ಯುರೋಪಿನಲ್ಲಿ ನೀರು ಕುಡಿಯದಂತೆ ಎಚ್ಚರಿಕೆ

ನ್ಯೂಯಾರ್ಕ್, ಫೆ.4: ಅಮೆರಿಕ ಹಾಗೂ ಯುರೋಪು ಖಂಡದಲ್ಲಿ ಚಳಿಗಾಲ ಅವಧಿಗೂ ಮುನ್ನ ಕಾಲಿಟ್ಟಿದ್ದಂತಾಗಿದೆ. ಶೀತಗಾಳಿ ಕೊರೆತಕ್ಕೆ ಜನತೆ ತತ್ತರಿಸುತ್ತಿದ್ದಾರೆ. ಅಮೆರಿಕದಲ್ಲಿ ಸುಮಾರು 400ಕ್ಕೂ ಅಧಿಕ ವಿಮಾನಯಾನ ರದ್ದಾಗಿದೆ. ಸೋಮವಾರ ಹಿಮಪಾತದ ಕಾರಣದಿಂದ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕಿದ ವಾತವರಣ ಉಂಟಾಗಿತ್ತು ಎಂದು ವರದಿ ಬಂದಿದೆ.

ಅಮೆರಿಕದ ಪರಿಸ್ಥಿತಿಗೂ ಮುನ್ನ ಯುರೋಪಿನ ಹವಾಮಾನದ ಬಗ್ಗೆ ಗಮನ ಹರಿಸಿದರೆ, ಸ್ಲೋವೇನಿಯಾ ದೇಶದ ಕಾಲು ಭಾಗ ವಿದ್ಯುಚ್ಛಕ್ತಿ ವಂಚಿತವಾಗಿದೆ. ಯುರೋಪಿನಲ್ಲಿ ಕಳೆದ ದಶಕದಲ್ಲೇ ಅತ್ಯಂತ ಭೀಕರ ಚಳಿಗಾಲ ಈಗ ಎದುರಾಗಿದೆ ಎನ್ನಲಾಗಿದೆ. ಅನೇಕ ದೇಶಗಳ ಶಾಲಾ, ಕಾಲೇಜುಗಳು ಬಂದ್ ಆಗಿವೆ. ಶೇ 40 ರಷ್ಟು ಯುರೋಪು ಚಳಿಗಾಲಕ್ಕೆ ಹೆದರಿ ಬೆಚ್ಚಗೆ ಕಂಬಳಿ ಹೊದ್ದು ಮಲಗಿದೆ. ಎಂಥಾ ದುರ್ಬರ ಪರಿಸ್ಥಿತಿ ಇದೇ ಎಂದರೆ, ಹಲವೆಡೆ ನಲ್ಲಿ ನೀರು ಕುಡಿಯದಂತೆ ಎಚ್ಚರಿಕೆ ವಿಧಿಸಲಾಗಿದೆ. ಕ್ರೋಯೇಷಿಯಾ, ಸೆರ್ಬಿಯಾ ಹಾಗೂ ಜರ್ಮನಿ ಅತ್ಯಂತ ಹೆಚ್ಚು ಚಳಿ ಹೊಡೆತಕ್ಕೆ ಸಿಕ್ಕಿರುವ ದೇಶಗಳಾಗಿವೆ.

Over 400 flights cancelled as storm hits USA, Europe

ಇತ್ತ ನ್ಯೂಯಾರ್ಕಿಗೆ ಬಂದರೆ ವಿಮಾನ ಟ್ರಾಕಿಂಗ್ ವೆಬ್ ತಾಣ ಫ್ಲೈಟ್ ಅವೇರ್ ವರದಿ ಪ್ರಕಾರ ಸುಮಾರು 177 ವಿಮಾನಗಳು ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದರೆ, ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 75 ಹಾಗೂ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 188 ವಿಮಾನಗಳು ಹಾರಾಟ ಸಾಧ್ಯವಾಗದೆ ನಿಲ್ಲಿಸಲಾಗಿದೆ.

ಎಚ್ಚರಿಕೆ ಎಚ್ಚರಿಕೆ: ಅಮೆರಿಕದ ಪೂರ್ವ ಭಾಗದಲ್ಲಿ ಇದುವರೆವಿಗೂ ಶೀತ ಮಾರುತದ ಹೊಡೆತಕ್ಕೆ ಸಿಲುಕಿ ಸುಮಾರು 13 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹವಾಮಾನ ಸಂಸ್ಥೆ ನ್ಯೂಯಾರ್ಕ್ ನಗರ ಹಾಗೂ ನ್ಯೂಜೆರ್ಸಿ ನಗರದಲ್ಲಿ ಶೀತ ಮಾರುತ ದಾಳಿ ಹಾಗೂ 12-20 ಸೆಂ.ಮೀ ಹಿಮರಾಶಿ ನಿರೀಕ್ಷೆಯಿದೆ ಎಂದು ಎಚ್ಚರಿಸಿದೆ. (ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+