ಇಸ್ರೇಲ್ ಪಾಲಿಗೆ ಶ್ರೀರಕ್ಷೆ ಆಗಿರುವ ಐರನ್ ಡೋಮ್, ಇರಾನ್ ದಾಳಿಯಿಂದ ಸಿಗುತ್ತಿದೆ ರಕ್ಷಣೆ | Operation Roaring Lion
ಇರಾನ್ ವಿರುದ್ಧ ಯುದ್ಧ ಆರಂಭವಾದ ನಂತರ ಇಸ್ರೇಲ್ ಹಾಗೂ ಅಮೆರಿಕ ತಮ್ಮ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿವೆ. ಪ್ರಮುಖವಾಗಿ ಇರಾನ್ ಪಕ್ಕದಲ್ಲೇ ಇರುವ ಇಸ್ರೇಲ್‌ಗೆ ಈಗ ರಕ್ಷಣೆಯ ಅಗತ್ಯತೆ ಇದ್ದು, ಇರಾನ್ ಹಾರಿಸುತ್ತಿರುವ ಕ್ಷಿಪಣಿಗಳಿಂದ ರಕ್ಷಣೆ ಪಡೆಯಬೇಕಿದೆ. ಹೀಗಿದ್ದಾಗ ಇಸ್ರೇಲ್ ಪಾಲಿಗೆ ಐರನ್ ಡೋಮ್ ಎಂಬುದು ಶ್ರೀರಕ್ಷೆ ಆಗಿದ್ದು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡ್ತಾ ಇದೆ. ಇಸ್ರೇಲ್ ಪುಟ್ಟ ದೇಶವೇ ಆಗಿದ್ದರೂ ಸೇನೆಯ ವಿಚಾರದಲ್ಲಿ ಹಾಗೂ ದಾಳಿ ಮಾಡುವ ವಿಚಾರ ಬಂದರೆ ಯಾವುದೇ ದೊಡ್ಡ ದೊಡ್ಡ ದೇಶಗಳನ್ನೇ ನಡುಗಿಸುತ್ತದೆ. ಹೀಗಿದ್ದಾಗ ಇರಾನ್ ದಾಳಿಯನ್ನ ಎದುರಿಸಲು ಇಸ್ರೇಲ್ ಪಾಲಿಗೆ ಅಮೆರಿಕ ನಿರ್ಮಿತ ಐರನ್ ಡೋಮ್ ನೆರವಾಗುತ್ತಿದೆ.
ಮಧ್ಯಪ್ರಾಚ್ಯ ಭಾಗದಲ್ಲಿ ಹಲವು ದೇಶಗಳನ್ನು ಎದುರು ಹಾಕಿಕೊಂಡು ಬಾಳುತ್ತಿರುವ ಇಸ್ರೇಲ್ ದೇಶ ಬಲಿಷ್ಠ ಸೇನೆಯನ್ನು ಕಟ್ಟಿಕೊಂಡಿದೆ. ಇಸ್ರೇಲ್ ಸೇನೆ ಸುಮಾರು 1,70,000 ಸಕ್ರಿಯ ಸೈನಿಕರ ಬಲವನ್ನ ಹೊಂದಿದ್ದು, ಇದರ ಜೊತೆಗೇ 4 ಲಕ್ಷಕ್ಕೂ ಹೆಚ್ಚು ಮೀಸಲು ಪಡೆ ಕೂಡ ಇರುವುದು ಈ ಪುಟಾಣಿ ದೇಶಕ್ಕೆ ಆನೆಬಲ ತರಿಸಿದೆ. 600ಕ್ಕೂ ಹೆಚ್ಚು ಯುದ್ಧ ವಿಮಾನಗಳು ಅಮೆರಿಕ ಜೊತೆಗೆ ಸೇರಿ ಇರಾನ್ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಸಾವಿರಾರು ಕ್ಷಿಪಣಿಗಳು ಇಸ್ರೇಲ್ ಬಳಿ ಇದ್ದು, ಇದೆಲ್ಲವನ್ನೂ ಮೀರಿ ಇಸ್ರೇಲ್‌ಗೆ ಭಾರಿ ದೊಡ್ಡ ಸಹಾಯ ಮಾಡುತ್ತಿರುವುದು ಐರನ್ ಡೋಮ್ ಎನ್ನಬಹುದು. ಏಕೆಂದರೆ ಹತ್ತಿರದಲ್ಲೇ ಇರುವ ಇರಾನ್ ಹಾರಿಸುವ ಕ್ಷಿಪಣಿಗಳನ್ನು ಗುರುತಿಸಿ, ಆಕಾಶದಲ್ಲೇ ಅವುಗಳನ್ನು ತಡೆಯಲು ಇಸ್ರೇಲ್ ಬಳಿ ಈಗ ಬೇರೆ ಯಾವುದೇ ಅಸ್ತ್ರ ಇಲ್ಲ. ಇದೇ ಕಾರಣಕ್ಕೆ ಐರನ್ ಡೋಮ್ ಮೂಲಕ ರಕ್ಷಣೆಯನ್ನ ಪಡೆಯುತ್ತಿದೆ ಇಸ್ರೇಲ್ ಇದೀಗ.

ಬ್ಯಾಟರಿ ಬಗ್ಗೆ ಶುರುವಾಯ್ತಾ ಚಿಂತೆ?
ಐರನ್ ಡೋಮ್ ಶತ್ರು ಪಡೆಗಳ ಕ್ಷಿಪಣಿ ದಾಳಿಯನ್ನು ಬೆನ್ನತ್ತಿ ಬಡಿದು ಹಾಕುವ ತಾಕತ್ತು ಹೊಂದಿದೆ, ಆದರೆ ಐರನ್ ಡೋಮ್ ವಿಚಾರದಲ್ಲಿ ಬ್ಯಾಟರಿಯದ್ದೇ ದೊಡ್ಡ ಚಿಂತೆ. ಅದರಲ್ಲೂ ಯುದ್ಧದ ವೇಳೆ ಐರನ್ ಡೋಮ್ ಭದ್ರವಾಗಿ ಮತ್ತು ಸತತವಾಗಿ ಕಾರ್ಯನಿರ್ವಹಣೆ ಮಾಡಲು ಬ್ಯಾಟರಿ ಅತ್ಯಗತ್ಯ. ಈ ಹಿನ್ನೆಲೆ, ಇಸ್ರೇಲ್ ಕೂಡ ಯುದ್ಧ ಆರಂಭಕ್ಕೆ ಮೊದಲೇ ತನ್ನ ಐರನ್ ಡೋಮ್ ಭದ್ರ ಮಾಡಿಕೊಂಡಿತ್ತಾ? ಹಾಗೇ ಯುದ್ಧ ಹಲವು ತಿಂಗಳ ಕಾಲ ಮುಂದುವರಿದರೆ ಅದಕ್ಕೆ ಬೇಕಾದ ಬ್ಯಾಟರಿ ವ್ಯವಸ್ಥೆ ಇದೀಗ ಆಗಿದೆಯಾ? ಎಂಬ ಚರ್ಚೆ ನಡೆಯುತ್ತಿದೆ. ಇದೆಲ್ಲಾ ಏನೇ ಇರಲಿ, ಆದರೆ ಇಸ್ರೇಲ್ ಪಾಲಿಗೆ ಸೂಪರ್ ಪವರ್ ಐರನ್ ಡೋಮ್ ವ್ಯವಸ್ಥೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಭದ್ರತೆ ನೀಡುತ್ತಿದೆ. ಹಾಗೇ ಇರಾನ್ ಹಾರಿಸುತ್ತಿರುವ ಕ್ಷಿಪಣಿಗಳನ್ನು ಹುಡುಕಿ ಹುಡುಕಿ ಆಕಾಶದಲ್ಲೇ ನಾಶ ಮಾಡುತ್ತಿದೆ.
ಅಮೆರಿಕ ಕಡೆಯಿಂದ ಅಸ್ತ್ರಗಳ ಪೂರೈಕೆ?
ಇಸ್ರೇಲ್ ಬೇರೆ ಅಲ್ಲ, ಅಮೆರಿಕ ಬೇರೆಯಲ್ಲ... ಏಕೆಂದರೆ ಎರಡೂ ದೇಶಗಳು ಒಗ್ಗಟ್ಟನಿಂದ ಸಾಗುತ್ತಾ ಇವೆ. ಅಮೆರಿಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಇಸ್ರೇಲ್ ಜೊತೆಗೆ ಮಾತ್ರ ಯಾವ ಕಾರಣಕ್ಕೂ ಕಿರಿಕ್ ಆಗುವುದಿಲ್ಲ. ಇಸ್ರೇಲ್ ಜೊತೆಗೆ ಅತ್ಯುತ್ತಮ ಸಂಬಂಧ ಇಟ್ಟುಕೊಂಡು ಅಮೆರಿಕ ಸರ್ಕಾರ ಮುಂದುವರಿಯುವುದು ವಾಡಿಕೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಕಾಲಘಟ್ಟದಲ್ಲಿ, ಅಮೆರಿಕ ಮತ್ತು ಇಸ್ರೇಲ್ ನಡುವೆ ಅತ್ಯುತ್ತಮ ಬಾಂಧವ್ಯ ಇದೆ. ಎರಡೂ ದೇಶಗಳು ಅತ್ಯುತ್ತಮವಾಗಿ ಸಮತೋಲನ ಕಾಪಾಡಿಕೊಂಡು ಮುಂದುವರಿದಿವೆ. ಹೀಗಿದ್ದಾಗ ಇರಾನ್ ವಿರುದ್ಧ ಮೊದಲು ದಾಳಿ ಶುರು ಮಾಡಿರುವ ಇಸ್ರೇಲ್‌ಗೆ ಈಗ ಮತ್ತಷ್ಟು ಅಸ್ತ್ರಗಳ ಅಗತ್ಯತೆ ಇದ್ದು, ಇದನ್ನು ಅಮೆರಿಕ ಇದೀಗ ಪೂರೈಕೆ ಮಾಡುತ್ತಾ? ಎಂಬ ಕುತೂಹಲ ಮೂಡಿದೆ.












Click it and Unblock the Notifications