ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ವಿಮಾನ ಹೊಡೆದುರುಳಿಸುತ್ತೇವೆ, ಅಮೆರಿಕಾಕ್ಕೆ ಕೊರಿಯಾ ಎಚ್ಚರಿಕೆ!

ಅಮೆರಿಕಾದ ನೆಲದಲ್ಲಿ ನಿಂತು, 'ನಮ್ಮ ತಂಟೆಗೆ ಬಂದರೆ ಅಮೆರಿಕಾದ ಯುದ್ದ ವಿಮಾನಗಳನ್ನು ಹೊಡೆದುರುಳಿಸುತ್ತೇವೆ' ಎಂದು ಉತ್ತರ ಕೊರಿಯಾ, ಅಮೆರಿಕಾಕ್ಕೆ ಎಚ್ಚರಿಕೆ ನೀಡಿದೆ.

|
Google Oneindia Kannada News

ನ್ಯೂಯಾರ್ಕ್, ಸೆ 27: ಇದನ್ನು ತಾಕತ್ತು ಅನ್ನಬೇಕೋ ಅಥವಾ ಹುಚ್ಚಾಟ ಅನ್ನಬೇಕೋ? ಅಮೆರಿಕಾ ನೆಲದಲ್ಲಿ ನಿಂತು, 'ನಮ್ಮ ತಂಟೆಗೆ ಬಂದರೆ ಅಮೆರಿಕಾದ ಯುದ್ದ ವಿಮಾನಗಳನ್ನು ಹೊಡೆದುರುಳಿಸುತ್ತೇವೆ' ಎಂದು ಉತ್ತರ ಕೊರಿಯಾ, ಅಮೆರಿಕಾಕ್ಕೆ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯಲ್ಲಿ ಭಾಗವಹಿಸಿ ಸ್ವದೇಶಕ್ಕೆ ವಾಪಸ್ ಹೋಗುವ ಮುನ್ನ ನ್ಯೂಯಾರ್ಕ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಉತ್ತರ ಕೊರಿಯಾ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವ ರಿ ಯಾಂಗ್, ಅಮೆರಿಕ ನಮ್ಮ ದೇಶದ ಮೇಲೆ ಮೊದಲು ಯುದ್ದ ಘೋಷಣೆ ಮಾಡಿದ್ದು ಎನ್ನುವುದು ಜಗತ್ತಿಗೆ ಗೊತ್ತಾಗಲಿ ಎಂದಿದ್ದಾರೆ.

ಪರಮಾಣು ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯಾದಲ್ಲಿ ಭೂಕಂಪಪರಮಾಣು ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯಾದಲ್ಲಿ ಭೂಕಂಪ

North Korea warning to America in America, we will destroy war planes

ಅಮೆರಿಕಾದ ಯುದ್ದ ವಿಮಾನಗಳನ್ನು ಹೊಡೆದುರುಳಿಸಲು ನಮ್ಮ ವಾಯುನೆಲೆಯನ್ನು ಅವರು ಪ್ರವೇಶಿಸಬೇಕೆಂದಿಲ್ಲ, ಹಾಗೇ ದಾಳಿ ನಡೆಸುವ ಅಧಿಕಾರ ನಮಗಿದೆ ಎಂದು ವಿದೇಶಾಂಗ ಸಚಿವರು ಬೆದರಿಕೆ ಹಾಕಿದ್ದಾರೆ.

ದಶಕಗಳ ಹಿಂದಿನ ಘಟನೆಯೊಂದನ್ನು ಉಲ್ಲೇಖಿಸಿ ಮಾತನಾಡಿದ ರಿ ಯಾಂಗ್, 1969ರಲ್ಲಿ ರಿಚರ್ಡ್ ನಿಕ್ಸನ್ ಅಮೆರಿಕಾದ ಅಧ್ಯಕ್ಷರಾಗಿದ್ದ ವೇಳೆ, ನಮ್ಮ ವಾಯುನೆಲೆಯನ್ನು ಅಮೆರಿಕಾದ ಯುದ್ದವಿಮಾನಗಳು ಪ್ರವೇಶಿಸಿದ್ದವು. ಯಾವುದೇ ಮುಲಾಜಿಲ್ಲದೇ ಯುದ್ದ ವಿಮಾನಗಳನ್ನು ನಾವು ಹೊಡೆದುರುಳಿಸಿದ್ದೆವು ಎಂದು ಸಚಿವರು ಹೇಳಿದ್ದಾರೆ.

ನಮ್ಮ ದೇಶದ ನಾಯಕತ್ವ ಹೆಚ್ಚುದಿನ ಉಳಿಯುವುದಿಲ್ಲ ಎನ್ನುವುದನ್ನು ಉತ್ತರಕೊರಿಯಾದ ಜನತೆ ನಿರ್ಧರಿಸುತ್ತಾರೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಸಚಿವರು ಟ್ರಂಪ್ ಈ ಹಿಂದೆ ಮಾಡಿದ್ದ ಟ್ವೀಟಿಗೆ ತಿರುಗೇಟು ನೀಡಿದ್ದಾರೆ.

ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಬಾಂಧವ್ಯ ಸಂಪೂರ್ಣ ಹದೆಗೆಟ್ಟಿರುವ ಈ ಹೊತ್ತಿನಲ್ಲಿ, ಅಮೆರಿಕಾಗೆ ಉತ್ತರ ಕೊರಿಯಾ ಬೆದರಿಕೆ ಹಾಕುತ್ತಿರುವುದು ಇದೇ ಮೊದಲೇನಲ್ಲ. "ಇಡೀ ಅಮೆರಿಕವನ್ನು ನಿಮಿಷಗಳಲ್ಲಿ ನಾಶ ಮಾಡುವ ಖಂಡಾಂತರ ಕ್ಷಿಪಣಿಯೊಂದನ್ನು ತಾವು ತಯಾರಿಸಿದ್ದು, ಇಡೀ ಅಮೆರಿಕವೇ ನಮ್ಮ ರೇಂಜ್ ನಲ್ಲಿ ಇದೆ" ಇದೊಂದು ಉತ್ತರ ಕೊರಿಯಾ, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಸ್ಯಾಂಪಲ್.

English summary
North Korea warning to America in America. If American war planes entered our Airbase, we will destroy war planes, North Korean Foreign Minister Ri Su Yong statement in Newyork.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X