Donald Trump: ಭಾರತೀಯರಿಗೆ ಕೆಲಸ ಕೊಡಬೇಡಿ, ಅಮೆರಿಕದ ಕಂಪನಿಗಳಿಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಭಾರತೀಯರ ಬೆಂಬಲ ಪಡೆದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದ ಡೊನಾಲ್ಡ್ ಟ್ರಂಪ್ ಇದೀಗ ಭಾರತೀಯರ ವಿರೋಧಿ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಡೊನಾಲ್ಡ್ ಟ್ರಂಪ್ ಹೀಗೆ ಕಳೆದ ಕೆಲ ತಿಂಗಳಿಂದ ಪದೇ ಪದೇ ಭಾರತ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದ್ದಾರೆ, ಎಂಬ ಭಾರಿ ಗಂಭೀರ ಆರೋಪದ ನಡುವೆ ಇದೀಗ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಸಿಕ್ಕಿದೆ. ಅದರಲ್ಲೂ ಈ ಟ್ರಂಪ್ ಮಹಾಶಯ ಭಾರತೀಯರ ಉದ್ಯೋಗಕ್ಕೂ ಕತ್ತರಿ ಹಾಕಲು ಏನು ಮಾಡಿದ್ದಾರಂತೆ ಗೊತ್ತಾ?
ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವಲ್ಲಿ ಭಾರತೀಯರ ಬೆಂಬಲ ಕೂಡ ದೊಡ್ಡದಾಗಿ ಇದೆ. ಕೋಟಿ ಕೋಟಿ ಭಾರತೀಯರು ಡೊನಾಲ್ಡ್ ಟ್ರಂಪ್ ಪರವಾಗಿ ನಿಂತು ಬೆಂಬಲಿಸಿದ್ದರು. ಹಾಗೇ ಅಮೆರಿಕದಲ್ಲಿ ಇರುವ ಭಾರತೀಯರು ನೇರವಾಗಿ ಡೊನಾಲ್ಡ್ ಟ್ರಂಪ್ ಪರವಾಗಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಹೀಗೆ ಭಾರತೀಯರ ಜೊತೆಗೆ ಚನ್ನಾಗಿ ಇದ್ದು, ವೋಟ್ ಪಡೆದಿರುವ ಇದೇ ಟ್ರಂಪ್ ಇದೀಗ ಮಾಡುತ್ತಿರುವ ಕಿತಾಪತಿ ಒಂದೆರಡಲ್ಲ. ಇದೇ ರೀತಿ, ಭಾರತೀಯರಿಗೆ ಕೆಲಸ ಕೊಡಬೇಡಿ ಅಂತಾನೇ ಅಮೆರಿಕದ ಕಂಪನಿಗಳಿಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರಂತೆ.

ಭಾರತೀಯರ ಉದ್ಯೋಗಕ್ಕೆ ಟ್ರಂಪ್ ಕತ್ತರಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಕ್ ಮಾಡುತ್ತಿರುವುದು ಒಂದೆರಡು ದೇಶಗಳ ಜೊತೆಯಲ್ಲಿ ಅಲ್ಲ. ಡೊನಾಲ್ಡ್ ಟ್ರಂಪ್ ಜೊತೆಯಲ್ಲೇ ವಿವಾದಗಳು ಕೂಡ ಬೆರೆತು ಹೋಗಿದ್ದು, ಅಮೆರಿಕದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಒಳ್ಳೆಯ ಹೆಸರು ಉಳಿಸಿಕೊಂಡಿಲ್ಲ. ಜಾಗತಿಕ ವೇದಿಕೆಗಳಲ್ಲೂ ಅಮೆರಿಕದ ಮಾನ ಕಳೆಯಲು ಟ್ರಂಪ್ ಸಾಕು ಅಂತಾ ವಿರೋಧಿಗಳು ಹೇಳುತ್ತಾರೆ. ಇಷ್ಟೆಲ್ಲಾ ಕಾಂಟ್ರವರ್ಸಿ ಮಾಡಿಕೊಳ್ಳುವ ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಉದ್ಯೋಗ ಅಂದ್ರೆ ಕೆಲಸದ ಮೇಲೆ ಕೂಡ ಇದೀಗ ಕಣ್ಣು ಬಿದ್ದಿದೆ. ನೂರಾರು ಕನಸುಗಳನ್ನ ಕಟ್ಟಿಕೊಂಡು & ಅಮೆರಿಕದಲ್ಲಿ ಕೆಲಸ ಹುಡುಕಲು ಕಾಯುತ್ತಿದ್ದ ಕೋಟಿ ಕೋಟಿ ಭಾರತೀಯರಿಗೆ ಇದೀಗ ಆಘಾತ ನೀಡಿದ್ದಾರೆ ಇದೇ ಕಾಂಟ್ರವರ್ಸಿ ಕಿಂಗ್!
ಅಮೆರಿಕ ಅಧ್ಯಕ್ಷರ ಹೇಳಿಕೆಯಿಂದ ತಲ್ಲಣ!
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗೂಗಲ್ & ಮೈಕ್ರೋಸಾಫ್ಟ್ ಸೇರಿದಂತೆ ದೈತ್ಯ ಟೆಕ್ ಕಂಪನಿಗಳಿಗೆ ಸಂದೇಶ ಒಂದನ್ನು ರವಾನಿಸಿದ್ದಾರೆ. ವಿದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ಉದ್ಯೋಗ ನೀಡುವುದನ್ನು ನೀವು ನಿಲ್ಲಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಭಾರತೀಯರ ಉದ್ಯೋಗಕ್ಕೆ ಕತ್ತರಿ ಹಾಕಲು ಇದೀಗ ಟ್ರಂಪ್ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪದ ಜೊತೆಗೆ ಆಕ್ರೋಶ ಕೂಡ ಮೊಳಗಿದೆ. ವಾಷಿಂಗ್ಟನ್ ಎಐ ಶೃಂಗಸಭೆ ಸಮಯದಲ್ಲೇ ಟ್ರಂಪ್ ಈ ರೀತಿ ಹೇಳಿಕೆ ನೀಡಿರುವುದು ಭಾರಿ ದೊಡ್ಡ ತಿರುವು ಪಡೆಯುವಂತೆ ಮಾಡಿದೆ. ಅಮೆರಿಕದ ಕಂಪನಿಗಳು ಈಗ ಹೊರ ದೇಶಗಳಲ್ಲಿ ಉತ್ಪಾದನಾ ಘಟಕ ನಿರ್ಮಿಸುವುದಕ್ಕಿಂತ ಈಗ ದೇಶೀಯವಾಗೇ ಉದ್ಯೋಗ ಸೃಷ್ಟಿಗೇ ಹೆಚ್ಚಿನ ಒತ್ತು ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ ಟ್ರಂಪ್.












Click it and Unblock the Notifications