'ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ' ಝೆಲೆನ್ಸ್ಕಿ

ಕೀವ್ ಮಾರ್ಚ್ 09: ರಷ್ಯಾ ದಾಳಿ ಉಕ್ರೇನ್‌ನಲ್ಲಿ ಮುಂದುವರೆದಿದ್ದು ಉಕ್ರೇನ್ ಅಕ್ಷರಶ: ನಲುಗಿ ಹೋಗಿದೆ. ಈ ವೇಳೆ ರಷ್ಯಾ ಉಕ್ರೇನ್ ಮೇಲಿನ ಯುದ್ಧ ಕೈಬಿಡಲು ಸೂಚಿಸಿದ ಮೂರು ಬೇಡಿಕೆಗಳಲ್ಲಿ ಒಂದನ್ನು ಉಕ್ರೇನ್ ಒಪ್ಪಿಕೊಂಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದು ಉಕ್ರೇನ್ ಮೇಲೆ ಆಕ್ರಮಣ ಮಾಡದಿರಲು ರಷ್ಯಾ ಇಟ್ಟ ಬೇಡಿಕೆಗಳಲ್ಲಿ ಒಂದಾಗಿದೆ.

ಫೆಬ್ರವರಿ 24 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶದಂತೆ ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಸಾರಿದೆ. ಅಂದಿನಿಂದ ಇಂದಿನವರೆಗೂ ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ಮುಂದುವರೆಸಿದೆ. ಯುದ್ಧ ಕೈಬಿಡಲು ಎರಡೂ ದೇಶಗಳ ಅಧ್ಯಕ್ಷರು ಪರಸ್ಪರ ಮಾತುಕಳನ್ನಾಡಿದರೂ ರಾಜಿಯಾಗುತ್ತಿಲ್ಲ. ಪುಟಿನ್ ಸಂಧಾನಕ್ಕೆ ಮೂರು ಬೇಡಿಕೆಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ವೀಕರಿಸಲು ಸಿದ್ಧರಿರಲಿಲ್ಲ. ಆದರೀಗ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಜೊತೆಗೆ "NATO ಉಕ್ರೇನ್ ಅನ್ನು ಸ್ವೀಕರಿಸಲು ಸಿದ್ಧವಾಗಿಲ್ಲ" ಎಂದು Zelenskyy ಸೋಮವಾರ ರಾತ್ರಿ (ಯುಎಸ್ ಸಮಯ) ABC ನ್ಯೂಸ್‌ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಹೇಳಿದರು. "ಮೈತ್ರಿಯು ವಿವಾದಾತ್ಮಕ ವಿಷಯಗಳನ್ನು ಒಪ್ಪುತ್ತಿಲ್ಲ. ಹೀಗಾಗಿ ರಷ್ಯಾದೊಂದಿಗೆ ಮುಖಾಮುಖಿಯಾಗಿದೆ" ಎಂದು ಅಧ್ಯಕ್ಷರು ಸೇರಿಸಿದರು.

No longer pressing for NATO membership for Ukraine Volodymyr Zelenskyy

ಎರಡೂ ದೇಶಗಳ ಅಧ್ಯಕ್ಷರು ಷರತ್ತುಗಳನ್ನು ವಿಧಿಸುವ ಮೂಲಕ ಎರಡನೇ ಸಂಧಾನಕ್ಕೆ ಬ್ರೇಕ್ ಹಾಕಿದ್ದರು. ಸಂದಾನ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೂರು ಷರತ್ತುಗಳನ್ನು ವಿಧಿಸಿದ್ದರು. ಮೊದಲನೇ ಷರತ್ತು ಉಕ್ರೇನ್ ಶಸ್ತ್ರ ತ್ಯಜಿಸಬೇಕು, ಎರಡನೇಯದು ಶಸಸ್ತ್ರೀಕರಣದ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ, ಮೂರನೇ ಷರತ್ತು ಉಕ್ರೇನ್ ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದರು.

ಇನ್ನೂ ಉಕ್ರೇನ್ ಅಧ್ಯಕ್ಷ ಝೆಲೆಸ್ಕಿ ಕೂಡ ಎರಡು ಪರತ್ತುಗಳನ್ನು ಹಾಕಿದ್ದಾರೆ. ಮೊದಲನೆಯದು ರಷ್ಯಾ ಕೂಡಲೇ ಕದನ ವಿರಾಮ ನೀಡಬೇಕು. ಎರಡನೇಯದು ತಕ್ಷಣ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ. ಎರಡೂ ಷರತ್ತುಗಳನ್ನು ಒಪ್ಪದ ಹಿನ್ನೆಲೆ ಸಂದಾನ ಅಪೂರ್ಣಗೊಂದಿದೆ ಎನ್ನಲಾಗುತ್ತಿದೆ.

ಈ ನಡುವೆ ನಾವು ರಷ್ಯಾದಿಂದ ಬರುವ ಎಲ್ಲ ಆಮದು ನಿರ್ಬಂಧಿಸುತ್ತೇವೆ. ರಷ್ಯಾದ ತೈಲ, ಗ್ಯಾಸ್​ ಎಲ್ಲವನ್ನೂ ನಿರ್ಬಂಧಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ದೊಡ್ಡ ದೊಡ್ಡ ಕಂಪನಿಗಳು ಬಿಸಿ ಮುಟ್ಟಿಸುತ್ತಿವೆ. ರಷ್ಯಾದಲ್ಲಿ ಕೆಎಫ್​ಸಿ, ಪಿಜಾ ಹಟ್​ ತನ್ನ ಸೇವೆ ಸ್ಥಗಿತಗೊಳಿಸಿದೆ.

ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಬೆಂಬಲಕ್ಕೆ ಚೀನಾ ನಿಂತಿದೆ. ರಷ್ಯಾದ ಮೇಲೆ ವಿವಿಧ ದೇಶಗಳು ನಿರ್ಬಂಧ ವಿಧಿಸುತ್ತಿವೆ. ಈ ನಿರ್ಬಂಧಗಳು ಎಲ್ಲರಿಗೂ ನೇರವಾಗಿ ಹಾನಿ ಮಾಡಲಿವೆ. ಆದರೆ ರಷ್ಯಾವನ್ನು ಬಹಿರಂಗವಾಗಿ ಚೀನಾ ಬೆಂಬಲಿಸಿದೆ.

ಉಕ್ರೇನ್‌ ಮೇಲೆ ರಷ್ಯಾದ ಆಗ್ರಮಣದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಪರಮಾಣು ನಿರೋಧಕ ಪಡೆಗಳು ಅಲರ್ಟ್‌ ಆಗುವಂತೆ ಆದೇಶಿಸಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಮಾಡಿಸಿದೆ. ರಷ್ಯಾದ ಉನ್ನತ ಅಧಿಕಾರಿಗಳೊಂದಿಗಿನ ಭಾನುವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಪುಟಿನ್, ಪ್ರಮುಖ ನ್ಯಾಟೋ ಶಕ್ತಿಗಳು ರಷ್ಯಾ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿವೆ.

ಇಷ್ಟೇ ಅಲ್ಲದೆ, ರಷ್ಯಾದ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ್ದಾರೆ ಎಂದು ಪುಟಿನ್‌ ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ರಷ್ಯಾದ ರಕ್ಷಣಾ ಮಂತ್ರಿ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಪರಮಾಣು ನಿರೋಧಕ ಪಡೆಗಳು ಅಲರ್ಟ್‌ ಆಗುವಂತೆ ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+