• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ ಭಯಾನಕ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ

|
Google Oneindia Kannada News

ನವದೆಹಲಿ, ಜುಲೈ 2: ವಾಸಿಸಲು ಯೋಗ್ಯವಲ್ಲದ ಭಯಾನಕ ಪ್ರದೇಶಗಳ ಜಾಗತಿಕ ಸ್ಯೂಚಂಕ ಪಟ್ಟಿಯಲ್ಲಿ ಉತ್ತರ ಕೊರಿಯಾ ಕಾಣಿಸಿಕೊಂಡಿದೆ. ಉತ್ತರ ಕೊರಿಯಾದಲ್ಲಿ ನೈಸರ್ಗಿಕ ವಿಪತ್ತು, ಬಡತನ, ಸಾಮಾಜಿಕ ಅನ್ಯಾಯ ಎಲ್ಲವೂ ತುಂಬಿ ತುಳುಕುತ್ತಿದ್ದು, ವಾಸಯೋಗ್ಯವಲ್ಲ ಎಂದು ವರದಿಯೊಂದು ಹೇಳಿದೆ.

   Bhuvaneswar Kumar wants RajKumar Rao to play in his biopic | Oneindia Kannada

   ಯುರೋಪಿನ ಸಂಶೋಧನಾ ಕೇಂದ್ರ ಇನ್ಫಾರ್ಮ್ ವರದಿ ಮಾಡಿದಂತೆ, ಸಮೀಕ್ಷೆ ನಡೆಸಿದ 191 ದೇಶಗಳ ಪೈಕಿ ಉತ್ತರ ಕೊರಿಯಾ 39ನೇ ಸ್ಥಾನದಲ್ಲಿದೆ. ಜಾಗತಿಕ ಅಪಾಯಕಾರಿ ಸೂಚಂಕ್ಯದಲ್ಲಿ 1 ರಿಂದ 10ರ ಶ್ರೇಣಿಯಲ್ಲಿ ಉತ್ತರ ಕೊರಿಯಾ 5.2 ಅಂಕ ಪಡೆದುಕೊಂಡಿದೆ ಎಂದು ಯೊನ್ಹಾಪ್ ಸುದ್ದಿ ಸಂಸ್ಥೆ ಹೇಳಿದೆ.

   ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲುಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

   ಅಪಾಯಕಾರಿ ಸೂಚಂಕ್ಯ ವಿಶ್ಲೇಷಣೆ ಮಾಡುವಾಗ ಆ ದೇಶದ ನೈಸರ್ಗಿಕ ವಿಪತ್ತು ಪ್ರಮಾಣ, ಸರ್ಕಾರದ ಆಡಳಿತ, ಸಾರ್ವಜನಿಕ ಜೊತೆ ಸಂಪರ್ಕ ಎಲ್ಲವನ್ನು ಪರಿಗಣಿಸಲಾಗುತ್ತದೆ. ಈ ಸೂಚಂಕ್ಯದಲ್ಲಿ ಹೆಚ್ಚು ಅಂಕ ಪಡೆದರೆ ಹೆಚ್ಚು ಅಪಾಯಕಾರಿ ಎಂದು ತಿಳಿಯಬಹುದು.

   ಉತ್ತರ ಕೊರಿಯಾದಲ್ಲಿ ನೈಸರ್ಗಿಕ ವಿಪತ್ತು ಪ್ರಮಾಣ 5.1ಇದ್ದರೆ, ಪ್ರವಾಹ ಭೀತಿ ಪ್ರಮಾಣ 7.4ರಷ್ಟಿದೆ. ಭೂಕಂಪದ ರಿಸ್ಕ್ 4.9 ರಿಂದ 6.5ರಷ್ಟಿದೆ ಎಂದು ವರದಿ ಬಂದಿದೆ.

   ಬಡತನಕ್ಕೆ ಕುಸಿಯುವ ಪ್ರಮಾಣ 8.4 ಹಾಗೂ ಸಾಮಾಜಿಕ ಅನ್ಯಾಯ ಪ್ರಮಾಣ 6.1ರಷ್ಟಿದೆ. ಉತ್ತರ ಕೊರಿಯಾಕ್ಕೆ ಹೋಲಿಸಿದರೆ ದಕ್ಷಿಣ ಕೊರಿಯಾ 150ನೇ ಶ್ರೇಯಾಂಕದಲ್ಲಿದೆ.

   English summary
   North Korea ranks among the most dangerous places to live as its people are exposed to high risks of natural disaster, poverty and social injustice, a report showed on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X