ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nobel Prize 2022 : ಹಣಕಾಸು ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ

|
Google Oneindia Kannada News

ವಾಷಿಂಗ್ಟನ್, ಅ. 10: ಬ್ಯಾಂಕ್ ಮತ್ತು ಹಣಕಾಸು ಬಿಕ್ಕಟ್ಟು ಮೇಲೆ ಸಂಶೋಧನೆ ಮಾಡಿದ್ದ ಮೂವರು ಅರ್ಥಶಾಸ್ತ್ರಜ್ಞರಿಗೆ 2022ರ ನೊಬೆಲ್ ಬಹುಮಾನ ಸಿಕ್ಕಿದೆ.

ನೊಬೆಲ್ ಬಹುಮಾನ ಪಡೆದ ಬೆನ್ ಎಸ್ ಬೆರ್ನಾಂಕೆ, ಡೌಗ್ಲಾಸ್ ಡಬ್ಲ್ಯು ಡೈಮಂಡ್ ಮತ್ತು ಫಿಲಿಪ್ ಡಬ್ಲ್ಯು ಡೈಬವಿಗ್ ಅವರು ಅಮೆರಿಕದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಇವರು ಮಾಡಿದ ಸಂಶೋಧನೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಎದುರಿಸಲು ಸಹಾಯವಾಗಿದೆ. ಹಣಕಾಸು ಬಿಕ್ಕಟ್ಟುಗಳು ದೀರ್ಘಾವಧಿ ಆರ್ಥಿಕ ಹಿಂಜರಿತಕ್ಕೆ ಬೀಳದಂತೆ ಹೇಗೆ ನಿರ್ವಹಿಸಬಹುದು ಎಂಬುದನ್ನು ಇವರ ಸಂಶೋಧನೆಗಳು ತೋರಿಸಿಕೊಟ್ಟಿವೆ. ಇವರ ಕಾರ್ಯಕ್ಕೆ ಮನ್ನಣೆ ಕೊಡಲು ನೊಬೆಲ್ ಬಹುಮಾನ ದಯಪಾಲಿಸಲಾಗುತ್ತಿದೆ.

Nobel Prize 2022: ಯಾವ ವಿಭಾಗದಲ್ಲಿ ಯಾರಿಗೆ ನೊಬೆಲ್ ಪ್ರಶಸ್ತಿ ಗೌರವ?Nobel Prize 2022: ಯಾವ ವಿಭಾಗದಲ್ಲಿ ಯಾರಿಗೆ ನೊಬೆಲ್ ಪ್ರಶಸ್ತಿ ಗೌರವ?

ಈ ಮೂವರಿಗೆ ಸಿಗುವ ನೊಬೆಲ್ ಬಹುಮಾನದಲ್ಲಿ ಸುಮಾರು 1 ಕೋಟಿ ಸ್ವೀಡಿಶ್ ಕ್ರೋನಾರ್ (ಸುಮಾರು 7 ಕೋಟಿ ರೂಪಾಯಿ) ನಗದು ಹಣವೂ ಒಳಗೊಂಡಿದೆ.

Nobel Prize 2022 for Economics Awarded to 3 American Economists

ಆರ್ಥಿಕತೆಯ ನೊಬೆಲ್ ಯಾಕೆ ವಿಳಂಬ?
ಅಕ್ಟೋಬರ್ ಮೊದಲ ವಾರದಲ್ಲಿ ನೊಬೆಲ್ ಬಹುಮಾನಗಳನ್ನು ಘೋಷಿಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವಿಭಾಗಗಳಲ್ಲಿ ನೊಬೆಲ್ ಪ್ರಕಟಿಸಲಾಗಿದೆ. ಈಗ ಮೂರು ದಿನಗಳ ಬಳಿಕ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗಿದೆ.

1895ರಲ್ಲಿ ಸ್ವೀಡನ್‌ನ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೊಬೆಲ್ ಬಹುಮಾನ ಘೋಷಿಸುವ ಪರಂಪರೆ ಆರಂಭವಾಯಿತು. ಫಿಸಿಕ್ಸ್, ಕೆಮಿಸ್ಟ್ರಿ, ಫಿಸಿಯೋಲಜಿ/ಮೆಡಿಸಿನ್ ಮತ್ತು ಪೀಸ್ ನೊಬೆಲ್ ಕೊಡಲಾಗುತ್ತಿತ್ತು. ಆಗ ಎಕನಾಮಿಕ್ಸ್‌ನಲ್ಲಿ ನೊಬೆಲ್ ಕೊಡಲಾಗುತ್ತಿರಲಿಲ್ಲ. ಸ್ವೀಡನ್ ದೇಶದ ಸೆಂಟ್ರಲ್ ಬ್ಯಾಂಕ್ ಇದೇ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ 1969ರಿಂದ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಕೊಡುವ ಪದ್ಧತಿ ಆರಂಭಿಸಿತು.

Nobel Peace Prize- ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ಗೆ 2022 ನೊಬೆಲ್ ಶಾಂತಿ ಪ್ರಶಸ್ತಿNobel Peace Prize- ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ಗೆ 2022 ನೊಬೆಲ್ ಶಾಂತಿ ಪ್ರಶಸ್ತಿ

ಇತರ ನೊಬೆಲ್ ವಿಜೇತರು
2022ರಲ್ಲಿ ಭೌತಶಾಸ್ತ್ರದಲ್ಲಿ ಅಲೇನ್ ಆಸ್ಪೆಕ್ಟ್, ಜಾನ್ ಕ್ಲಾಸರ್ ಮತ್ತು ಆಂಟೋನ್ ಜೇಲಿಂಗರ್ ಈ ಮೂವರಿಗೆ ನೊಬೆಲ್ ನೀಡಲಾಗಿದೆ. ಸಣ್ಣ ವಸ್ತುಗಳನ್ನು ಪ್ರತ್ಯೇಕ ಮಾಡಿದರೂ ಪರಸ್ಪರ ಹೇಗೆ ಸಂಪರ್ಕಿತವಾಗಿರುತ್ತವೆ ಎಂಬುದನ್ನು ಇವರು ನಿರೂಪಿಸಿದ್ದರು. ಇದು ಸ್ಪೆಷಲಸ್ಡ್ ಕಂಪ್ಯೂಟಿಂಗ್ ಮತ್ತು ಮಾಹಿತಿ ಎನ್‌ಕ್ರಿಪ್ಟ್ ಮಾಡಲು ಸಹಾಯವಾಗುತ್ತದೆ.

ಇನ್ನು ರಾಸಾಯನ ಶಾಸ್ತ್ರದಲ್ಲಿ ಕರೋಲಿನ್ ಬೆರ್ಟೋಜಿ, ಬ್ಯಾರಿ ಶಾರ್ಪ್ಲೆಸ್, ಮಾರ್ಟನ್ ಮೆಲ್ದಾಲ್ ಅವರಿಗೆ ನೊಬೆಲ್ ಸಿಕ್ಕಿದೆ. ಫ್ರಾನ್ಸ್ ದೇಶದ ಆನೀ ಎರ್ನಾಕ್ಸ್‌ಗೆ ಸಾಹಿತ್ಯದಲ್ಲಿ ನೊಬೆಲ್ ಸಿಕ್ಕಿತು. ಅಲೆಸ್ ಬಿಯಾಲಿಯಾಸ್ಕಿ ಹಾಗೂ ರಷ್ಯ ಮತ್ತು ಉಕ್ರೇನ್‌ನ ಮಾನವ ಹಕ್ಕು ಸಂಘಟನೆಗಳಿಗೆ ನೊಬೆಲ್ ಶಾಂತಿ ಬಹುಮಾನ ದೊರಕಿತು.

ಇನ್ನು, ಅರ್ಥಶಾಸ್ತ್ರದಲ್ಲಿ ಈ ವರ್ಷ ಬೆನ್ ಬೆರ್ನಾನ್ಕೆ, ಡೌಗ್ಲಸ್ ಡೈಮಂಡ್ ಮತ್ತು ಫಿಲಿಪ್ ಡೈಬವಿಗ್ ಅವರಿಗೆ ನೊಬೆಲ್ ಸಿಕ್ಕಿದೆ. ಕಳೆದ ಬಾರಿ ಈ ಬಹುಮಾನ ಡೇವಿಡ್ ಕಾರ್ಡ್ ಎಂಬುವರಿಗೆ ದೊರಕಿತ್ತು. ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣವು ಹೇಗೆ ಕಾರ್ಮಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಡೇವಿಡ್ ಕಾರ್ಡ್ ತಮ್ಮ ಸಂಶೋಧನೆಯಲ್ಲಿ ಕಂಡುಹಿಡಿದಿದ್ದರು.

ಜೋಶುವಾ ಆಂಗ್ರಿಸ್ಟ್ ಮತ್ತು ಗ್ಯೂಡೋ ಇಂಬೆನ್ಸ್ ಅವರಿಗೂ ಕಳೆದ ವರ್ಷ ಅರ್ಥಶಾಸ್ತ್ರದಲ್ಲಿ ನೊಬೆಲ್ ಸಿಕ್ಕಿತ್ತು.

(ಒನ್ಇಂಡಿಯಾ ಸುದ್ದಿ)

English summary
Ben S Bernanke, Douglas W Diamond and Philip H Dybvig have won the 2022 Nobel prize for economics on Monday for research on banks and financial crises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X