ಸರ್ವಾಧಿಕಾರಿ ಕಿಮ್ ಕನಸು ಭಗ್ನ, ಇನ್ಯಾರನ್ನ ಕೊಲೆ ಮಾಡ್ತಾನೋ!

ಪ್ಯೊಂಗ್ಯಾಂಗ್: ಕಂಡ ಕಂಡಲ್ಲಿ ಕೊಲೆ, ಕ್ಷುಲ್ಲಕ ಕಾರಣಕ್ಕೆ ಮರ್ಡರ್, ಸಣ್ಣ ಸಣ್ಣ ತಪ್ಪಿಗೂ ಗಲ್ಲು ಶಿಕ್ಷೆ.. ಅರೆರೆ ಇವೆಲ್ಲಾ ನರಕದ ನಿಯಮ ಅಲ್ಲ. ಕಿಮ್ ಜಾಂಗ್ ಉನ್ ಅನ್ನೋ ನರರೂಪಿ ರಾಕ್ಷಸನ ದೇಶದ ಅಸಲಿ ಕಥೆ. ಭಯ ಹುಟ್ಟಿಸುತ್ತಿದ್ದ ಸರ್ವಾಧಿಕಾರಿ ತನ್ನ ಹೊಸ ಉಪಗ್ರಹದ ಮೂಲಕ ಶತ್ರುಗಳಿಗೆ ಶಾಕ್ ಕೊಡಲು ಹೋಗಿ ತಾನೇ ತೆಪ್ಪಗಾಗಿದ್ದಾನೆ.

ಅಂದಹಾಗೆ ತನ್ನ ಶತ್ರು ರಾಷ್ಟ್ರಗಳಾದ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಸಮಾರಾಭ್ಯಾಸದ ಮೇಲೆ ನಿಗಾ ಇರಿಸಲು ಹಾಗೂ ತನ್ನ ದೇಶ ಉತ್ತರ ಕೊರಿಯಾ ಸುತ್ತ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈ ಗುಪ್ತಚರ ಉಪಗ್ರಹ ಉಡಾವಣೆಗೆ ಮುಂದಾಗಿದ್ದ. ಉತ್ತರ ಕೊರಿಯಾ( North Korea) ನೆಲದಲ್ಲೇ ನಿರ್ಮಿತವಾದ ಮೊದಲ ಪತ್ತೇದಾರಿ ಮಿಲಿಟರಿ ಉಪಗ್ರಹ ಇದಾಗಿತ್ತು. ಆದರೆ ಉಡಾವಣೆಯಾದ ಕೆಲವೇ ನಿಮಿಷದಲ್ಲಿ ಈ ಉಪಗ್ರಹ ಸಮುದ್ರಕ್ಕೆ ಬಿದ್ದುಬಿಟ್ಟಿದೆ!

North Korea spy satellite launch attempt has been failed in tragedy

ರೊಚ್ಚಿಗೆದ್ದು ಕೂಗಾಡಿದ ಕಿಮ್!

ಉತ್ತರ ಕೊರಿಯಾ ತನ್ನ ಮೊದಲ ಮಿಲಿಟರಿ ಉಪಗ್ರಹ ಉಡಾವಣೆಗೆ ಹಲವು ವರ್ಷಗಳಿಂದ ಪ್ರಯತ್ನಪಟ್ಟಿತ್ತು. ಹೀಗಾಗಿ ಸಾಕಷ್ಟು ದಿನದಿಂದ ಉಡಾವಣೆಗೆ ಕಾದು ಕುಳಿತಿತ್ತು. ಇಂದು ಬೆಳಗ್ಗೆ 6.27ಕ್ಕೆ ಉತ್ತರ ಫಿಯೋಂಗನ್ ಪ್ರಾಂತ್ಯ, ಚೋಲ್ಸನ್ ಕೌಂಟಿಯ ಸೋಹೆ ಉಪಗ್ರಹ ಉಡಾವಣಾ ಮೈದಾನದಿಂದ ಉತ್ತರ ಕೊರಿಯಾದ ಮೊದಲ ಸೇನಾ ಉಪಗ್ರಹ ಹೊತ್ತಿದ್ದ ರಾಕೆಟ್ ಉಡಾವಣೆ ಆಗಿತ್ತು. ಆದರೆ ಹೀಗೆ ಲಾಂಚ್ ಮಾಡಿದ ಕೆಲವೇ ನಿಮಿಷದಲ್ಲಿ ಅದು ಸಮುದ್ರಕ್ಕೆ ಬಿದ್ದು ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸರ್ವಾಧಿಕಾರಿ ಕಿಮ್ ಎಲ್ಲರ ಮೇಲೆ ಕೂಗಾಡಿದ್ದಾನೆ.

ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿದ್ದು ಹೇಗೆ?

ಉತ್ತರ ಕೊರಿಯಾ ತಂತ್ರಜ್ಞಾನದ ವಿಚಾರದಲ್ಲಿ ಅಷ್ಟೊಂದು ಮುಂದೆ ಇಲ್ಲ. ಹೀಗಾಗಿಯೇ 2ನೇ ಹಂತದಲ್ಲಿ ಇಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ಚೋಲಿಮಾ-1 ರಾಕೆಟ್ ಮೊದಲ ಹಂತದ ಹಾರಾಟವನ್ನ ಸುಲಭವಾಗಿ ಪೂರ್ಣಗೊಳಿಸಿ, ಎರಡನೇ ಹಂತದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ಸರ್ವಾಧಿಕಾರಿ ಲೆಕ್ಕಾಚಾರ ಉಲ್ಟಾ ಆಗಿದೆ. ಇದೇ ಕಾರಣಕ್ಕೆ ತಕ್ಷಣ ಕಿಮ್ ಜಾಂಗ್ ಉನ್ ನಿರ್ಮಿಸಿದ್ದ ಕನಸಿನ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ. ಕೂಡಲೇ ಅದನ್ನ ಎಳೆದು ತರಲು ಉತ್ತರ ಕೊರಿಯಾ ಸೇನೆ ಮುಂದಾಗಿದೆ. ಇದೇ ಹೊತ್ತಲ್ಲಿ ಸರ್ವಾಧಿಕಾರಿ ಕೂಗಾಡಿದ್ದಾನಂತೆ.

North Korea spy satellite launch attempt has been failed in tragedy

ಸಮುದ್ರಕ್ಕೆ ಬಿದ್ದು ಸತ್ತುಹೋದ ಉಪಗ್ರಹ!

ಅಷ್ಟಕ್ಕೂ ಮೇ 31ರಿಂದ ಜೂನ್ 11 ರ ನಡುವೆ ಉತ್ತರ ಕೊರಿಯಾ ಮಿಲಿಟರಿ ಉಪಗ್ರಹ ಉಡಾವಣೆ ಮಾಡುವ ಬಗ್ಗೆ ಕಿಮ್ ಜಾಂಗ್ ಉನ್ ತಿಳಿಸಿದ್ದ. ಹೀಗಾಗಿ ಹೆಚ್ಚು ಟೆನ್ಷನ್ ಮಾಡಿಕೊಂಡಿದ್ದ ಜಪಾನ್, ತನ್ನ ಖಂಡಾಂತರ ಕ್ಷಿಪಣಿ ವ್ಯವಸ್ಥೆ ಅಲರ್ಟ್ ಮಾಡಿತ್ತು. ಅಕಸ್ಮಾತ್ ಉತ್ತರ ಕೊರಿಯಾ ಉಪಗ್ರಹ ವಾಯುಗಡಿ ಒಳಗೆ ಬಂದರೆ, ಅಲ್ಲೇ ಛಿದ್ರ ಮಾಡುವುದಾಗಿ ವಾರ್ನಿಂಗ್ ಕೊಟ್ಟಿತ್ತು ಜಪಾನ್. ಆದರೆ ಇವತ್ತು ಆ ರೀತಿಯ ಯಾವುದೇ ಸೀನ್ ನಡೆದಿಲ್ಲ. ಉತ್ತರ ಕೊರಿಯಾದ ಉಪಗ್ರಹ ನೇರವಾಗಿ ಸಮುದ್ರಕ್ಕೆ ಬಿದ್ದು ಸತ್ತು ಹೋಗಿದೆ.

ಒಂದೇ ವರ್ಷ, 100 ಮಿಸೈಲ್!

ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ. ಕಳೆದ ತಿಂಗಳಷ್ಟೇ ತನ್ನ ದೇಶ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿದೆ ಎಂದು ತಿಳಿಸಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಉ.ಕೊರಿಯಾ ತಯಾರಿಸಿರುವ ಮಿಲಿಟರಿ ಉಪಗ್ರಹ ಉಡಾಯಿಸಿ ಮೆರೆಯುತ್ತಿದ್ದ. ಆದರೆ ಅದು ಸಮುದ್ರಕ್ಕೆ ಬಿದ್ದು, ನೀರಲ್ಲಿ ಹೋಮ ಮಾಡಿದಂತಾಗಿದೆ.

North Korea spy satellite launch attempt has been failed in tragedy

ಆಗ ಕ್ಷಿಪಣಿ, ಈಗ ಉಪಗ್ರಹ!

ಕಿಮ್ ಜಾಂಗ್ ಉನ್ ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿತ್ತು. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸಿದ್ದಾನೆ ಕಿಮ್ ಜಾಂಗ್ ಉನ್. ಮೊದಲ ಪ್ರಯತ್ನದಲ್ಲಿ ಸೋತು ಹೋಗಿದ್ದರೂ, ಜೂನ್ 11ಕ್ಕೆ ಮತ್ತೊಮ್ಮೆ ಇದೇ ಉಪಗ್ರಹ ಉಡಾವಣೆ ಮಾಡುತ್ತಾನಂತೆ ಸರ್ವಾಧಿಕಾರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+