ಸರ್ವಾಧಿಕಾರಿ ತಯಾರಿಸಿದ ಆ ಕ್ಷಿಪಣಿ ಅಮೆರಿಕಗೆ ಭಯ ಹುಟ್ಟಿಸಿದೆ!
ಪ್ಯೊಂಗ್ಯಾಂಗ್: ಏನಾದರೂ ಒಂದು ಮಾಡುತ್ತಾ ಶತ್ರುಗಳ ನಿದ್ದೆ ಕೆಡಿಸದೆ ಕಿಮ್ ಜಾಂಗ್ ಉನ್‌ಗೆ ನೆಮ್ಮದಿಯೇ ಇಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಮೇಲಿಂದ ಮೇಲೆ ಕ್ಷಿಪಣಿ ಪರೀಕ್ಷೆ ನಡೆಸುತ್ತಾ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾನೆ ಸರ್ವಾಧಿಕಾರಿ. ಇಂತಹ ಕ್ರೂರ ಅಧ್ಯಕ್ಷ ಈಗ ಡೆಡ್ಲಿ ಅಸ್ತ್ರ ಒಂದನ್ನು ಪ್ರಯೋಗ ಮಾಡಿದ್ದು, ದೊಡ್ಡಣ್ಣ ಅಮೆರಿಕ ಕೂಡ ನಡುಗಿ ಹೋಗಿದೆ.
ಉತ್ತರ ಕೊರಿಯಾ ಅಂದ್ರೆ ಪರಮಾಣು ಅಸ್ತ್ರ, ಹಾಗೇ ಪರಮಾಣು ಅಸ್ತ್ರಗಳಿಗೆ ಬೇರೆಯದ್ದೇ ಹೆಸರು ಇಡಬೇಕು ಅಂದ್ರೆ ಅದು ಉತ್ತರ ಕೊರಿಯಾ ಅನ್ನಬಹುದು. ಯಾಕಂದ್ರೆ ಈ ದೇಶ ತನ್ನ ಪ್ರಜೆಗಳಿಗೆ ಅನ್ನ ಹಾಕುತ್ತೋ, ಇಲ್ವೋ ಗೊತ್ತಿಲ್ಲ. ಆದರೆ ತನ್ನ ಉಗ್ರಾಣದಲ್ಲಿ ಭಾರಿ ಪ್ರಮಾಣದ ವಿನಾಶಕಾರಿ ಪರಮಾಣು ಅಸ್ತ್ರಗಳನ್ನ ಸಂಗ್ರಹಿಸಿ ಇಟ್ಟುಕೊಂಡಿದೆ. ಈವರೆಗೂ ನೂರಾರು ಪ್ರಯೋಗ ಮಾಡಿ ಭಯಾನಕ ಕ್ಷಿಪಣಿಗಳನ್ನ ತನ್ನಲ್ಲಿ ಇಟ್ಟುಕೊಂಡಿದೆ ಉತ್ತರ ಕೊರಿಯಾ. ಆದರೂ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ನೆಮ್ಮದಿ ಇಲ್ಲ. ಈ ಕಾರಣಕ್ಕೆ ಮತ್ತಷ್ಟು ವಿನಾಶಕಾರಿ ಕ್ಷಿಪಣಿಗಳ ಪ್ರಯೋಗ ಮಾಡುತ್ತಿದ್ದಾನೆ. ಈಗ ಅಮೆರಿಕ & ಯುರೋಪ್ ದೇಶಗಳನ್ನ ಟಾರ್ಗೆಟ್ ಮಾಡಿ ಹೊಸ ಕ್ಷಿಪಣಿ ರೆಡಿ ಮಾಡಿದ್ದಾನೆ!

ಒಂದೇ ಏಟಿಗೆ ಶತ್ರುಗಳು ಉಡೀಸ್!
ಹೌದು, ಕಿಮ್ ಜಾಂಗ್ ಉನ್ ಪಟಾಲಂ ಈಗ ಹೊಸ ಕ್ಷಿಪಣಿ ಪ್ರಯೋಗ ನಡೆಸಿದೆ. ಕ್ಷಿಪಣಿ ಹೇಗಿದೆ ಅಂದರೆ ಅಮೆರಿಕದ ಪ್ರಮುಖ ನಗರಗಳ ಮೇಲೆ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗೇ ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯಿಂದ ಆತಂಕ ಶುರುವಾಗಿದೆ. ಸಾವಿರಾರು ಕಿಲೋ ಮೀಟರ್ ದೂರದ ಗುರಿಯನ್ನ ಅತಿ ವೇಗವಾಗಿ ತಲುಪಿ ನಾಶ ಮಾಡಬಲ್ಲ ಶಕ್ತಿ ಹೊಸ ಕ್ಷಿಪಣಿಗೆ ಇದೆ. ಹ್ವಾಸಾಂಗ್-18 ಎಂದು ಹೊಸ ಮಿಸೈಲ್‌ಗೆ ಹೆಸರು ಕೂಡ ಇಟ್ಟಿದ್ದಾನೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಈ ಮೂಲಕ ತನ್ನ ಶತ್ರು ಪಡೆಗೆ ಪರೋಕ್ಷವಾಗಿ ಕಠಿಣ ಎಚ್ಚರಿಕೆ ನೀಡಿದ್ದಾನೆ ಉತ್ತರ ಕೊರಿಯಾದ ಅಧ್ಯಕ್ಷ.
ಒಂದೇ ವರ್ಷ, 100 ಮಿಸೈಲ್!
1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, 3 ತಿಂಗಳ ಹಿಂದಷ್ಟೇ ತನ್ನ ದೇಶದ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಬಗ್ಗೆ ಮಾಹಿತಿ ನೀಡಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಆದರೆ ಈ ಪ್ರಯೋಗ ವಿಫಲವಾಗಿ, ಉತ್ತರ ಕೊರಿಯಾದ ಮೊಟ್ಟ ಮೊದಲ ಮಿಲಿಟರಿ ಉಪಗ್ರಹವು ಸಮುದ್ರಕ್ಕೆ ಬಿದ್ದಿತ್ತು. ಈಗ ಹೊಸ ಕ್ಷಿಪಣಿ ಪ್ರಯೋಗ ಮೂಲಕ ಶತ್ರುಗಳ ವಿರುದ್ಧ ಕಿಮ್ ತೊಡೆತಟ್ಟಿದ್ದಾನೆ.
ಅದೆಷ್ಟು ಕ್ಷಿಪಣಿ ಬೇಕು ಸರ್ವಾಧಿಕಾರಿಗೆ?
ಕೆಲ ತಿಂಗಳ ಹಿಂದೆ ಕೂಡ ಕಿಮ್ ಜಾಂಗ್ ಉನ್ ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಶಕ್ತಿ ಇರುವ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಿಮ್ ಜಾಂಗ್ ಉನ್, ತನ್ನ ಬತ್ತಳಿಕೆಯಲ್ಲಿರುವ ಕ್ಷಿಪಣಿಗಳ ರಾಶಿಯನ್ನ ಇನ್ನಷ್ಟು ಹೆಚ್ಚಿಸುತ್ತಿದ್ದಾನೆ. ಇದು ಅಮೆರಿಕ ಮತ್ತು ಜಪಾನ್ ನಾಯಕರ ನಿದ್ದೆಗೆಡಿಸಿದೆ. ಅಲ್ಲದೆ ಈ ಬಾರಿ ಯುರೋಪ್ ರಾಷ್ಟ್ರಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾನೆ ಸರ್ವಾಧಿಕಾರಿ.












Click it and Unblock the Notifications