂಡನ್, ಫೆಬ್ರುವರಿ 13: ಕೊರೊನಾ ಸೋಂಕು ತಡೆಗಟ್ಟಲು ವಿಶ್ವದಾದ್ಯಂತ ಹಲವು ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಆದರೆ ಮಕ್ಕಳಿಗೆ ಕೊರೊನಾ ಸೋಂಕಿನ ಲಸಿಕೆಯು ಲಭ್ಯವಿಲ್ಲದಾಗಿದ್ದು, ಇದೇ ಮೊದಲ ಬಾರಿಗೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಧ್ಯಯನ ನಡೆಸಲು ಮುಂದಾಗಿದೆ.

ಮಕ್ಕಳಿಗೆ ಕೊರೊನಾ ಲಸಿಕೆಯ ಸುರಕ್ಷತೆ ಹಾಗೂ ಲಸಿಕೆಗೆ ಮಕ್ಕಳಲ್ಲಿ ಪ್ರತಿರೋಧದ ಕುರಿತು ಅಧ್ಯಯನ ನಡೆಸಲಿದ್ದು, ಆಸ್ಟ್ರಾಜೆನೆಕಾ ಜೊತೆಗೂಡಿ ಅಭಿವೃದ್ಧಿಪಡಿಸಿರುವ ಲಸಿಕೆಯೊಂದಿಗೆ ಈ ಅಧ್ಯಯನ ನಡೆಸಲಿದೆ.

ಈ ಹೊಸ ಲಸಿಕೆಯ ಮಧ್ಯಂತರ ಪ್ರಯೋಗ ನಡೆಯುತ್ತಿದ್ದು, ಆರು ವರ್ಷದಿಂದ ಹದಿನೇಳು ವಯಸ್ಸಿನವರಿಗೆ ಈ ಲಸಿಕೆ ಸೂಕ್ತವೇ ಎಂಬುದರ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ.

Oxford University Launched Study To Assess Corona Vaccine On Children

ಮುನ್ನೂರು ಸ್ವಯಂಸೇವಕರು ಲಸಿಕೆ ಪಡೆಯಲಿದ್ದು, ಇದೇ ತಿಂಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಆಕ್ಸ್‌ಫರ್ಡ್ ತಿಳಿಸಿದೆ. ಈ ಮುನ್ನ ಮಕ್ಕಳಿಗೆ ಮೂಗಿನ ಮೂಲಕ ನೀಡುವ ಲಸಿಕೆ ಅಭಿವೃದ್ಧಿಪಡಿಸುವ ಕುರಿತು ಪ್ರಸ್ತಾಪ ಕೇಳಿಬಂದಿತ್ತು.

ಅಗ್ಗದ ಬೆಲೆ ಹಾಗೂ ಸುಲಭ ಸಾಗಣೆ ಕಾರಣದಿಂದಾಗಿ ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಯನ್ನು "ವಿಶ್ವದ ಲಸಿಕೆ" ಎಂದು ಪರಿಗಣಿಸಲಾಗಿದೆ. ಈ ವರ್ಷದಲ್ಲಿ ಆಸ್ಟ್ರಾಜೆನೆಕಾ ಮೂರು ಬಿಲಿಯನ್ ಡೋಸ್‌ಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+