ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಡುವೆ ಮಕ್ಕಳಲ್ಲಿ ವಿಚಿತ್ರ ಕಾಯಿಲೆ: ಬೆಚ್ಚಿಬಿದ್ದ ಯು.ಕೆ ಪೋಷಕರು!

|
Google Oneindia Kannada News

ಲಂಡನ್, ಏಪ್ರಿಲ್ 30: ಕೊರೊನಾ ವೈರಸ್ ಕಂಟಕದಿಂದ ಯು.ಕೆ ನಲುಗಿದೆ. ಯು.ಕೆ ನಲ್ಲಿ ಇಲ್ಲಿಯವರೆಗೂ 165,221 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ನಿಂದಾಗಿ 26,097 ಜನ ಮೃತಪಟ್ಟಿದ್ದಾರೆ.

Recommended Video

ಪೋಷಕರಿಂದ ಹಣ ವಸೂಲಿ ಮಾಡಬೇಡಿ ಎಂದು ಖಾಸಗಿ ಶಾಲೆಗಳಿಗೆ ವಾರ್ನಿಂಗ್ ಕೊಟ್ಟ ಸರ್ಕಾರ..! | Suresh Kumar | Education

ಕೊರೊನಾ ವೈರಸ್ ಅನ್ನು ತಡೆಗಟ್ಟಲು ಯು.ಕೆ ಒದ್ದಾಡುತ್ತಿರುವಾಗಲೇ, ಅಲ್ಲಿನ ಮಕ್ಕಳಲ್ಲಿ ಒಂದು ವಿಚಿತ್ರವಾದ ಕಾಯಿಲೆ ಆವರಿಸ ತೊಡಗಿದೆ. ತೀವ್ರ ಜ್ವರ ಮತ್ತು swollen arteries ನಿಂದ ಅಲ್ಲಿನ ಮಕ್ಕಳು ಬಳಲುತ್ತಿದ್ದಾರೆ. ಇದರಿಂದ ಪೋಷಕರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಕೋವಿಡ್-19 ಗೆ ಇದು ಸಂಬಂಧ ಪಟ್ಟಿದ್ಯಾ, ಇಲ್ವಾ ಎಂಬ ಅನುಮಾನ ಸದ್ಯ ವೈದ್ಯರಿಗೆ ಕಾಡುತ್ತಿದೆ.

ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?

Multi-system Inflammation ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಳೆದ ಮೂರು ವಾರಗಳಿಂದ ಹೆಚ್ಚಾಗಿದೆ ಎಂದು ಪೀಡಿಯಾಟ್ರಿಕ್ ಇನ್ಟೆನ್ಸಿವ್ ಕೇರ್ ಸೊಸೈಟಿ ತಿಳಿಸಿದೆ.

ಪೀಡಿಯಾಟ್ರಿಕ್ ಇನ್ಟೆನ್ಸಿವ್ ಕೇರ್ ಸೊಸೈಟಿ ಹೇಳಿರುವುದೇನು?

ಪೀಡಿಯಾಟ್ರಿಕ್ ಇನ್ಟೆನ್ಸಿವ್ ಕೇರ್ ಸೊಸೈಟಿ ಹೇಳಿರುವುದೇನು?

''ಇದು ಕೋವಿಡ್-19 ಗೆ ಕಾರಣವಾಗುವ SARS-CoV-2 ಗೆ ಸಂಬಂಧಿಸಿದ ಉರಿಯೂತದ ಸಮಸ್ಯೆಯೋ ಅಥವಾ ಬೇರೆ ವೈರಸ್ ಗೆ ಸಂಬಂಧಿಸಿದ ರೋಗವೋ ಎಂಬುದನ್ನು ಪತ್ತೆ ಹಚ್ಚಬೇಕಿದೆ'' ಎಂದು ಪೀಡಿಯಾಟ್ರಿಕ್ ಇನ್ಟೆನ್ಸಿವ್ ಕೇರ್ ಸೊಸೈಟಿ ಹೇಳಿದೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಲಕ್ಷಣಗಳು

ಮಕ್ಕಳಲ್ಲಿ ಕಂಡುಬರುತ್ತಿರುವ ಲಕ್ಷಣಗಳು

ಮಕ್ಕಳಲ್ಲಿ ಹೊಟ್ಟೆ ನೋವು, ಗ್ಯಾಸ್ಟ್ರೋ ಇನ್ಟಸ್ಟೈನಲ್ ಸಮಸ್ಯೆ ಮತ್ತು ಕಾರ್ಡಿಯಾಕ್ ಇನ್ಫ್ಲಮೇಷನ್ ಕಾಣಿಸಿಕೊಳ್ಳುತ್ತಿದೆ. ಸಾಲದಕ್ಕೆ, ಟಾಕ್ಸಿಕ್ ಶಾಕ್ ಸಿಂಡ್ರೋಮ್ ಮತ್ತು atypical Kawasaki ಕಾಯಿಲೆ ಕೂಡ ಮಕ್ಕಳಲ್ಲಿ ಕಂಡುಬರುತ್ತಿದೆ ಎಂದು ವರದಿಯಾಗಿದೆ.

ಅಯ್ಯೋ ವಿಧಿಯೇ.. ಈಕ್ವೆಡಾರ್ ನಲ್ಲಿನ ವೈದ್ಯರ ಸ್ಥಿತಿ ಯಾರಿಗೂ ಬೇಡ!ಅಯ್ಯೋ ವಿಧಿಯೇ.. ಈಕ್ವೆಡಾರ್ ನಲ್ಲಿನ ವೈದ್ಯರ ಸ್ಥಿತಿ ಯಾರಿಗೂ ಬೇಡ!

ಪ್ರಕರಣಗಳು ಎದುರಾದರೆ, ತಿಳಿಸಿ..

ಪ್ರಕರಣಗಳು ಎದುರಾದರೆ, ತಿಳಿಸಿ..

ಇಲ್ಲಿಯವರೆಗೂ 10-20 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಇದೇ ರೀತಿಯ ರೋಗ ಲಕ್ಷಣಗಳನ್ನು ಮಕ್ಕಳು ಹೊತ್ತು ಬಂದರೆ ಕೂಡಲೆ ಗಮನಕ್ಕೆ ತರುವಂತೆ ರಾಷ್ಟ್ರೀಯ ಆರೋಗ್ಯ ಸೇವೆ ಎಚ್ಚರಿಕೆ ನೀಡಿದೆ.

ಕೆಲ ಮಕ್ಕಳಲ್ಲಿ ಕೋವಿಡ್-19 ಪಾಸಿಟಿವ್ ಇದೆ

ಕೆಲ ಮಕ್ಕಳಲ್ಲಿ ಕೋವಿಡ್-19 ಪಾಸಿಟಿವ್ ಇದೆ

ಕೊರೊನಾ ವೈರಸ್ ನಿಂದಾಗಿ ಮಕ್ಕಳಲ್ಲಿ ಇನ್ಫ್ಲಮೇಷನ್ ಸಮಸ್ಯೆ ಉಂಟಾಗುತ್ತಿದ್ಯಾ ಎಂಬುದನ್ನು ವೈದ್ಯರು ನಿಖರವಾಗಿ ಹೇಳುತ್ತಿಲ್ಲ. ಆದರೆ, ಇನ್ಫ್ಲಮೇಟರಿ ಸಿಂಡ್ರೋಮ್ ಹೊಂದಿರುವ ಕೆಲ ಮಕ್ಕಳಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿರುವುದು ದಿಟ.

English summary
New Coronavirus Like disease in Children leave UK Parents distressed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X