2016ರ ನೊಬೆಲ್ ಶಾಂತಿ ಪ್ರಶಸ್ತಿಗೆ ಎಷ್ಟು ಮಂದಿ ನೊಂದಾವಣೆ?

Posted By:
Subscribe to Oneindia Kannada

ಲಂಡನ್,ಮಾರ್ಚ್,02: ಜಗತ್ತಿನ ಅತ್ಯಂತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ-2016 ಕ್ಕೆ ಹೆಸರನ್ನು ನೊಂದಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರತಿ ದೇಶದ ಸಾಧಕರು, ಸಂಘ-ಸಂಸ್ಥೆಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಹವಣಿಸುತ್ತಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರಕ್ಕೆ ಅಮೆರಿಕಾದ ಡೊನಾಲ್ಡ್ ಟ್ರಂಪ್, ಜರ್ಮನ್ ಛಾನ್ಸಲರ್ ಏಂಜಲ್ ಮಾರ್ಕೆಲ್, ಫ್ರಾನ್ಸ್ ನ ಪೋಪ್ ಸೇರಿದಂತೆ ಗ್ರೀಕ್, ಐಲ್ಯಾಂಡ್ ಹೀಗೆ ನಾನಾ ದೇಶದ ಒಟ್ಟು 376 ಮಂದಿ, ಸಂಸ್ಥೆಗಳು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.[ಟೂನಿಷಿಯಾದ 'ಕ್ವಾರ್ಟೆಟ್' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ]

Nobel peace prize 2016 witnesses record nominations

ಒಟ್ಟು ನೊಂದಾಯಿತ 376 ಹೆಸರುಗಳಲ್ಲಿ ವ್ಯಕ್ತಿಗತ ಸಾಧಕರು 228 ಮಂದಿ ಇದ್ದಾರೆ. ಇನ್ನೂ 148 ಹೆಸರುಗಳು ವಿವಿಧ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದೆ. ಕಳೆದ ವರ್ಷ ಅಂದರೆ 2014ರಲ್ಲಿ ಈ ಪ್ರಶಸ್ತಿಗೆ ಕೇವಲ 278 ಹೆಸರುಗಳು ಮಾತ್ರ ನೊಂದಾವಣೆಯಾಗಿದ್ದವು. ಆದರೆ ಈ ಬಾರಿ ಈ ಸಂಖ್ಯೆ ಭಾರೀ ಹೆಚ್ಚಳ ಕಂಡಿದೆ.

ಐದು ಜನರನ್ನು ಒಳಗೊಂಡ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಮೊದಲ ಸಭಾ ಚರ್ಚೆಯಲ್ಲಿಯೇ ಬಿಡುಗಡೆ ಮಾಡಲಿದೆ. ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಾಂಕಿತಗೊಂಡ ನೂರಾರು ಹೆಸರುಗಳಲ್ಲಿ ಮೂವರು ವಿಜೇತರನ್ನು ಅಕ್ಟೋಬರ್ 07, 2016ಕ್ಕೆ ಘೋಷಿಸಲಾಗುವುದು ಎಂದು ಆಯ್ಕೆ ಸಮಿತಿ ತಿಳಿಸಿದೆ.[ಶಾಂತಿ ನೊಬೆಲ್ ಸ್ವೀಕರಿಸಿದ ಸತ್ಯಾರ್ಥಿ, ಮಲಾಲಾ]

ಕಳೆದ ವರ್ಷಗಳ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು:

* 2014ರಲ್ಲಿ ಮಕ್ಕಳ ಹಕ್ಕುಗಳ ಆಂದೋಲನಕಾರ ಭಾರತದ ಕೈಲಾಶ್ ಸತ್ಯಾರ್ಥಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಹೋರಾಟಗಾರ್ತಿ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದರು.

* 2015ರಲ್ಲಿ ಟೂನಿಷಿಯಾದ ಕ್ವಾರ್ಟೆಟ್ ಸಂಸ್ಥೆಯು ನೊಬೆಲ್ ಶಾಂತಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿತ್ತು. ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕ ಕೊಡುಗೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nobel peace prize 2016 has witnessed a record nominations. This year a total 376 people have been nominated for the coveted prize. Out of total 376, 228 are individuals and 148 are organizations, said a statement issued by the Nobelprize.org.
Please Wait while comments are loading...