ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

COP26 ಶೃಂಗಸಭೆಯಲ್ಲಿ ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಸಂದೇಶ ರವಾನಿಸಿದ ಮೋದಿ

|
Google Oneindia Kannada News

ಗ್ಲ್ಯಾಸ್ಗೋ, ನವೆಂಬರ್ 2: ಜಗತ್ತಿನಾದ್ಯಂತ ಕೈಗಾರಿಕೆಗಳ ಕ್ರಾಂತಿಯ ನಡುವೆ ಪರಸರ ಮಾಲಿನ್ಯವನ್ನು ನಿಯಂತ್ರಿಸುವುದರ ಜೊತೆಗೆ ಸಮತೋಲನವನ್ನು ಮರು ಸ್ಥಾಪಿಸುವುದಕ್ಕೆ ಸೌರಶಕ್ತಿಯು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ಹವಾಮಾನ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 'ಶುದ್ಧ ತಂತ್ರಜ್ಞಾನ ಆವಿಷ್ಕಾರದ ನಿಯೋಜನೆ ಜೊತೆಗೆ ವೇಗವನ್ನು ಹೆಚ್ಚಿಸುವುವ ನಿಟ್ಟಿನಲ್ಲಿ ಜಾಗತಿಕ ಸೌರ ವಿದ್ಯುತ್ ಗ್ರಿಡ್‌ ಅನ್ನು ಪ್ರತಿಪಾದಿಸಿದ ಅವರು "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಎಂಬ ಕರೆಯನ್ನು ನೀಡಿದರು.

 COP26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ 5 ಪ್ರತಿಜ್ಞೆಗಳು COP26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ 5 ಪ್ರತಿಜ್ಞೆಗಳು

ಯಾವುದೇ ಸ್ಥಳದ ಸೌರಶಕ್ತಿ ಸಾಮರ್ಥ್ಯವನ್ನು ಕಂಡುಹಿಡಿಯಲು ಉಪಗ್ರಹ ಡೇಟಾವನ್ನು ಬಳಸುವ "ಸೋಲಾರ್ ಕ್ಯಾಲ್ಕುಲೇಟರ್ ಅಪ್ಲಿಕೇಶನ್" ಅನ್ನು ಜಗತ್ತಿಗೆ ನೀಡಲು ಇಸ್ರೋ ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಸೌರ ವಿದ್ಯುತ್ ಯೋಜನೆಗಳಿಗೆ ಸ್ಥಳವನ್ನು ನಿರ್ಧರಿಸಲು ಈ ಕ್ಯಾಲ್ಕುಲೇಟರ್ ಸಹಾಯ ಮಾಡುತ್ತದೆ ಎಂದು ಹೇಳಿದರು.

one world, One sun, one Grid: PM Modi Speech Highlights in COP26 summit in Glasgow

ಕಚ್ಚಾತೈಲದ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖ:

"ಕೈಗಾರಿಕಾ ಕ್ರಾಂತಿಯನ್ನು ಕಚ್ಚಾತೈಲಗಳಿಂದ ನಡೆಸಲಾಯಿತು. ಕಚ್ಚಾತೈಲಗಳ ಬಳಕೆಯಿಂದ ಅನೇಕ ದೇಶಗಳು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಾಯಿತು. ಆದರೆ ನಮ್ಮ ನೆಲದಲ್ಲಿ ಬಡತನವು ಹಾಗೆ ಉಳಿಯಿತು. ಕಚ್ಚಾತೈಲ ಜಾಗತಿಕ ಬೌಗೋಳಿಕ ಓಟಕ್ಕೆ ಕಾರಣವಾಗಿದೆ. ಇದರ ಮಧ್ಯೆ ತಂತ್ರಜ್ಞಾನವು ನಮಗೆ ಅದ್ಭುತವಾದ ಪರ್ಯಾಯವನ್ನು ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸೂರ್ಯನು ಭೂಮಿಯ ಮೇಲಿನ ಎಲ್ಲದಕ್ಕೂ ಜೀವವನ್ನು ನೀಡುತ್ತಾನೆ. ಸೂರ್ಯನು ಶಕ್ತಿಯ ಪ್ರಾಥಮಿಕ ಮೂಲವಾಗಿದ್ದನ್ನು ನೂರಾರು ವರ್ಷಗಳ ಹಿಂದೆ ಭಾರತೀಯ ಧರ್ಮಗ್ರಂಥಗಳು ಪ್ರತಿಪಾದಿಸುತ್ತವೆ ಎಂದು ಅವರು ಹೇಳಿದರು.

ಪರಿಸರ ಎದುರು ಪೈಪೋಟಿ ಸರಿಯಲ್ಲ ಎಂದ ಪ್ರಧಾನಿ:

"ಸೂರ್ಯೋದಯ ಮತ್ತು ಸೂರ್ಯಾಸ್ತವು ನಮ್ಮ ಜೀವನದ ಪರಿಯನ್ನು ಹೇಳುತ್ತದೆ. ಈ ನೈಸರ್ಗಿಕ ಪ್ರಕ್ರಿಯೆ ಇರುವವರೆಗೆ ನಮ್ಮ ಗ್ರಹವು ಆರೋಗ್ಯಕರವಾಗಿತ್ತು. ಆದರೆ ತಾಂತ್ರಿಕ ಯುಗದಲ್ಲಿ ಜನರು ಸೂರ್ಯನ ಎದುರು ಪೈಪೋಟಿಗೆ ಬಿದ್ದು ಓಡಲು ನಿಂತಿದ್ದಾರೆ. ಈ ಪ್ರಯತ್ನದಿಂದ ಪ್ರಕೃತಿಯಲ್ಲಿನ ಸಮತೋಲನವನ್ನು ಹಾಳು ಮಾಡುತ್ತಿದ್ದಾರೆ. ಇದರ ಜೊತೆಗೆ ಅಪಾರ ನಷ್ಟವನ್ನು ಉಂಟು ಮಾಡುತ್ತಿದ್ದಾರೆ. "ನಾವು ಆ ಸಮತೋಲನವನ್ನು ಮರು ಸ್ಥಾಪಿಸಬೇಕಾದರೆ, ಸೌರಶಕ್ತಿಯೇ ಮುಖ್ಯ ದಾರಿಯಾಗುತ್ತದೆ. ನಾವು ಮತ್ತೊಮ್ಮೆ ಸೂರ್ಯನೊಂದಿಗೆ ನಡೆಯಬೇಕಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್:

"ಒಂದು ವರ್ಷದಲ್ಲಿ ಎಲ್ಲಾ ಜನರಿಗೆ ಅಗತ್ಯವಿರುವಷ್ಟು ಶಕ್ತಿಯನ್ನು ಕೇವಲ ಒಂದು ಗಂಟೆಯಲ್ಲಿ ನೀಡುವ ಸಾಮರ್ಥ್ಯವನ್ನು ಸೂರ್ಯ ಹೊಂದಿರುತ್ತಾನೆ. ಸೂರ್ಯನಿಂದ ಪಡೆದುಕೊಳ್ಳುವ ಈ ಶಕ್ತಿಯು ಶುದ್ಧ ಮತ್ತು ಸಮರ್ಥನೀಯವಾಗಿರುತ್ತದೆ. ಒಂದೇ ಸವಾಲು ಎಂದರೆ ಸೌರ ಶಕ್ತಿಯು ಹಗಲಿನಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಈ ಸಮಸ್ಯೆಗೆ ಪರಿಹಾರವಾಗಿದೆ. ವಿಶ್ವಾದ್ಯಂತ ಸೌರ ವಿದ್ಯುತ್ ಗ್ರಿಡ್ ಎಲ್ಲೆಡೆ, ಪ್ರತಿ ಬಾರಿಯೂ ಶುದ್ಧ ಶಕ್ತಿಯನ್ನು ಖಚಿತಪಡಿಸುತ್ತದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಿಶ್ವ ನಾಯಕರಿಗೆ ಮೋದಿ ಸಂದೇಶ:

ಸೌರಶಕ್ತಿಯ ಒತ್ತಡವು ಸಂಗ್ರಹಣೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಸೌರ ವಿದ್ಯುತ್ ಯೋಜನೆಗಳ ಕಾರ್ಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲದ ಪ್ರಮಾಣವನ್ನು ತಗ್ಗಿಸುತ್ತದೆ. ಅಂತರಾಷ್ಟ್ರೀಯ ಸೌರಶಕ್ತಿ ಗ್ರಿಡ್‌ನ ಅಭಿವೃದ್ಧಿಯ ಮೂಲಕ ಸೌರ ಒಕ್ಕೂಟದ ಪ್ರಯತ್ನವು ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಮೋದಿ ವಿಶ್ವ ನಾಯಕರಿಗೆ ತಿಳಿಸಿದರು.

English summary
One world, One sun, one Grid: PM Modi Speech Highlights in COP26 summit in Glasgow. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X