ಅಜ್ಜನ ಬಂಧನಕ್ಕೂ ಮೊದಲೇ ಗೂಂಡಾಗಿರಿ ಮಾಡಿದ ಮೊಮ್ಮಕ್ಕಳ ಬಂಧನ
Recommended Video

ಲಂಡನ್, ಜುಲೈ 13 : ಒಂದೆಡೆ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಮಗಳು ಮರ್ಯಮ್ ಬಂಧನಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಗೂಂಡಾಗಿರಿ ಮಾಡಿದ್ದಕ್ಕಾಗಿ ಷರೀಫ್ ಅವರ ಇಬ್ಬರು ಮೊಮ್ಮಕ್ಕಳು ಲಂಡನ್ನಿನಲ್ಲಿ ಶುಕ್ರವಾರ ಬಂಧಿತರಾಗಿದ್ದಾರೆ.
ಷರೀಫ್ ಅವರ ಮೊಮ್ಮಕ್ಕಳಾದ ಜುನೇದ್ ಸಫ್ದರ್ ಮತ್ತು ಝಕಾರಿಯಾ ಹುಸೇನ್ ಎಂಬಿಬ್ಬರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಜುನೇದ್ ಸಫ್ದರ್, ಬಂಧನಕ್ಕೆ ಸಿದ್ಧಳಾಗಿರುವ ಮರ್ಯಮ್ ಅವರ ಮಗನಾಗಿದ್ದರೆ, ಝಕಾರಿಯಾ ಹುಸೇನ್, ಷರೀಫ್ ಅವರ ಮಗ ಹುಸೇನ್ ನವಾಜ್ ಅವರ ಮಗ.

ಲಂಡನ್ ನಲ್ಲಿರುವ ನವಾಜ್ ಷರೀಫ್ ಅವರ ನಿವಾಸದೆದಿರುವ ಪ್ರತಿಭಟನಾಕಾರರು ಗುರುವಾರ ಧಿಕ್ಕಾರ ಕೂಗುತ್ತಿದ್ದರು. ಆಗ ಪ್ರತಿಭಟನಾಕಾರರ ಮೇಲೆ ಜುನೇದ್ ಮತ್ತು ಝಕಾರಿಯಾ ಹಲ್ಲೆ ಮಾಡಿದ್ದಾರೆ. ಹಲವರು ಇದನ್ನು ತಡೆಯಲು ಯತ್ನಿಸಿದರೂ ಪ್ರತಿಭಟನಾಕಾರರನ್ನು ಬೆನ್ನತ್ತಿ ಇವರಿಬ್ಬರು ಹಲ್ಲೆ ಮಾಡಿದ್ದಾರೆ.
#WATCH: Junaid Safdar & Zakaria Hussain, grandsons of former Pakistan PM Nawaz Sharif, arrested by London police for punching a demonstrator outside their residence in Park Lane yesterday. Junaid Safdar is the son of Maryam Nawaz & Zakaria Hussain is the son of Hussain Nawaz pic.twitter.com/FTEy3Rskkt
— ANI (@ANI) July 13, 2018
ಬಾಯಿಗೆ ಬಂದಂತೆ ಬೈಗುಳವನ್ನು ಹೊರಹಾಕಿದ ಅವರಿಬ್ಬರು ಕೈಗೆ ಸಿದ್ದ ವಸ್ತುವಿನಿಂದಲೂ ಹಲ್ಲೆಗೆ ಯತ್ನಿಸಿದ್ದಾರೆ. ಅಬುಧಾಬಿಯಿಂದ ಲಾಹೋರ್ ಗೆ ಕರಂತಂದಿರುವ ಅಜ್ಜ ಮತ್ತು ಮಗಳ ಬಂಧನಕ್ಕೂ ಮೊದಲೇ ಷರೀಫ್ ಅವರ ಇಬ್ಬರು ಮೊಮ್ಮಕ್ಕಳ ಬಂಧನವಾಗಿದೆ.
ಕಣ್ಣು ತೆರೆದ ಹೆಂಡತಿ : ಕುಟುಂಬಕ್ಕೆ ಸಂಬಂಧಿಸಿದಂತೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿರುವಾಗ ಲಂಡನ್ ನ ನಿವಾಸದಲ್ಲಿ ತಿಂಗಳಿನಿಂದ ಕೋಮಾದಲ್ಲಿಯೇ ಇದ್ದ ಷರೀಫ್ ಅವರ ಹೆಂಡತಿ ಕುಲ್ಸೂಮ್ ಅವರು ಕೋಮಾದಿಂದ ಹೊರಬಂದಿದ್ದು, ಕಣ್ಣು ತೆರೆದಿದ್ದಾರೆ. ಆದರೆ, ಈ ಸಂತಸ ನೋಡಲು ಷರೀಫ್ ಅವರು ಲಂಡನ್ ನಲ್ಲಿಲ್ಲ, ಲಾಹೋರ್ ನಲ್ಲಿ ಜೈಲು ಸೇರಲಿದ್ದಾರೆ.












Click it and Unblock the Notifications