ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4,100 ಉದ್ಯೋಗ ಕಡಿತಕ್ಕೆ ಮುಂದಾದ ಸಿಸ್ಕೋ

|
Google Oneindia Kannada News

ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಕಂಪನಿಗಳ ಸಾಲಿಗೆ ಸಿಸ್ಕೋ ಸಹ ಸೇರಿಕೊಂಡಿದೆ. ಸುಮಾರು 4000 ಉದ್ಯೋಗಿಗಳನ್ನು ಸಿಸ್ಕೋ ತೆಗೆದುಹಾಕಲಿದೆ ಎಂಬ ವರದಿಗಳು ಬಂದಿವೆ.

ಸಿಲಿಕಾನ್ ವ್ಯಾಲಿ ಬ್ಯುಸಿನೆಸ್ ಜನರಲ್ ಈ ಕುರಿತು ವರದಿ ಮಾಡಿದೆ. ವಿಶ್ವದಾದ್ಯಂತ ಸುಮಾರು 83,000 ಉದ್ಯೋಗಿಗಳನ್ನು ಹೊಂದಿರುವ ಸಿಸ್ಕೋ 4100 ಉದ್ಯೋಗ ಕಡಿತ ಮಾಡಲಿದೆ.

ಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿ

2023ರ ಮೊದಲ ಕ್ವಾಟರ್‌ನಲ್ಲಿ ಸಿಸ್ಕೋ 13.6 ಬಿಲಿಯನ್ ಲಾಭಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ 6ರಷ್ಟು ಹೆಚ್ಚಳವಾಗಿದೆ.

ಶೇ 75ರಷ್ಟು ಟ್ವಿಟರ್ ಉದ್ಯೋಗಿಗಳ ವಜಾ ಮಾಡಲ್ಲ; ಎಲಾನ್ ಮಸ್ಕ್ ಶೇ 75ರಷ್ಟು ಟ್ವಿಟರ್ ಉದ್ಯೋಗಿಗಳ ವಜಾ ಮಾಡಲ್ಲ; ಎಲಾನ್ ಮಸ್ಕ್

Networking Giant Cisco To Lay Off 4100 Employees

ಸಿಸ್ಕೋದ ಚೇರ್‌ಮನ್ ಮತ್ತು ಸಿಇಒ ಚಕ್ ರಾಬಿನ್ಸ್‌ ಉದ್ಯೋಗ ಕಡಿತದ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ನೀಡಿಲ್ಲ. ಆದರೆ, ನಾವು ಕೆಲವು ಸರಿಯಾದ ಉದ್ಯಮ ನೀತಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇಂದೇ ತಿಳಿಯಿರಿ: ಜಗತ್ತಿನಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಸಂಸ್ಥೆ ಯಾವುದು? ಇಂದೇ ತಿಳಿಯಿರಿ: ಜಗತ್ತಿನಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಸಂಸ್ಥೆ ಯಾವುದು?

"ನಾವು ಏನು ಮಾಡುತ್ತಿದ್ದೇವೆ ಎಂದು ನೀವು ಉಹಿಸಬಹುದು. ಆದರೆ ಅದು ನಮ್ಮ ಅಂತಿಮ ಆದ್ಯತೆಯಲ್ಲ. ನಾವು ಕೆಲವು ಉದ್ಯಮ ನೀತಿ ಪಾಲಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಸಿಸ್ಕೋ ಮುಖ್ಯ ಹಣಕಾಸು ಅಧಿಕಾರಿ ಸ್ಕಾಟ್ ಹೆರೆನ್ ಈ ನಡೆಯನ್ನು ಸಮಯ, ಸಂದರ್ಭಕ್ಕೆ ಅನುಗುಣವಾಗಿ ಕೈಗೊಳ್ಳುವ ನಿರ್ಣಯಗಳು ಎಂದು ಬಣ್ಣಿಸಿದ್ದಾರೆ.

"ಇದನ್ನು ವೆಚ್ಚ ಕಡಿತಕ್ಕಾಗಿ ಮಾಡುತ್ತಿರುವ ತಲೆದಂಡ ಎಂದು ಭಾವಿಸಬಾರದು. ನಾವು ಬೋರ್ಡ್‌ನಲ್ಲಿ ಭವಿಷ್ಯದ ಹೂಡಿಕೆ ಬಗ್ಗೆ ಚರ್ಚಿಸಿದೆವು. ಚಕ್ ರಾಬಿನ್ಸ್‌ ಈ ಕುರಿತು ಮಾತನಾಡಿದ್ದಾರೆ" ಎಂದರು.

"ಹೊಸದಾಗಿ ಹೂಡಿಕೆ ಮಾಡುತ್ತಿರುವ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಉದ್ಯೋಗಕ್ಕೆ ಹೋಲಿಕೆ ಮಾಡಿದರೆ ಈಗ ನಮ್ಮ ತೀರ್ಮಾನದಿಂದ ಪರಿಣಾಮ ಎದುರಿಸುವ ಜನರ ಸಂಖ್ಯೆ ಕಡಿಮೆ" ಎಂದು ತಿಳಿಸಿದ್ದಾರೆ.

ಈಗಾಗಲೇ ಟ್ವಿಟರ್, ಮೆಟಾ, ಸೇಲ್ಸ್‌ಪೋರ್ಸ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ಈ ಸಾಲಿಗೆ ಈಗ ಸಿಸ್ಕೋ ಸಹ ಸೇರಿಕೊಂಡಿದೆ.

English summary
Now Cisco joined the list of layoff. Networking giant is reportedly laying off over 4,100 employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X