ಅಮೆರಿಕದ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾದ ಕೊರಿಯಾ
ಅಮೆರಿಕದ ಗುವಾಮ್ ದ್ವೀಪದ ಮೇಲೆ ದಾಳಿ ನಡೆಸಲು ಸಜ್ಜಾಗಿರುವ ಉತ್ತರ ಕೊರಿಯಾ. ಕೆಲವಾರು ತಿಂಗಳುಗಳಿಂದ ಉಭಯ ದೇಶಗಳ ನಡುವೆ ಆವರಿಸಿರುವ ಯುದ್ಧದ ಭೀತಿ.
ಸಿಯೋಲ್/ಬೆಡ್ಮಿನಿಸ್ಟರ್, ಆಗಸ್ಟ್ 9: ಅಮೆರಿಕದ ಆಡಳಿತದಲ್ಲಿರುವ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿ ನಡೆಸಲು ಉತ್ತರ ಕೊರಿಯಾ ಸಜ್ಜಾಗಿದೆ ಎಂದು ಕೆಲ ಮಾಧ್ಯಮಗಳು ವರದಿಯಾಗಿವೆ.
ಎರಡೂ ದೇಶಗಳ ನಡುವೆ ಯುದ್ಧದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ, ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್-ಉನ್ ಅವರು, ಅಮೆರಿಕದ ಮೇಲೆ ದಾಳಿ ನಡೆಸುವುದಾಗಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು.

ಇದಕ್ಕೆ ಪ್ರತಿಯಾಗಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಉತ್ತರ ಕೊರಿಯಾವನ್ನು ಧ್ವಂಸ ಮಾಡುವ ಎಚ್ಚರಿಕೆ ನೀಡುತ್ತಿದ್ದರು. ಇವೆಲ್ಲವೂ ಕೆಲ ದಿನಗಳಿಂದ ನಡೆದೇ ಇತ್ತು.
ಆದರೆ, ಆಗಸ್ಟ್ 8ರಂದು ಟ್ರಂಪ್ ಅವರು, ಉತ್ತರ ಕೊರಿಯಾ ಶೀಘ್ರದಲ್ಲೇ ಹೊತ್ತಿ ಉರಿಯಲಿದೆ ಎಂದು ಹೇಳಿದ್ದು, ಕಿಮ್ ಅವರನ್ನು ಕೆರಳಿಸಿದೆ. ಹಾಗಾಗಿ, ಅದು ಅಮೆರಿಕಕ್ಕೆ ಸಂಬಂಧಿಸಿದ ಗುವಾಮ್ ಮೇಲೆ ದಾಳಿ ನಡೆಸಲು ಸಜ್ಜಾಗಿದೆ ಎಂದು ಹೇಳಲಾಗಿದೆ.












Click it and Unblock the Notifications