ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ನೇಪಾಳದಲ್ಲಿ ಮತ್ತೆ ಭೂಕಂಪ, ಉತ್ತರ ಭಾರತ ತತ್ತರ

|
Google Oneindia Kannada News

ನವದೆಹಲಿ, ಮೇ 12: ನೇಪಾಳ ಮತ್ತು ಉತ್ತರ ಭಾರತದಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪ ಸಂಭವಿಸಿದ್ದು ಮತ್ತೆ ಹಾನಿ ಲೆಕ್ಕ ಹಾಕುವ ಸ್ಥಿತಿ ಉಂಟಾಗಿದೆ. ಮುನಿಸಿಕೊಂಡಿರುವ ಪರಿಸರ ಯಾಕೋ ಇನ್ನು ಶಾಂತವಾದಂತೆ ಕಾಣುತ್ತಿಲ್ಲ.

ನೇಪಾಳದಲ್ಲಿ ಕಳೆದ ಎರಡು ವಾರಗಳ ಹಿಂದೆ ಸಂಭವಿಸಿದ ಸರಣಿ ಭೂಕಂಪದಿಂದ ಸುಮಾರು 8000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. 17,800 ಮಂದಿ ಗಾಯಗೊಂಡಿದ್ದರು. ದೆಹಲಿಯಲ್ಲಿ ಸುಮಾರು 6.2 ತೀವ್ರತೆಯ ಕಂಪನದ ಜೊತೆಗೆ ಒಡಿಶಾ, ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ.[ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ, ದೆಹಲಿ ಗಡ ಗಡ]

ನೇಪಾಳದಲ್ಲಿ ಮತ್ತೊಮ್ಮೆ ಪ್ರಬಲವಾದ ಭೂಕಂಪ ಸಂಭವಿಸಿದ್ದು ಇದರ ಪರಿಣಾಮ ಭಾರತದ ನವದೆಹಲಿ ಹಾಗೂ ಉತ್ತರ ಭಾರತದ ಅನೇಕ ಭಾಗಗಳು ಕಂಪಿಸಿವೆ. ರಕ್ಷಣಾ ಕಾರ್ಯಗಳು ಮತ್ತೆ ಆರಂಭವಾಗಿದ್ದು ಹಾನಿಯ ಲೆಕ್ಕಾಚಾರ ಸಿಕ್ಕಿಲ್ಲ.

ಗುಹವಾಟಿಯಲ್ಲಿ ಬಿರುಕು ಬಿಟ್ಟ ಸೇತುವೆ

ಗುಹವಾಟಿಯಲ್ಲಿ ಬಿರುಕು ಬಿಟ್ಟ ಸೇತುವೆ

ಉತ್ತರ ಭಾರತದಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪ ಸಂಭವಿಸಿದ್ದರ ಪರಿಣಾಮ ಗುಹವಾಟಿಯ ಚಂದಮಾರಿ ಓವರ್ ಬ್ರಿಡ್ಜ್ ನಲ್ಲಿ ಕಾಣಿಸಿಕೊಂಡ ಬಿರುಕು.

ಅಯ್ಯೋ...ಮುಂದೆನಾಗತ್ತೋ...!

ಅಯ್ಯೋ...ಮುಂದೆನಾಗತ್ತೋ...!

ಭೂಕಂಪದ ಅನುಭವ ಮತ್ತು ಭಯಕ್ಕೆ ಸಿಕ್ಕ ಮಹಿಳೆಯೊಬ್ಬರು ಅಲಹಾಬಾದ್ ನಲ್ಲಿ ಜ್ಞಾನ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರಗೆ ದಾಖಲಿಸಲಾಯಿತು.

ಬಿರುಕು ಬಿಟ್ಟ ಗೋಡೆ

ಬಿರುಕು ಬಿಟ್ಟ ಗೋಡೆ

ಸಿಲಿಗುರಿಯಲ್ಲಿ ಭೂಕಂಪದ ಪರಿಣಾಂ ಎಷ್ಟಿತ್ತು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಬಿರುಕು ಬಿಟ್ಟ ಗೋಡೆಯನ್ನು ಹುಡುಗನೊಬ್ಬ ತೋರಿಸುತ್ತಿರುವುದು.

ಬೀದಿಯಲ್ಲೇ ಇರೋದೆ ಆಗಿಹೋಯ್ತು

ಬೀದಿಯಲ್ಲೇ ಇರೋದೆ ಆಗಿಹೋಯ್ತು

ನಿರಂತರವಾಗಿ ಭೂ ಕಂಪಕ್ಕೆ ತುತ್ತಾಗಿ ಹಾನಿ ಅನುಭವಿಸುತ್ತಿರುವ ನೇಪಾಳದ ಮಹಿಳೆಯರು ಮಂಗಳವಾರ ಮತ್ತೆ ದಿಗಿಲು ಬೀಳುವಂತಾಯಿತು. ಭೂಕಂದ ನಂತರ ಬೀದಿಗೆ ಬಂದು ಆಶ್ರಯ ಪಡೆದುಕೊಂಡ ರೀತಿ.

ಎಲ್ಲಾ ನೆಲಸಮವಾಯಿತಲ್ಲಾ!!!

ಎಲ್ಲಾ ನೆಲಸಮವಾಯಿತಲ್ಲಾ!!!

ಕಡ್ಮಂಡುವಿನಲ್ಲಿ ಭೂಕಂಪದ ಹೊಡೆತಕ್ಕೆ ಸಿಲುಕಿ ನೆಲಸಮವಾದ ಕಟ್ಟಡದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದೆ. ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿಯೂ ಭೂ ಕಂಪ ಆಗಿರುವುದು ಭಾರದಲ್ಲಿ ಆತಂಕ ಹೆಚ್ಚಿಸಿದೆ.

ರಕ್ಷಣೆ ಮುಗಿಯದ ಕಾರ್ಯ

ರಕ್ಷಣೆ ಮುಗಿಯದ ಕಾರ್ಯ

ನೇಪಾಳದ ರಕ್ಷಣಾ ತಂಡವೊಂದು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿರುವ ದೃಶ್ಯ. ಭೂಕಂಪ ಇಡೀ ಪ್ರದೇಶವನ್ನು ಮತ್ತೆ ನುಜ್ಜು ಗುಜ್ಜು ಮಾಡಿದ್ದು ನಾಗರೀಕರಲ್ಲಿ ಭಯ ಹೆಚ್ಚಿಸಿದೆ.

English summary
News in Pics: Strong tremors were felt in Delhi, NCR and other parts of North India. The epicentre of the earthquake was said to be in Kathmandu, Nepal. Here some Pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X