ಸೇನೆ ನಮ್ಮ ಕೈಗಳನ್ನು ಕಟ್ಟಿ ಹಾಕಿತ್ತು; ಇಮ್ರಾನ್ ಖಾನ್

ಇಸ್ಲಾಮಾಬಾದ್ ಜೂನ್ 2: "ನನ್ನ ಸರಕಾರ ದುರ್ಬಲವಾಗಿತ್ತು. ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಅಧಿಕಾರ ನನ್ನ ಬಳಿ ಇರಲಿಲ್ಲ. ಅದು ಯಾರ ಬಳಿ ಇತ್ತೆಂಬುದು ಎಲ್ಲರಿಗೂ ತಿಳಿದಿದೆ" ಎಂದು ಪಾಕಿಸ್ತಾನ ಸೇನೆಯ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟೀಕಾಪ್ರಹಾರ ಮಾಡಿದ್ದಾರೆ.

ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿ ಒಂದರ ಸಂದರ್ಶನದ ಸಂದರ್ಭದಲ್ಲಿ ಬುಧವಾರ ಮಾತನಾಡಿದ ಅವರು, ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಸಂದರ್ಭವನ್ನು ನೆನಪಿಸಿಕೊಂಡರು.

"ಈ ರೀತಿ ಮಾಡುವಂತೆ ಯಾರು ಹಿಂದಿನಿಂದ ಆದೇಶ ನೀಡಿದರು. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷಗಳ ನಾಯಕರ ವಿರುದ್ಧ ಯಾರು ಪ್ರಕರಣಗಳನ್ನು ದಾಖಲಿಸಿದರು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ" ಎಂದು ಇಮ್ರಾನ್ ಖಾನ್ ಹೇಳಿದರು.

"ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ತನ್ನ ಸರಕಾರ ದುರ್ಬಲವಾಗಿತ್ತು. ಸಂಖ್ಯಾ ಬಲ ಕಡಿಮೆ ಇದ್ದ ಕಾರಣ ಬೇರೆ ಪಕ್ಷಗಳತ್ತ ಮುಖ ಮಾಡುವಂತಾಯಿತು. ಈಗ ಆ ರೀತಿಯ ಸಂದರ್ಭ ಎದುರಾದರೆ, ಮರು ಚುನಾವಣೆಗೆ ಹೋಗುತ್ತೇನೆ. ಪೂರ್ಣ ಬಲದೊಂದಿಗೆ ಬರುತ್ತೇನೆ ಅಥವಾ ಅಧಿಕಾರವನ್ನೇ ಹಿಡಿಯುವುದಿಲ್ಲ,'' ಎಂದು ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ತಿಳಿಸಿದರು.

 ಬ್ಲಾಕ್ ಮೇಲ್ ಮಾಡಲಾಯಿತು

ಬ್ಲಾಕ್ ಮೇಲ್ ಮಾಡಲಾಯಿತು

"ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಎಲ್ಲ ಕಡೆಯಿಂದಲೂ ನಮ್ಮನ್ನು ಬ್ಲಾಕ್ ಮೇಲ್ ಮಾಡಲಾಯಿತು. ಎಲ್ಲ ಜನರಿಗೂ ತಿಳಿದಿದೆ ಪಾಕಿಸ್ತಾನದ ಅಧಿಕಾರ ಯಾರ ಬಳಿ ಅಡಗಿದೆ ಎಂದು. ಪ್ರತಿಯೊಂದಕ್ಕೂ ಅದರ ಮೇಲೆ ಅವಲಂಬನೆಯಾಗಬೇಕಿತ್ತು,'' ಎಂದು ಪಾಕ್ ಸೇನೆಯ ವಿರುದ್ಧ ಪರೋಕ್ಷವಾಗಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದರು.

"ಶತ್ರುಗಳ ವಿರುದ್ಧ ಸೂಕ್ತ ಹೋರಾಟ ನಡೆಸಲು ಪ್ರತಿಯೊಂದು ರಾಷ್ಟ್ರಕ್ಕೂ ಬಲಿಷ್ಠವಾದ ಸೇನೆ ಅಗತ್ಯವಿದೆ. ಆದರೆ ಬಲಿಷ್ಠ ಸೇನೆ ಮತ್ತು ಬಲಿಷ್ಠ ಸರಕಾರ ಎರಡೂ ಕೂಡ ಸಮನಾಗಿ ಇರುವುದು ಅವಶ್ಯಕ,'' ಎಂದು ಪ್ರತಿಪಾದಿಸಿದರು.

ಪ್ರತಿಯೊಂದುಕ್ಕೂ ಸೇನೆ ಮೇಲೆ ಅವಲಂಬನೆ

ಪ್ರತಿಯೊಂದುಕ್ಕೂ ಸೇನೆ ಮೇಲೆ ಅವಲಂಬನೆ

"ನಾವು ಪ್ರತಿಯೊಂದು ಸಂದರ್ಭದಲ್ಲೂ ಪಾಕ್ ಸೇನೆಯ ಮೇಲೆ ಅವಲಂಬಿಸಬೇಕಾಗಿತ್ತು. ಪ್ರತಿಯೊಂದು ಮಹತ್ವದ ನಿರ್ಧಾರವನ್ನು ಅವರನ್ನು ಕೇಳಿಯೇ ತೆಗೆದುಕೊಳ್ಳಬೇಕಾಯಿತು. ಪಾಕ್ ಸೇನೆ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. ಆದರೆ ಇದೇ ವೇಳೆ ಕೆಲವು ಮಾಡಬಾರದ ಕೆಲಸಗಳನ್ನು ಅವು ಮಾಡಿದೆ. ನ್ಯಾಷನಲ್ ಅಕೌಂಟೆಬಿಟಿ ಬ್ಯೂರೋದ ಸಂಪೂರ್ಣ ಹಿಡಿತ ಅವರ ಬಳಿ ಇದೆ. ಹೀಗಾಗಿ ನಾವು ಅಧಿಕಾರ ಕಳೆದುಕೊಂಡೆವು,'' ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಸರಕಾರಿ ಇಲಾಖೆಗಳ ಮೇಲೆ ಸೇನೆ ಹಿಡಿತ

ಸರಕಾರಿ ಇಲಾಖೆಗಳ ಮೇಲೆ ಸೇನೆ ಹಿಡಿತ

"ನಮ್ಮ ಸರಕಾರಕ್ಕೆ ಸಂಪೂರ್ಣ ಜವಾಬ್ದಾರಿ ಇತ್ತು. ಆದರೆ ಸರಕಾರದ ಮುಖ್ಯವಾದ ಇಲಾಖೆಗಳ ಮೇಲೆ ಹಿಡಿತವಿರಲಿಲ್ಲ. ಸಂಪೂರ್ಣ ಅಧಿಕಾರ ನಮ್ಮ ಬಳಿ ಇರಲಿಲ್ಲ,'' ಎಂದು ಬಹಿರಂಗವಾಗಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.

ನದೀಮ್ ಅಂಜುಂ ನೇಮಕ ವಿಚಾರದಲ್ಲಿ ಮುನಿಸು

ನದೀಮ್ ಅಂಜುಂ ನೇಮಕ ವಿಚಾರದಲ್ಲಿ ಮುನಿಸು

ಕಳೆದ ವರ್ಷ ಪಾಕ್ ಸೇನೆಯ ಐಎಸ್ಐ ಗೂಢಾಚಾರಿಕೆ ಏಜೆಂಟ್ ಆಗಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂ ನೇಮಿಸಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಇದು ಪಾಕ್ ಸೇನೆಯ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ನಂತರ ನದೀಮ್ ಅಂಜುಂ ನೇಮಿಸಲು ಇಮ್ರಾನ್ ಖಾನ್ ಒಪ್ಪಿಗೆ ಸೂಚಿಸಿದರು.

ಆದರೆ ಇಷ್ಟರ ವೇಳೆ ಪಾಕ್ ಸೇನೆ ಮತ್ತು ಇಮ್ರಾನ್ ಖಾನ್ ನಡುವಿನ ಸಂಬಂಧ ಹಳಸಿತ್ತು ಎಂಬ ಸುದ್ದಿ ಇದೆ. 2018ರಲ್ಲಿ ಪಾಕ್ ಸೇನೆಯ ಬೆಂಬಲದೊಂದಿಗೆ ಇಮ್ರಾನ್ ಖಾನ್ ಸರಕಾರ ಅಧಿಕಾರಕ್ಕೆ ಬಂತು. ಆದರೆ ಪಾಕ್ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಇಮ್ರಾನ್ ಖಾನ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಸದ್ಯ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಶೆಹಬಾಜ್ ಶರೀಫ್ ಪಾಕ್ ಪ್ರಧಾನಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+