• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾಂಟ್ ಹಾಕದೆ ಲೈವ್ ವರದಿ ನೀಡಿ ಟ್ರೋಲಾದ ಟಿವಿ ವರದಿಗಾರ

|

ಫ್ಲೋರೀಡಾ, ಏಪ್ರಿಲ್ 29: ಕೊರೊನಾ ಲಾಕ್‌ಡೌನ್ ಇರುವ ಕಾರಣ ಅನೇಕ ದೇಶಗಳಲ್ಲಿ ಬಹುತೇಕ ಕಂಪನಿಗೆ ವರ್ಕ್‌ ಫ್ರಮ್ ಹೋಮ್ ನೀಡಲಾಗಿದೆ. ಸುದ್ದಿವಾಹಿನಿಗಳು ಕೂಡ ಅನೇಕರಿಗೆ ವರ್ಕ್‌ ಫ್ರಮ್ ಹೋಮ್ ನೀಡಿವೆ. ಆದರೆ, ಇಲ್ಲಿ ವರ್ಕ್‌ ಫ್ರಮ್ ಹೋಮ್‌ನಿಂದ ಸುದ್ದಿ ಮಾಡುವ ವರದಿಗಾರನೇ ಸುದ್ದಿಯಾಗಿದ್ದಾನೆ.

   Lockie Ferguson put under isolation following sore throat on international return |Lockie Ferguson |

   ಫ್ಲೋರೀಡಾದ ಎಬಿಸಿ ಸುದ್ದಿವಾಹಿನಿಯ ವಿಲ್ ರೀವ್ ಎಂಬ ವರದಿಗಾರ ಕೊರೊನಾ ಬಗ್ಗೆ ಬಂದು ಸುದ್ದಿಯನ್ನು ಮಾಡಿದ್ದರು. ಔಷಧ ಕಂಪನಿಯೊಂದು ಡ್ರೋನ್‌ಗಳನ್ನು ಬಳಸಿಕೊಂಡು ವೃದ್ಧರಿರುವ ಒಂದು ಊರಿಗೆ ಔಷಧ ಪೂರೈಕೆ ಮಾಡುತ್ತಿದೆ ಎನ್ನುವ ಸುದ್ದಿ ಇದಾಗಿತ್ತು.

   ಕೊರೊನಾ ಬಗ್ಗೆ ವರದಿಗೆಂದು ತೆರಳಿದ್ದ ಚೀನಾದ ವರದಿಗಾರ ನಾಪತ್ತೆ

   ಈ ಸುದ್ದಿಯನ್ನು ನೀಡಿದ್ದ ‍ವಿಲ್ ರೀವ್‌ರಿಂದ ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ವಾಹಿನಿ ಲೈವ್‌ ಸಂಪರ್ಕ ಮಾಡಿತು. ಮನೆಯಲ್ಲಿಯೇ ಇದ್ದ ವಿಲ್ ರೀವ್‌ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದರು. ಆದರೆ, ಆ ಸುದ್ದಿ ಮುಗಿದ ಮೇಲೆ ತಾವೇ ಸುದ್ದಿಯಾಗುವ ಪ್ರಸಂಗ ಬಂತು.

   ಮನೆಯಲ್ಲೇ ಇದ್ದ ವಿಲ್ ರೀವ್‌ ಪ್ಯಾಟ್‌ ಧರಿಸಿರಲಿಲ್ಲ. ಟಿವಿ ಪರದೆಯಲ್ಲಿ ತಮ್ಮ ದೇಹದ ಮೇಲಿನ ಭಾಗ ಮಾತ್ರ ಕಾಣಿಸುವುದು ಎಂದು ಪ್ಯಾಟ್ ಧರಿಸಲಿಲ್ಲ. ಒಳ್ಳೆಯ ಶಾರ್ಟ್‌ ಅವರ ಮೇಲೆ ಕೋಟ್ ಹಾಕಿಕೊಂಡಿದ್ದರು. ಆದರೆ, ಅವರ ವರದಿ ಮುಗಿಯುವಾಗ ಪರದೆ ಮೇಲೆ ಇದ್ದ ಗ್ರಾಫಿಕ್ಸ್ ಹೋದಾಗ ಅವರ ಬರಿಗಾಲು ವೀಕ್ಷಕರಿಗೆ ಕಾಣಿಸಿತು.

   ಪ್ಯಾಟ್‌ ಧರಿಸದೆ ಲೈವ್ ವರದಿ ನೀಡಿದ ವಿಷಯ ಆನ್‌ಏರ್‌ನಲ್ಲಿ ಬಹಿರಂಗವಾಯಿತು. ಇದನ್ನು ಸ್ಕೀನ್ ಶಾಟ್‌ ಪಡೆದು ಕೆಲವರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ವರ್ಕ್‌ ಫ್ರಮ್ ಹೋಮ್ ಅವಾಂತರದಿಂದ ವರದಿಗಾರ ನಗೆಗೀಡಾಗಿದ್ದಾರೆ.

   English summary
   ABC channel news reporter Will Reeve trolled for gave live report without wearing pants.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X