ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರಿರುವ ಮೂರು ಹಳ್ಳಿಯನ್ನು ಖರೀದಿಸಲು ಮುಂದಾದ ನೇಪಾಳ

|
Google Oneindia Kannada News

ನೇಪಾಳ ಗಡಿಯಲ್ಲಿರುವ ಭಾರತೀಯರಿಗೆ ನೇಪಾಳ ಸರ್ಕಾರವು ಪೌರತ್ವದ ಜೊತೆಗೆ ಹಣ, ಭೂಮಿ ಮತ್ತು ಮನೆಗಳನ್ನು ಕಲ್ಪಿಸುವ ಭರವಸೆಯನ್ನು ನೀಡುತ್ತಿದೆ.

ಎಲ್ಎಸಿಯಲ್ಲಿ ಭಾರತವು ಚೀನಾದೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದೆ. ಇದನ್ನೇ ಉತ್ತಮ ಸಮಯ ಎಂದು ಭಾವಿಸಿರುವ ನೇಪಾಳವು ತನ್ನ ಹೊಸ ವರಸೆ ಆರಂಭಿಸಿದೆ.

ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿರಲು ಕೇಂದ್ರ ಗೃಹ ಸಚಿವಾಲಯ ಸೂಚನೆ ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿರಲು ಕೇಂದ್ರ ಗೃಹ ಸಚಿವಾಲಯ ಸೂಚನೆ

ನೇಪಾಳವು ಭಾರತ ಆಡಳಿತವಿರುವ ಹಳ್ಳಿಗಳ ಮೇಲೆ ಹಕ್ಕು ಸಾಧಿಸುವ ಸಲುವಾಗಿ ಉತ್ತರಾಖಂಡದ ಮೂರು ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಒಲಿಸುವ ಪ್ರಯತ್ನಕ್ಕೆ ಕೈಹಾಕಿದೆ.

Nepal Government Is Promising Money, Land, House, Citizenship In Three Villages On Border

ಕೈಲಾಸ ಪರ್ವತದ ಸಮೀಪ ಚೀನಾ ತನ್ನ ಮಿಲಿಟರಿ ನೆಲೆಗಳನ್ನು ವಿಸ್ತರಿಸಲು ನೇಪಾಳ ಸೇನೆಯು ನೆರವಾಗುತ್ತಿದೆ ಎಂಬುದು ತಿಳಿದು ಬಂದಿದ್ದು, ನೇಪಾಳದ ಇತ್ತೀಚಿನ ನಡೆಯ ಹಿಂದೆ ಚೀನಾ ಇದೆ ಎನ್ನುವ ಅನುಮಾನ ಉಂಟಾಗಿದೆ.

ಈ ಸಮಯದಲ್ಲಿ ನೇಪಾಳ ಸರ್ಕಾರವು ಹಣ, ಭೂಮಿ ಮತ್ತು ಮನೆಗಳನ್ನು ಕಟ್ಟಿಸಿಕೊಡುವುದರ ಜೊತೆಗೆ ನೇಪಾಳದ ಪೌರತ್ವವನ್ನು ಕೊಡುವ ಭರವಸೆ ನೀಡಿದೆ.

ಕಳೆದ ಕೆಲವು ದಿನಗಳಿಂದ ನೇಪಾಳ ಸರ್ಕಾರಕ್ಕಾಗಿ ಕೆಲಸ ಮಾಡುವ ಏಜೆಂಟರು ಕುಟಿ, ನಭಿ ಮತ್ತು ಗುಂಜಿ ಗ್ರಾಮದಲ್ಲಿ ವಾಸಿಸುವವರ ಜೊತೆ ಸಂಪರ್ಕದಲ್ಲಿದ್ದಾರೆ. ಇದು ಕಲಾಪಣಿ ಪ್ರದೇಶದಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ.

ನೇಪಾಳ, ಭಾರತ, ಚೀನಾ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಚೀನಾದ ಸೇನೆಯು ನೇಪಾಳ ಪ್ರದೇಶದ ಕೆಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿದೆ.

English summary
The Nepal government is promising money, land and houses along with Nepalese citizenship — most of which is believed to be funded by China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X