ಬಡವರಿಗೆ 10,000 ಮನೆ ಕಟ್ಟಿಸಿದ ಸರ್ವಾಧಿಕಾರಿ, ಭರ್ಜರಿ ಗಿಫ್ಟ್!
ಉತ್ತರ ಕೊರಿಯಾ ಸರ್ವಾಧಿಕಾರಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ, ಸುದ್ದಿಯಲ್ಲಿ ಇರುವ ವ್ಯಕ್ತಿ. ಅದರಲ್ಲೂ ಹತ್ಯೆ & ಹಿಂಸೆ ಮೂಲಕವೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದೊಡ್ಡ ಹೆಸರು ಮಾಡಿದ್ದಾನೆ. ಹೀಗಿದ್ದಾಗ ತನ್ನ ದೇಶದ ಅಭಿವೃದ್ಧಿ ವಿಚಾರದಲ್ಲಿ ಕೂಡ ಕಿಮ್ ಜಾಂಗ್ ಉನ್ ಹಿಂದೆ ಬಿದ್ದಿಲ್ಲ, ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ!
ಹೌದು, ಉತ್ತರ ಕೊರಿಯಾ ಎಂಬ ದೇಶ ಕಮ್ಯುನಿಸ್ಟ್ ಸಿದ್ಧಾಂತ ಫಾಲೋ ಮಾಡುತ್ತಾ ಕಿಮ್ ಜಾಂಗ್ ಉನ್ ಕುಟುಂಬದ ಆಡಳಿತದಲ್ಲಿ ಕಾಲ ಕಳೆಯುತ್ತಿದೆ. ಕೆಲವರು ಇದು ಕೆಟ್ಟದ್ದು ಅಂತಾ ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಸರಿಯಾಗಿ ಇದೆ ಅಂತಾರೆ. ಹೀಗೆ ಕಿಮ್ ಜಾಂಗ್ ಉನ್ ಆಡಳಿತದ ಬಗ್ಗೆ ನಾನಾ ರೀತಿಯ ಕಮೆಂಟ್ ಇದ್ದೇ ಇದೆ. ಹೀಗಿದ್ದರೂ ಹೊರ ಜಗತ್ತಿನ ಬಗ್ಗೆ ಕೇರ್ ಮಾಡದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ತನ್ನ ದೇಶದ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾನೆ.

ಬಡವರಿಗೆ 10,000 ಮನೆ ಕಟ್ಟಿಸಿದ ಸರ್ವಾಧಿಕಾರಿ!
ಅಂದಹಾಗೆ ಉತ್ತರ ಕೊರಿಯಾ ಇದೀಗ ಹೊಸ ಹಾದಿಯಲ್ಲಿ ಚಲಿಸುತ್ತಿದ್ದು, ಅದರ ಭಾಗವಾಗಿ ಈಗ ಬಡವರ ಅಭಿವೃದ್ಧಿಗೆ ಕಿಮ್ ಜಾಂಗ್ ಉನ್ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿದೆ. ಅದರಲ್ಲೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕಿಮ್ ಜಾಂಗ್ ಉನ್ ಬರೋಬ್ಬರಿ 10,000 ಮನೆ ಕಟ್ಟಿಸಿದ್ದಾನಂತೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಶುರುವಾಗಿ, ಕಿಮ್ ಜಾಂಗ್ ಉನ್ ಮಾಡಿರುವ ಉತ್ತಮ ಕೆಲಸಕ್ಕೆ ಜನ ಗುಡ್, ಗುಡ್ ಅಂತಾ ಹೇಳುತ್ತಿದ್ದಾರೆ.
5 ವರ್ಷದಲ್ಲಿ 50,000 ಮನೆ?
2021 ರಲ್ಲಿ ಉತ್ತರ ಕೊರಿಯಾ ಪಂಚವಾರ್ಷಿಕ ಯೋಜನೆ ರೀತಿ, 5 ವರ್ಷದಲ್ಲೇ 50,000 ಮನೆ ಕಟ್ಟಿಸಲು ಪ್ಲಾನ್ ಹಾಕಿಕೊಂಡಿತ್ತು. ಅದರ ಭಾಗವಾಗಿ ಇದೀಗ ಕಿಮ್ ಜಾಂಗ್ ಉನ್ ಭರ್ಜರಿ 10,000 ಮನೆ ನಿರ್ಮಿಸಿ ವಸತಿ ರಹಿತ ಉತ್ತರ ಕೊರಿಯಾ ಪ್ರಜೆಗಳಿಗೆ ಹಸ್ತಾಂತರ ಮಾಡಿದ್ದಾರೆ ಎನ್ನಲಾಗಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿ, ಅಲ್ಲಿನ ಫ್ಲಾಟ್‌ಗಳನ್ನು ಇದೀಗ ಬಡವರಿಗೆ ಹಸ್ತಾಂತರ ಮಾಡಿದ್ದಾನಂತೆ ಉತ್ತರ ಕೊರಿಯಾ ಅಧ್ಯಕ್ಷ.
ಹೀಗೆ ಉತ್ತರ ಕೊರಿಯಾ ಬಡವರಿಗೆ ಮನೆ ಕಟ್ಟಿಸಿಕೊಟ್ಟಿರುವ ವಿಚಾರ ಪಾಶ್ಚಿಮಾತ್ಯ ದೇಶಗಳ ಒಳಗೆ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಮನೆ ಇಲ್ಲದೆ ಪರದಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೀಗಿದ್ದಾಗ, ಸರ್ವಾಧಿಕಾರಿ ಹೀಗೆ ಉತ್ತಮ ಕೆಲಸ ಮಾಡಿರುವುದು ಗಮನ ಸೆಳೆದಿದೆ.












Click it and Unblock the Notifications