ಅವಿಶ್ವಾಸ ನಿರ್ಣಯ ಸ್ಥಗಿತ; ಪಾಕ್‌ಗೆ ಸದ್ಯಕ್ಕೆ ಇಮ್ರಾನ್ ಖಾನ್ ಪ್ರಧಾನಿ
ಇಸ್ಲಾಮಾಬಾದ್, ಏಪ್ರಿಲ್ 03: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರದ ಸಂಸತ್ತಿನಲ್ಲಿ ಇಂದು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಮಂಡನೆ ಸ್ಥಗಿತಗೊಂದಿದೆ. ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯ ಸ್ಥಗಿತಗೊಂಡಿತು, ಇಮ್ರಾನ್ ಖಾನ್ ಸದ್ಯಕ್ಕೆ ಪಾಕ್ ಪ್ರಧಾನಿಯಾಗಿ ಉಳಿದಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರ ಬಂದಿದೆ.
ಅವಿಶ್ವಾಸ ಮತವು ವಿದೇಶಿ ಪಿತೂರಿಯ ಭಾಗವಾಗಿದೆ ಎಂದು ಸ್ಪೀಕರ್ ತೀರ್ಪು ನೀಡಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ. ಈ ನಡುವೆ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಪಾಕಿಸ್ತಾನ ಸಂಸತ್ ಲೆಕ್ಕಾಚಾರ ಹೇಗಿದೆ?: ಪಾಕಿಸ್ತಾನದ ಸಂಸತ್ತಿನಲ್ಲಿ 342 ಸದಸ್ಯ ಬಲದ ಪೈಕಿ ಬಹುಮತಕ್ಕೆ 172 ಸದಸ್ಯರು ಬೆಂಬಲ ಬೇಕಾಗುತ್ತದೆ. ಈ ನಿರ್ಣಯವನ್ನು 172 ಸದಸ್ಯರು ಒಟ್ಟುಗೂಡಿ ಸರ್ಕಾರವನ್ನು ಉರುಳಿಸಲಿದ್ದಾರೆ ಎಂದು ಪ್ರತಿಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

ಕಳೆದ 2018ರಲ್ಲಿ ಇಮ್ರಾನ್ ಖಾನ್ "ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಆಡಳಿತ ನಿರ್ವಹಣೆಯಲ್ಲಿ ಅವರು ವಿಫಲವಾಗಿದ್ದಾರೆ. ಪ್ರತಿಪಕ್ಷಗಳು ಅವರ ಸರ್ಕಾರದ ವಿರುದ್ಧ ಸಿಡಿದೆದ್ದಿವೆ. 69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಈ ಹಂತದಲ್ಲಿ ಯಾವುದೇ ಪಾಲುದಾರರು ಪಕ್ಷವನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು.
ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ಪ್ರಮುಖ ಮಿತ್ರಪಕ್ಷವಾದ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ (MQM-P) ತನ್ನ ಬೆಂಬಲವನ್ನು ಹಿಂಪಡೆದಿರುವುದಾಗಿ ಘೋಷಿಸಿದೆ. ಇದಾದ ಬಳಿಕ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಡಳಿತ ಪಕ್ಷ PTI ಬಹುಮತ ಕಳೆದುಕೊಂಡಿದೆ. MQM ಬುಧವಾರದಂದು ತಾನು ವಿರೋಧ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ನಾಳೆಯ ಮತದಾನಕ್ಕೆ "ಒಂದಕ್ಕಿಂತ ಹೆಚ್ಚು ಯೋಜನೆ"ಗಳನ್ನು ಹೊಂದಿರುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಬಾಹ್ಯ ಶಕ್ತಿಗಳ ಪಿತೂರಿಯ ವಿರುದ್ಧ ಪಾಕಿಸ್ತಾನದ ಯುವಕರು ಆಂದೋಲನ ಮತ್ತು ಧ್ವನಿ ಎತ್ತಬೇಕೆಂದು ಅವರು ಒತ್ತಾಯಿಸಿದ್ದರು.












Click it and Unblock the Notifications