Russia & Ukraine War: ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉತ್ತರ ಕೊರಿಯಾಗೆ ಏನು ಲಾಭ?

ರಷ್ಯಾ & ಉಕ್ರೇನ್ ನಡುವೆ ಗಲಾಟೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಉತ್ತರ ಕೊರಿಯಾ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾದ ಈ ವರ್ತನೆ ಭಾರಿ ಕುತೂಹಲ ಕೂಡ ಕೆರಳಿಸಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ರಷ್ಯಾ ಸಂಕಷ್ಟದಲ್ಲಿ ಸಿಲುಕಿ ನರಳುವ ಸಮಯದಲ್ಲೇ ದಿಢೀರ್ ಉತ್ತರ ಕೊರಿಯಾ ಎಂಟ್ರಿ ಕೊಟ್ಟು ಗಮನ ಕೂಡ ಸೆಳೆದಿದೆ. ರಷ್ಯಾಗೆ ಸಹಾಯ ಮಾಡಲು ತನ್ನದೇ ದೇಶದ ಸೈನಿಕರನ್ನ ಕೂಡ ಕಳುಹಿಸಿರುವ ಉತ್ತರ ಕೊರಿಯಾ, ಮತ್ತೊಮ್ಮೆ ಅಮೆರಿಕದ ಆಡಳಿತವನ್ನೂ ಎದುರು ಹಾಕಿಕೊಂಡಿದೆ.

ಹೀಗೆ ದಿಢೀರ್ ಉತ್ತರ ಕೊರಿಯಾ ಇಷ್ಟೆಲ್ಲಾ ಗಟ್ಟಿ ನಿರ್ಧಾರ ಕೈಗೊಳ್ಳಲು & ರಷ್ಯಾ ಜೊತೆಗೆ ಕೈಜೋಡಿಸಿ ಜಗತ್ತಿನ ಶಕ್ತಿಶಾಲಿ ದೇಶಗಳನ್ನೇ ಎದುರು ಹಾಕಿಕೊಳ್ಳಲು ಕಾರಣ ಏನು? ಇಲ್ಲಿ ಉತ್ತರ ಕೊರಿಯಾಗೆ ಆಗುತ್ತಿರುವ ಲಾಭ ಏನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಉತ್ತರ ಕೊರಿಯಾ ಹಾಕಿರುವ ಸ್ಕೆಚ್ ಮಾತ್ರ ಬಲು ದೊಡ್ಡದಾಗಿದೆ ಎಂಬ ವಿಶ್ಲೇಷಣೆ ಕೂಡ ಇದೀಗ ಕೇಳಿ ಬರುತ್ತಿದೆ!

North Korea s Gains from the Russia-Ukraine Conflict Revealed

ಉತ್ತರ ಕೊರಿಯಾಗೆ ಭರ್ಜರಿ ಲಾಭ!

ಆರ್ಥಿಕ ಸಂಕಷ್ಟ & ಅತಿಯಾದ ಒತ್ತಡಕ್ಕೆ ಸಿಲುಕಿ ಇದೀಗ ಉತ್ತರ ಕೊರಿಯಾ ನರಳುತ್ತಿದ್ದು, ಬದುಕಿನ ಅನಿವಾರ್ಯತೆ ಈಗ ಉತ್ತರ ಕೊರಿಯಾಗೆ ಕಾಡುತ್ತಿದೆ. ಹೀಗಾಗಿ ರಷ್ಯಾ ಜೊತೆಯಲ್ಲಿ ಸ್ನೇಹ ಬೆಳೆಸಿದರೆ ಅದರಿಂದ ಸಾಕಷ್ಟು ಲಾಭ ಉತ್ತರ ಕೊರಿಯಾಗೆ ಸಿಗಲಿದೆ. ಈ ಕಾರಣಕ್ಕೆ, ಉತ್ತರ ಕೊರಿಯಾ ಇದೀಗ ರಷ್ಯಾ ಜೊತೆಯಲ್ಲಿ ಕೈಜೋಡಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನು ಬಿಡಿಸಿ ಹೇಳಬೇಕಾದರೆ... ಮುಂದೆ ಓದಿ.

ಈ ಕಾರಣಕ್ಕೆ ಉತ್ತರ ಕೊರಿಯಾ....

ಉತ್ತರ ಕೊರಿಯಾದಲ್ಲಿ ಕಡು ಬಡತನ ಕಾಡುತ್ತಿದ್ದು, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರ ವಿರುದ್ಧ ನಿಂತಿದೆ ಉತ್ತರ ಕೊರಿಯಾ. ಈ ಕಾರಣಕ್ಕೆ ಉತ್ತರ ಕೊರಿಯಾದಲ್ಲಿ ತಂತ್ರಜ್ಞಾನವೇ ಅಭಿವೃದ್ಧಿ ಆಗಿಲ್ಲ. ಅಲ್ಲಿ ಕೃಷಿಯೇ ಮುಖ್ಯ ಆದಾಯವಾಗಿದ್ದು, ಕೃಷಿಯಲ್ಲಿ ಕೂಡ ಜನರು ತಂತ್ರಜ್ಞಾನ ಬಳಕೆ ಮಾಡಲು ಸಾಧ್ಯ ಆಗುತ್ತಿಲ್ಲ. ಇನ್ನು ಕನಿಷ್ಠ ಗೊಬ್ಬರಕ್ಕೂ ಪರದಾಡುವ ಸ್ಥಿತಿ ಉತ್ತರ ಕೊರಿಯಾದಲ್ಲಿ ಇದೆ.

ಹೀಗಿದ್ದಾಗ ರಷ್ಯಾ & ಪುಟಿನ್ ಉತ್ತರ ಕೊರಿಯಾ ಬೆನ್ನಿಗೆ ನಿಲ್ಲುವ ವಾಗ್ದಾನ ನೀಡಿರಬಹುದು. ಇದರ ಜೊತೆ ಉತ್ತರ ಕೊರಿಯಾಗೆ ಉಪಗ್ರಹ ತಂತ್ರಜ್ಞಾನ ಸೇರಿದಂತೆ ಪರಮಾಣು ತಂತ್ರಜ್ಞಾನ ಕೂಡ ಮತ್ತಷ್ಟು ಅಗತ್ಯವಾಗಿವೆ. ಹೀಗಾಗಿ ಉ.ಕೊರಿಯಾ ಇದೀಗ ರಷ್ಯಾ ಮಿಲಿಟರಿ ನೆರವಿಗೆ ನಿಂತರಬಹುದು ಎನ್ನಲಾಗುತ್ತಿದೆ.

ಒಟ್ನಲ್ಲಿ ಹೀಗೆ ಹಲವು ವಿಚಾರಗಳಲ್ಲಿ ತನಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಈಗ ರಷ್ಯಾ ಜೊತೆಗೆ ಉತ್ತರ ಕೊರಿಯಾ ಕೈಜೋಡಿಸಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಜಾಗತಿಕವಾಗಿ ಕೂಡ ಇದು ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತೊಂದು ಮಹಾಯುದ್ಧ ನಡೆಯಲು ಈ ಘಟನೆ ತುಪ್ಪ ಸುರಿಯಬಹುದು, ಎಂಬ ಆರೋಪಗಳು ಈ ಸಮಯದಲ್ಲಿ ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+