ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಿಕ್ಷದಲ್ಲಿವೆ ಒಟ್ಟು 8 ವಾಸಯೋಗ್ಯ ಭೂಮಿಗಳು!

|
Google Oneindia Kannada News

ವಾಷಿಂಗ್ ಟನ್, ಜ. 8: ಇನ್ನು ಮುಂದೆ ಭೂಮಿ ಮೇಲಿನ ಜನಸಂಖ್ಯೆ ಹೆಚ್ಚಾಯಿತು. ಮಾಲಿನ್ಯ ನಿಯಂತ್ರಣವಾಗುತ್ತಿಲ್ಲ ಎಂದು ಕೊರಗುವಂತಿಲ್ಲ. ಬೇಸರ ಬಂದರೆ ಬೇರೆ ಗ್ರಹಕ್ಕೆ ಹೋಗಿ ವಾಸಿಸಬಹುದು! ಹೌದು.. ವಾಸಯೋಗ್ಯವಾಗ್ಯಿರುವ ಜತೆಗೆ ಭೂಮಿಯನ್ನೇ ಹೋಲುವ 8 ಗ್ರಹಗಳನ್ನ ಪತ್ತೆ ಮಾಡಿರುವುದಾಗಿ ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಖಗೋಳ ಶಾಸ್ತ್ರಜ್ಞರು, ಈ ಗ್ರಹಗಳ ಪೈಕಿ ಎರಡರಲ್ಲಿ ನೀರಿದೆ, ಇವು ಭೂಮಿಯನ್ನೇ ಹೋಲುತ್ತಿದ್ದು ಮನುಷ್ಯರು ವಾಸಿಸಲು ಅಲ್ಲಿ ಪೂರಕ ವಾತಾವರಣವಿದೆ ಎಂದು ತಿಳಿಸಿದ್ದಾರೆ.[ಕಪ್ಪುರಂಧ್ರದ ಬಳಿ ಬೃಹತ್ ಜ್ವಾಲೆ ಪತ್ತೆ ಹಚ್ಚಿದ ನಾಸಾ]

nasa

ನಾಸಾದ ದುರದರ್ಶಕ ಕೆಪ್ಲರ್ ಇದನ್ನು ಖಚಿತಪಡಿಸಿದ್ದು ಭೂಮಿಯನ್ನು ಹೋಲುವ ಎರಡು ಗ್ರಹಗಳಿಗೆ ಕೆಪ್ಲರ್-438ಬಿ ಮತ್ತು ಕೆಪ್ಲರ್-442ಬಿ ಎಂದು ಹೆಸರಿಟ್ಟಿದೆ. ನಾವು ಇಷ್ಟು ದಿನ ಇಂಥಹದ್ದೇ ಗ್ರಹಗಳ ಹುಡುಕಾಟ ನಡೆಸುತ್ತಿದ್ದವು. 2009 ರಿಂದಲೂ ಈ ಬಗ್ಗೆ ನಿರಂತರ ಯತ್ನ ನಡೆದಿತ್ತು. ಈಗ ನಮ್ಮ ಸಂಶೋಧನೆಗೆ ನೆರವಾಗುವ ಅಂಶಗಳು ದೊರೆತಿವೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಗ್ರಹದ ವಾತಾವರಣ, ಗಾಳಿ, ಬೆಳಕು ನೀರಿನ ಬಗ್ಗೆ ಸಂಶೊಧನೆ ನಡೆಯುತ್ತಿದೆ. ಕೆಪ್ಲರ್-438ಬಿ ಭೂಮಿಗಿಂತ ಶೇ. 40 ರಷ್ಟು ಹೆಚ್ಚು ಬೆಳಕನ್ನು ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ಪತ್ತೆಮಾಡಲಾಗಿದೆ ಎಂದು ಹಾವರ್ಡ್ ಸ್ಮಿತ್ ಸಾನಿಯನ್ ಖಗೋಳ ವಿಜ್ಞಾನಿ ಗಿಲೆರ್ವೊ ಟಾರ್ಸ್ ತಿಳಿಸಿದ್ದಾರೆ.

English summary
NASA's venerable Kepler space telescope has confirmed eight new alien planets, with three of them located in habitable zone - orbiting their stars at just the right distance to have liquid water, and possibly life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X