ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯ ಮೇಲೆ ಬೀಳಲಿದೆ 38 ವರ್ಷದ ನಾಸಾ ಉಪಗ್ರಹ: ಅಪಾಯ, ತೂಕ, ಜಾಗದ ಬಗ್ಗೆ ತಿಳಿಯಿರಿ

|
Google Oneindia Kannada News

ನ್ಯೂಯಾರ್ಕ್‌, ಜನವರಿ 7: 38 ವರ್ಷದ ನಾಸಾ ಉಪಗ್ರಹವೊಂದು ಆಕಾಶದಿಂದ ಈ ವಾರಾಂತ್ಯದಲ್ಲಿ ಬೀಳಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಅವಶೇಷಗಳು ಯಾರ ಮೇಲೂ ಬೀಳುವ ಸಾಧ್ಯತೆ 'ತುಂಬಾ ಕಡಿಮೆ' ಎಂದು ನಾಸಾ ಶುಕ್ರವಾರ ಹೇಳಿದೆ.

Earthquake in Delhi : 5 ದಿನಗಳಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಭೂಕಂಪನEarthquake in Delhi : 5 ದಿನಗಳಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಭೂಕಂಪನ

ನಾಸಾ ಪ್ರಕಾರ, 5,400 ಪೌಂಡ್ (2,450 ಕಿಲೋಗ್ರಾಂ) ಉಪಗ್ರಹವು ಭೂಮಿಗೆ ಮರಳಿ ಬರುವಾಗ ಬಹುತೇಕ ಸುಟ್ಟುಹೋಗುತ್ತದೆ. ಆದರೆ, ಕೇಲವೇ ಕೆಲವು ತುಣುಕುಗಳು ಭೂಮಿಯ ಮೇಲೆ ಬೀಳುವ ನಿರೀಕ್ಷೆಯಿದೆ.ಇದರಿಂದ ಜನರಿಗೆ ಯಾವುದೇ ಅಪಾಯವಿಲ್ಲ. 9, 400 ಜನರಲ್ಲಿ ಒಬ್ಬರಿಗೆ ಮಾತ್ರ ಗಾಯವಾಗಬಹುದು.

Old NASA Satellite Falling From Sky This Weekend, Low Threat

ಅಮೆರಿಕದ ರಕ್ಷಣಾ ಇಲಾಖೆಯ ಮಾಹಿತಿ ನೀಡಿರುವ ಪ್ರಕಾರಣ ಉಪಗ್ರಹವು ಭಾನುವಾರ ಸಂಜೆ 6.40ಕ್ಕೆ ಭೂಮಿಗೆ ಬಂದು ಬೀಳಲಿದೆ ಎನ್ನಲಾಗಿದೆ. ಇದನ್ನು ಅಲ್ಲಗಳೆದಿರುವ ಕ್ಯಾಲಿಫೋರ್ನಿಯಾದ 'ಏರೋಸ್ಪೇಸ್ ಕಾರ್ಪೊರೇಷನ್', ಸೋಮವಾರ 1 ಗಂಟೆಗೆ (ರಾತ್ರಿ) ಉಪಗ್ರಹ ಬೀಳಬಹುದು. ಇದು ಆಕಾಶದಿಂದ ಭೂಮಿಗೆ ಬಂದು ಬೀಳಲು 17 ಗಂಟೆ ಅವಧಿಯನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

ಇದು ಆಫ್ರಿಕಾ, ಏಷ್ಯಾ ಮಧ್ಯಪ್ರಾಚ್ಯ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಹಾದುಹೋಗಲಿದೆ. ಈ ಭಾಗಗಳಲ್ಲಿ ಹಾದುಬರಲು 13 ಗಂಟೆಗಳನ್ನು ತೆಗೆದುಕೊಳ್ಳಬಹುದು ಎಂದು ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್ ಹೇಳಿದೆ.

Old NASA Satellite Falling From Sky This Weekend, Low Threat

ERBS ಎಂದು ಕರೆಯಲ್ಪಡುವ ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ನಲ್ಲಿ ಉಡಾವಣೆ ಮಾಡಲಾಯಿತು. ಅದರ ನಿರೀಕ್ಷಿತ ಕೆಲಸದ ಜೀವಿತಾವಧಿಯು ಎರಡು ವರ್ಷಗಳಾಗಿದ್ದರೂ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ ನಿಷ್ಕ್ರೀಯವಾಯಿತು. ಅಲ್ಲಿಯವರೆಗೆ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಎಷ್ಟು ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಬಿಡುತ್ತದೆ ಎಂಬುದನ್ನು ಈ ಉಪಗ್ರಹದ ಮೂಲಕ ತಿಳಿದುಬಂದಿದೆ.

ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌ ಅನ್ನು ಚಾಲೆಂಜರ್‌ನಿಂದ ಉಪಗ್ರಹಕ್ಕೆ ವಿಶೇಷವಾಗಿ ಕಳುಹಿಸಲಾಗಿತ್ತು. ಬಾಹ್ಯಾಕಾಶದಲ್ಲಿ ಅಮೆರಿಕದ ಮೊದಲ ಮಹಿಳೆ ಸ್ಯಾಲಿ ರೈಡ್, ನೌಕೆಯ ರೋಬೋಟ್ ಆರ್ಮ್ ಅನ್ನು ಬಳಸಿಕೊಂಡು ಉಪಗ್ರಹವನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಸ್ಯಾಲಿ ರೈಡ್ ಜೊತೆ ಕ್ಯಾಥರಿನ್ ಸುಲ್ಲಿವನ್ ಗಗನಯಾತ್ತೆ ಮಾಡಿದ್ದರು. 2012 ರಲ್ಲಿ ನಿಧನರಾದ ರೈಡ್‌ಗೆ ಇದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು ಎಂದು ನಾಸಾ ತಿಳಿಸಿದೆ.

English summary
A 38-year-old retired NASA satellite is about to fall from the sky. NASA said Friday the chance of wreckage falling on anybody is “very low.” Most of the 5,400-pound (2,450-kilogram) satellite will burn up upon reentry, according to NASA. But some pieces are expected to survive
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X