ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ನಲ್ಲಿ 2 ದಿನಗಳಲ್ಲಿ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪ

|
Google Oneindia Kannada News

ಅಕ್ಲೆಂಡ್, ಮಾರ್ಚ್ 6: ನ್ಯೂಜಿಲೆಂಡ್‌ನಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದ್ದು, ಎರಡು ದಿನಗಳಲ್ಲಿ ಇದು 4ನೇ ಭೂಕಂಪವಾಗಿದೆ. ಭೂಕಂಪದ ತೀವ್ರತೆ 6.3 ಮ್ಯಾಗ್ನಿಟ್ಯೂಡ್‌ನಷ್ಟಿತ್ತು, ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಪಾಸ್ತಿ ಹಾನಿಯಾಗಿರುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. 9 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಆದರೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.

ಮಾರ್ಚ್ 05ರಂದು ಮೂರು ಬಾರಿ ಒಂದೇ ಜಾಗದಲ್ಲಿ ಭೂಕಂಪ ಸಂಭವಿಸಿತ್ತು. ಮಾಧ್ಯಮಗಳ ವರದಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ

ನ್ಯೂಜಿಲೆಂಡ್ ದೇಶದ ಪೂರ್ವಭಾಗದಲ್ಲಿರುವ ನಾರ್ತ್ ಐಲೆಂಡ್ ದ್ವೀಪದ ಬಳಿ ಒಂದಾದ ಮೇಲೊಂದು ಮೂರು ಪ್ರಬಲ ಭೂಕಂಪಗಳು ಸಂಭವಿಸಿತ್ತು. ಒಂದು ಭೂಕಂಪವಂತೂ ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ಹೊಂದಿತ್ತು.

New Zealand: New 6.3 Magnitude Earthquake Registered, No Damage Reported

ಎಂಟು ಗಂಟೆ ಅಂತರದಲ್ಲಿ ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿತ್ತು. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸರಣಿ ಭೂಕಂಪಕ್ಕೆ ಕಿವೀಸ್ ನಾಡು ಬೆಚ್ಚಿಬಿದ್ದಿತು.

ಅದರ ಪರಿಣಾಮವಾಗಿ ಪೂರ್ವ ಕಡಲ ತೀರದಾದ್ಯಂತ ಸಣ್ಣ ಸುನಾಮಿ ಅಲೆ ಅಪ್ಪಳಿಸಿತು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೊದಲ ಭೂಕಂಪವಾದಾಗಲೇ ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಹೀಗಾಗಿ ಸುನಾಮಿಯಿಂದ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ.

English summary
A new 6.3 magnitude earthquake stroke off New Zealand on Saturday following a series of powerful tremors recorded earlier this week, the US Geological Survey (USGS) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X