ಟ್ರಂಪ್ ಗೆಲುವು: ಟ್ವಿಟ್ಟರ್ ನಲ್ಲಿ ನೆಟ್ಟಿಗರ ವಾಗ್ದಾಳಿ

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 9: ಅಮೆರಿಕ ಅಧ್ಯಕ್ಷಿಯ ಚುನಾವಣೆಯ ತೀವ್ರ ಪೈಪೋಟಿ ನಡುವೆಯೂ ವಿವಾದಗಳ ಕೇಂದ್ರ ಬಿಂದುವಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟ ಬಹುಮತ ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.

ವಿವಾದಗಳಿಂದಲೇ ಪ್ರಚಾರ ಗಿಟ್ಟಿಸಿಕೊಂಡಿದ್ದ ಟ್ರಂಪ್ ಗೆಲುವಿನ ಕುರಿತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Netizens tweets worry and anger about Donald trump victory

"ರಿಯಲ್ ಎಸ್ಟೇಟ್ ದಿಗ್ಗಜ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿರುವುದರಿಂದ ಇನ್ನುಮುಂದೆ ಕಾಂಗ್ರೆಸ್ ನವರು ಸಹ ರಾಬಾರ್ಟಾ ವಾದ್ರಾ ಕಡೆ ಹೆಚ್ಚು ಗಮನ ಹರಿಸಬಹುದು" ಎಂದು ರಮೇಶ್ ಶ್ರೀವಾತ್ಸ್ ಅವರು ಟ್ವೀಟ್ ಮಾಡಿದ್ದಾರೆ.

"ಟ್ರಂಪ್ ಗೆದ್ದಿಲ್ಲ, ಜನಾಂಗೀಯ ದ್ವೇಷ ಗೆದ್ದಿದೆ, ಲಿಂಗ ಅಸಮಾನತೆ ಗೆದ್ದಿದೆ. ಶಿಕ್ಷಣದ ಕೊರತೆ ಗೆದ್ದಿದೆ, ಟ್ರಂಪ್ ಗೆಲುವಿಗೆ ಧಿಕ್ಕಾರ" ಎಂದು ಅಜಯ್ ಅಕ್ಬರ್ ಎಂಬುವವರು ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಅನೊಮೊಲಿ ಎಂಬುವವರು ಟ್ವೀಟ್ ಮಾಡಿ ಇದು ಇದು ವಿಶ್ವದ ಗ್ರಾಂಡ್ ಫಿನಾಲೆ. ನಮ್ಮ ಸಾವಿಗೆ ಮುನ್ನುಡಿ ಎಂದು ಟ್ವೀಟಿಸಿದ್ದಾರೆ.

ಇನ್ನು ಬ್ರೆಟ್ ಎಂ ಡೆಕ್ಕರ್ ಅವರು ಟ್ವೀಟ್ ಮಾಡಿ " ಪ್ರಚಾರ ಮುಗಿದಿದೆ. ಟ್ರಂಪ್ ಗೆದ್ದಿದ್ದಾರೆ. ನಮ್ಮ ಕೆಲಸ ಈಗ ಆರಂಭವಾಗಿದೆ. ಟ್ರಂಪ್ ಅವರು ಅಮೆರಿಕವನ್ನು ಮತ್ತೆಮ್ಮೊ ಗ್ರೇಟ್ ಅಮೆರಿಕ ಮಾಡುತ್ತಾರೆ" ಎಂದು ಹೇಳಿದ್ದಾರೆ.

ಟ್ರಂಪ್ ಅವರ ಗೆಲುವಿಗೆ ವ್ಯಂಗ್ಯವಾಗಿ ಮಾತನಾಡಿರುವ ನಟಿ ಲೇಡಿ ಗಾಗಾ ಅವರು "ಅಮೆರಿಕಾಗಿ ಪ್ರಾರ್ಥಿಸಿ" ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
So many netizens tweets worry and anger about Donald Trump win in the US presidential election 2016.
Please Wait while comments are loading...