ಅಮೆರಿಕದ ವಿಸ್ಕಾನ್ಸಿನ್‌ನಲ್ಲೂ ನ.1 ಕನ್ನಡ ರಾಜ್ಯೋತ್ಸವ ಅಧಿಕೃತ ಆಚರಣೆ

ವಿಸ್ಕಾನ್ಸಿನ್, ಅಕ್ಟೋಬರ್‌ 25: ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನವೆಂಬರ್ 1 ಅನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ಅಲ್ಲಿನ ಗವರ್ನರ್ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಕನ್ನಡ ಭಾರತ ದೇಶದ ಕರ್ನಾಟಕ ರಾಜ್ಯ ಭಾಷೆ ಶ್ರೀಮಂತ ಹಾಗೂ ಹಳೆಯ ಭಾಷೆಯಾಗಿದೆ. ಇದು ಸಾಹಿತ್ಯಿಕವಾಗಿ, ಹಳೆಯ ಶಾಸನಗಳನ್ನು ಒಳಗೊಂಡು ದಾಖಲಾದ ಐತಿಹಾಸಿಕ ಭಾಷೆಯಾಗಿದೆ. ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ರಾಜ್ಯದ ಏಕೀಕರಣವನ್ನು ಸೂಚಿಸುವ ಹಬ್ಬವಾದ ಇದನ್ನು ಕನ್ನಡ ರಾಜ್ಯೋತ್ಸವವೆಂದು ಆಚರಣೆ ಮಾಡಲಾಗುತ್ತದೆ. ಅಲ್ಲದೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿರುತ್ತದೆ.

ವಿಸ್ಕಾನ್ಸಿನ್‌ನಲ್ಲಿರುವ ಕನ್ನಡಿಗ ಸಮುದಾಯದ ನಿರಂತರ ಸೇವೆ, ಕೊಡುಗೆಗಳನ್ನು ನೀಡಿದೆ. ಅಲ್ಲದೆ ಶ್ರೀಮಂತ ಪರಂಪರೆಯ ಸಮಾಜದ ವೈವಿಧ್ಯತೆಯನ್ನು ಸಾರುತ್ತದೆ. ಮಿಲ್ವಾಕೀಯಲ್ಲಿರುವ ಮಿಲನ ಕನ್ನಡ ಕೂಟ ಸದಾ ಕನ್ನಡ ಪರಂಪರೆ ಸಂಸ್ಕೃತಿಯನ್ನು ಉತ್ತೇಜಿಸಿ ಕನ್ನಡತನವನ್ನು ಪಸರಿಸುತ್ತಿದೆ. ಅಲ್ಲದೆ ಮುಂದಿನ ಪೀಳಿಗೆಗೂ ಸಹ ಸಂಜೆ ಶಾಲೆಗಳು ಹಾಗೂ ವಿಶೇಷ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಬಂಧುತ್ವದ ಪರಿಕಲ್ಪನೆಯನ್ನು ಸಾರುತ್ತಿದೆ ಎಂದು ಹೇಳಿದ್ದಾರೆ.

No. 1 Kannada Rajyotsava celebration in Wisconsin of America

ವಿಸ್ಕಾನ್ಸಿನ್‌ನಲ್ಲಿರುವ ಮಿಲನ ಕನ್ನಡ ಕೂಟ ಹಾಗೂ ಕನ್ನಡ ಸಮುದಾಯವು ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ವೈವಿಧ್ಯತೆಯ ಪಸರಿಸುವ ಸಲುವಾಗಿ ನಾವು ನೆರವು ನೀಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 1 ಇಲ್ಲಿಯೂ ಸಹ ಕನ್ನಡ ರಾಜ್ಯೋತ್ಸವ ದಿನವೆಂದು ಆಚರಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No. 1 Kannada Rajyotsava celebration in Wisconsin of America

ಕಳೆದ ವರ್ಷ ಅಮೆರಿಕಾದ ಜಾರ್ಜಿಯಾ ರಾಜ್ಯದಲ್ಲಿ ನವೆಂಬರ್ 1 ಅನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ ಎಂದು ಘೋಷಣೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+